ಇಂಡಿ : ಹೊರ ರಾಜ್ಯದಲ್ಲೂ ಲಕ್ಷಾಂತರ ಭಕ್ತ ಗಣ ಹೊಂದಿರುವ ಪವಾಡ ಪುರುಷ ಭಕ್ತರ ಪಾಲಿನ ಕಲ್ಪವೃಕ್ಷ ಲಚ್ಯಾಣದ ಸಿದ್ದಲಿಂಗ ಮಹಾರಾಜರ ವೃತ್ತ ಇಂಡಿಯಲ್ಲಿ ನಿರ್ಮಾಣ ಮಾಡುತ್ತಿರುವದು ಶ್ರೇಷ್ಟ ಕಾರ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯ ಡಿ.ಸಿ.ಸಿ ಬ್ಯಾಂಕು ಎದುರಿಗೆ ನಿರ್ಮಿಸಲಾಗುವ ಸಿದ್ದಲಿಂಗೇಶ್ವರ ವೃತ್ತಕ್ಕೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.
ಲಚ್ಯಾಣದಲ್ಲಿರುವಂತೆ ಸಿದ್ದಲಿಂಗ ಮಹಾರಾಜರ ಮಠ ಕಣ್ಣಿ ಗುರುಗಳು ಇಂಡಿಯಲ್ಲಿ ಕಟ್ಟಿದ್ದು ಅದಕ್ಕೆ ವಿಜಯಪುರ ರಸ್ತೆಯಲ್ಲಿ ಮಹಾದ್ವಾರ ಮತ್ತು ಸಿದ್ದಲಿಂಗ ಮಹಾರಾಜರ ವೃತ್ತ ನಿರ್ಮಿಸುತ್ತಿರುವದು ಶ್ರೇಷ್ಠ ಕಾರ್ಯ ಎಂದರು.
ಬಸವರಾಜ ಕಣ್ಣಿ ಗುರುಗಳು ಮಾತನಾಡಿ ಪವಾಡಗಳನ್ನು ಮಾಡಿ ಭಕ್ತರ ಮನ ಗೆದ್ದವರು, ಮತ್ತು ಸಿದ್ದಲಿಂಗರ ಉಪದೇಶ ಪಡೆದು ಕೃತಾರ್ಥರಾದವರು ಅಸಂಖ್ಯಾತ ಭಕ್ತರು ಎಂದರು. ಸುಮಾರು ೧೦ ರೂ ವೆಚ್ಚದಲ್ಲಿ ನಾನೇ ಸ್ವತಃ ಖರ್ಚುಮಾಡಿ ವೃತ್ತ ನಿರ್ಮಿಸುತ್ತೀದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮುತ್ತು ದೇಸಾಯಿ, ಜಗದೀಶ ಕ್ಷತ್ರಿ, ಚಂದು ಶಿವೂರ, ಅಜೀತ ಜೀರಗೆ, ಸಂಗಮೇಶ ಕಕ್ಕಳಮೇಲಿ, ಎಸ್.ಎಸ್.ಮುರಾಳ ಗುರುಗಳು, ಶಿವಕುಮಾರ, ಕಣ್ಣಿ, ಜಾವೇದ ಮೋಮಿನ ಮತ್ತು ಶ್ರೀ ಸಿದ್ದಲಿಂಗೇಶ್ವರ ಪ್ರಾಢಶಾಲೆಯ ವಿದ್ಯಾರ್ಥಿಗಳು ಇದ್ದರು.
