ಹುನಗುಂದ; ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗದಲ್ಲಿ ನಡೆಯುತ್ತಿವೆ. ಕೆಲವರು ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ತಾಲೂಕಿನ ನಾಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಲಾಕರ್ ಉದ್ಘಾಟನೆ ಹಾಗೂ ನೂತನ ಮಳಿಗೆಗಳ ಅಡಿಗಲ್ಲು ಸಮಾರಂಭದ ಅಧ್ಯಕ್ಷ ತೆವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿಯೇ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದೆ ಜೊತಗೆ ರೈತರಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಪ್ರಮಾಣದ ಬೆಳೆ ಸಾಲ ನೀಡಲು ಆರ್‌ಬಿಐ ನಿಯಮಗಳು ಅಡ್ಡಿಯಾಗಿವೆ. ಮುಂಬರುವ ದಿನಗಳಲ್ಲಿ ರೈತರಿಗೆ ನೀಡುವ ಬೆಳೆ ಸಾಲವನ್ನು ೫೦ ಸಾವಿರ ದಿಂದ ಒಂದು ಲಕ್ಷಕ್ಕೆ ಹೆಚ್ಚಿಸಲಾಗುವುದು. ಮಳಿಗೆಗಳು ನಿರ್ಮಾಣಕ್ಕೆ ರೂ. ೨೦ ಲಕ್ಷ ಅನುದಾನ ನೀಡಲಾಗುವುದು ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕರಿಸಂಗಪ್ಪ ನರಸಾಪೂರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಮ್ಮ ಸಂಘ ಪ್ರಗತಿ ಕಾಣುತ್ತಿದೆ. ಸಂಘದಿಂದ ಬೆಳೆ ಸಾಲ, ಬಂಗಾರ, ಜಾಮೀನು ಸಾಲ ನೀಡಲಾಗುತ್ತಿದೆ. ಉಳಿತಾಯ ಹಣವನ್ನು ಹೆಚ್ಚಿಸಿದ್ದೇವೆ. ಮಳಿಗೆಗಳ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಶಾಸಕರು ಅನುದಾನ ನೀಡಬೇಕು ಎಂದರು.
ಗ್ರಾಮದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕೊಠಡಿಗಳ ನಿರ್ಮಾಣ, ದನದ ದವಾಖಾನೆ, ಬಸ್ ನಿಲ್ದಾಣ ನಿರ್ಮಾಣ, ರಸ್ತೆ ದುರಸ್ಥಿ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಯಲ್ಲಿ ವೈದ್ಯರ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಗ್ರಾಮಸ್ಥರ ಬೇಡಿಕೆಗಳನ್ನು ಒಂದು ವ?ಗಳ ಒಳಗಾಗಿ ಈಡೇರಿಸುವುದಾಗಿ ಬರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಗವ್ವ ಮಾದರ, ಸಂಘದ ಉಪಾಧ್ಯಕ್ಷ ಬಸವರಾಜ ನರಗುಂದ, ಮಹಾಂತೇಶ ನಾಡಗೌಡ, ಹುನಗುಂದ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಿ.ಎಸ್. ಪಾಟೀಲ, ಮಹಾಂತೇಶ ಮುರುಡಿ, ಬಸವರಾಜ ಹೊಸಮನಿ, ಸಂಗಪ್ಪ ಹೂಲಗೇರಿ, ಮುಖ್ಯ ಕಾರ್ಯನಿರ್ವಾಹಕ ಮಲ್ಲಪ್ಪ ಹುಬ್ಬಳ್ಳಿ ನಾಗೂರ ಮತ್ತು ಯಡಹಳ್ಳಿ ಗ್ರಾಮದ ಶೇರೂದಾರರು ಭಾಗವಹಿಸಿದ್ದರು ಸ್ವಾಗತವನ್ನು ಮಾಂತೇಶ್ ದ್ಯಾಮನಗುಡಿ ಮಲಕಾಜಗೌಡ ಪರೂತಗೌಡರ ನಿರೂಪಿಸಿ ವಂದಿಸಿದರು.
ನೂತನ ಮಳಿಗೆಗಳ ಕಾಮಗಾರಿಗೆ ಕಾಶಪ್ಪನವರ ಅಡಿಗಲ್ಲು
