ರಾಮದುರ್ಗ: ನ್ಯಾಶನಲ್ ಎಜ್ಯುಕೇಶನ ಟ್ರಸ್ಟ್‌ನ್ ಪಟ್ಟಣದ ಕ್ಯಾಂಬ್ರೀಡ್ಜ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿಯ ದಿನವನ್ನು ಆಚರಣೆ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ವಿಶ್ವ ಹಿಂದೂ ಪರಿಷತ್ ತಾಲೂಕಾ ಸೇವಾ ಪ್ರಮುಖ ಸಂಗಮೇಶ ಉದುಪುಡಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ, ಶ್ರೀಕೃಷ್ಣನ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ರೊಕ್ಕದಕಟ್ಟಿ ಹಾಗೂ ಎಲ್ಲ ಶಿಕ್ಷಕ ವೃಂದದವರು ಮತ್ತು ಮುದ್ದು ವಿದ್ಯಾರ್ಥಿಗಳು ಹಾಗೂ ಪಾಲಕರ ಉಪಸ್ಥಿತರಿದ್ದರು. ಕೃಷ್ಣಜನ್ಮಾಷ್ಠಮಿ ನಿಮಿತ್ಯ ಶ್ರೀಕೃಷ್ಣನ ಹಾಗೂ ರಾಧೆಯ ವೇಷಭೂಷಣದಲ್ಲಿ ಕಾಣಿಸಿಕೊಂಡು ಜಯಂತೋತ್ಸವಕ್ಕೆ ಮೆರಗು ನೀಡಿದರು.
