ಸಿಂದಗಿ:ಆಯಾ ಮತಕ್ಷೇತ್ರದ ಶಾಸಕರು ವರದಿ ವಿಚಾರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಸಮಾಜದ ಮುಖಂಡರು ಮನವಿ ಸಲ್ಲಿಸಿದ್ದಾರೆ. ಇದೇ ವಿಚಾರವಾಗಿ ಬಹುದಿನಗಳ ಬೇಡಿಯಾಗಿರುವ ಮಾದಿಗರ ಒಳಮೀಸಲಾತಿ ಕುರಿತು ಸಿಂದಗಿ ಶಾಸಕ ಅಶೋಕ ಮನಗೂಳಿ ಅಧೀವೇಶನದಲ್ಲಿ ಧ್ವನಿ ಎತ್ತಬೇಕು. ನ್ಯಾ:ನಾಗಮೋಹನದಾಸ ಅವರ ವರದಿಯನ್ನು ಯಥವತ್ತಾಗಿ ಜಾರಿಗೆಯಾಗಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ತಹಶೀಲ್ದಾರ್ ಅವರ ಮುಖಾಂತರ ಮಾದಿಗ ಸಮಾಜದ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಸಿದ್ದು ಪೂಜಾರಿ, ಯಲ್ಲು ಇಂಗಳಗಿ, ರಾಜಕುಮಾರ ಭಾಸಗಿ, ಭೀಮು ರತ್ನಾಕರ, ಭೀಮು ಗುಬ್ಬೇವಾಡ, ಏಕನಾಥ ದ್ವಾಸ್ಯಾಳ, ನಾಗು ಕಟ್ಟಿಮನಿ, ರವಿ ಹೊಸಮನಿ, ಅರವಿಂದ ಹಡಗಲಿ, ಕುಮಾರ ಗಣಿಹಾರ, ಶರಣು ಖೈನೂರ, ಮುಖೇಶ ಬಡಿಗೇರ ಸೇರಿದಂತೆ ಸಮಾಜ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.