ಇಂಡಿ: ನಮ್ಮ ಸಹಕಾರಿ ಸಂಘದಿಂದ ಸಾಲ ಪಡೆದುಕೊಂಡ ಪ್ರತಿಯೊಬ್ಬ ರೈತರು ಸಕಾಲಕ್ಕೆ ಸಾಲ ಮರು ಪಾವತಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಸಂಘದಲ್ಲಿ ಯಾವುದೆ ಅವೇವಹಾರವಾಗದಂತೆ ನೋಡಿಕೊಳ್ಳುತ್ತಿದ್ದು ಇಲ್ಲಿ ಪಾರದರ್ಶಕವಾಗಿ ಆಡಳಿತ ನಡೆಯುತ್ತಿದೆ ಎಂದು ಪಿಕೆಪಿಎಸ್ ಅಧ್ಯಕ್ಷ ಪ್ರಭು ಹೊಸಮನಿ ಹೇಳಿದರು.
ಅವರು ತಾಲೂಕಿನ ಇಂಗಳಗಿ ಗ್ರಾಮದ ಶ್ರೀ ಅಲ್ಲಮಪ್ರಭು ಆವರಣದಲ್ಲಿ ಹಮ್ಮಿಕೊಂಡ ವಿವಿಧ್ದೋಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರಿ ಸಂಘ ನಿಯಮಿತದ ವಾರ್ಷಿಕ ಸರ್ವ ಸಾಧಾರಣ ಮಹಾಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದರು.
ಕಳೇದ ಹಲವಾರು ವರ್ಷಗಳಿಂದ ನಷ್ಟ ಅನುಭವಿಸುತ್ತಾ ಬಂದಿತ್ತು. ಪ್ರಸ್ತೂತ ಲಾಭದಲ್ಲಿ ನಮ್ಮ ಸಂಘ ಮುನ್ನಡೆಸಿಕೊಂಡು ಹೋಗುತ್ತಿದ್ದೆವೆ. ಆದ್ದರಿಂದ ರೈತರು ಕಿರು ಹಾಗೂ ದಿರ್ಘಾವಧಿ, ಒಡಿ ಸಾಲಗಳನ್ನು ಪಡೆದು ಸಕಾಲಕ್ಕೆ ಮಹರುವಾತಿಸಬೇಕು. ಸರ್ಕಾರ ರೈತರಿಗಾಗಿ ನೀಡುವ ಶೂನ್ಯ ಬಡ್ಡಿ ರಹಿತ ಸಾಲದ ಸದುಪಯೋಗ ಪಡೇದುಕೊಳ್ಳಬೇಕು ಎಂದರು.
ವೇದಿಕೆ ಮೇಲೆ ಉಪಾದ್ಯಕ್ಷ ಶ್ರೀಮಂತ ಗುಂದವಾನ, ನಿರ್ದೇಶಕರಾದ ಆನಂದ ಪವಾರ, ಮೈಬುಬು ಜಮಾದಾರ, ಧರ್ಮೇಂದ್ರ ಚಾಬುಕಸವಾರ, ಪ್ರಭು ವಾಲಿಕಾರ, ಸಿದ್ದು ಹಂದ್ರಾಳ, ಶಿವು ಪೂಜಾರಿ, ಪಾಂಡುರಂಗ ಜಾಧವ, ವಿಠ್ಠಲ ಬನಸೋಡೆ, ಕಲ್ಲಪ್ಪ ಮುಚ್ಚಂಡಿ, ನಾಮ ನಿರ್ದೇಶಕ ಸದಸ್ಯರಾದ ಸುರ್ಯಕಾಂತ ಕುಂಬಾರ, Pಇತರರು ಇದ್ದರು.
ವಾರ್ಷಿಕ ವರದಿಯನ್ನು ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಿಷ್ಣು ವಾಘಮೊಡೆ ವಾಚಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಜಾಧವ, ಶಿವಗೊಂಡ ಹೂಗಾರ, ಶಿವಪುತ್ರ ಬೆನಕನಹಳ್ಳಿ, ಅರ್ಜುನ ಜಾಧವ, ಗುರುಬಾಳ ಪೂಜಾರಿ, ಅಣ್ಣಪ್ಪ ಅಹಿರಸಂಗ, ಸುಭಾಸ ಥೋರತ, ಭೀಮಾಶಂಕರ ಹೊಸಮನಿ, ಮಾಧವರಾವ ಪವಾರ, ಮಲ್ಲಿಕಾರ್ಜುನ ಲಿಗಾಡೆ, ಗುಡುಸಾಬ ಅಹೀರಸಂಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಾಜಕುಮಾರ ಚಾಬುಕಸವಾರ ಸ್ವಾಗತಿಸಿ ನಿರೂಪಿಸಿದರು.