ಹುನಗುಂದ; ಶಿಸ್ತಿನ ಸಿಪಾಯಿಯಾಗಿ ರಾಜ್ಯ ಮತ್ತು ದೇಶವು ವಿವಿದ ಕ್ಷೇತ್ರಗಳಲ್ಲಿ ಅಭಿವೃದ್ದಿಯ ಗುರಿಯನ್ನು ಇಟ್ಟುಕೊಂಡು ಮಾಜಿ ಶಾಸಕ ಲಿಂ. ಶಿವಸಂಗಪ್ಪ ಕಡಪಟ್ಟಿ ಅವರು ರಾಮಕೃಷ್ಣ ಹೆಗಡೆಯವರ ಸಾಲಿನಲ್ಲಿ ರಾಜಕಾರಣ ಮಾಡಿ ಹೆಸರಾಗಿದ್ದರು ಎಂದು ಹೊಸಪೇಟೆ ತುಂಗಭದ್ರಾ ಕಾಡಾ ಅಧ್ಯಕ್ಷ ಮತ್ತು ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಹಸನಸಾಬ ದೋಟಿಹಾಳ ಹೇಳಿದರು. ನಗರದ ಶ್ರೀ ಮಾತಾ ಉಜ್ಯುಕೇಶನ್ ಮತ್ತು ರೂರಲ್ ಡೆವಪ್‌ಮೆಂಟ್ ಟ್ರಷ್ಟ , ಎಸ್.ಎಸ್. ಕಡಪಟ್ಟಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ದಲ್ಲಿ ಶನಿವಾರ ನಡೆದ ಮಾಜಿ ಶಾಸಕ ಲಿಂ. ಶಿವಸಂಗಪ್ಪ ಸಿದ್ದಪ್ಪ ಕಡಪಟ್ಟಿ ಇವರ ೩೫ನೇ ಸ್ಮರಣೋತ್ಸವ ಕಾರ್‍ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತ ಶಾಸಕರಾಗಿದ್ದರೂ ಸಹಿತ ಅಪರ ಸ್ನೇಹ ಜೀವಿಯಾಗಿ ಕ್ಷೇಥ್ರದಿಂದ ಬೆಂಗಳೂರ ಶಾಸಕರ ಭವನಕ್ಕೆ ಬಂದವರನ್ನು ತಮ್ಮ ಕೊಠಡಿಯಲ್ಲಿ ಇರಿಸಿಕೊಂಡು ಅವರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಜೊತೆಗೆ ರಾಯಚೂರ ಜಿಲ್ಲೆಯ ಕುಷ್ಟಗಿಯನ್ನು ತೋಟಗಾರಿಕೆ ಪ್ರದೇಶವೆಂದು ಗುರುತಿಸಿದ್ದು ಲಿಂ. ಕಡಪಟ್ಟಿಯವರು ಅವರ ಸಾಧನೆಯನ್ನು ನಾವೆಂದು ಮರೆಯುವಂತಿಲ್ಲ ಎಂದು ದೋಟಿಹಾಳ ಆತ್ಮೀಯ ಅನುಭವ ಹಂಚಿಕೊಂಡರು. ಲಿಂಗಸ್ಗೂರು ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಮಾತನಾಡಿ ಅಂದಿನ ಮತ್ತು ಇಂದಿನ ಶಾಸಕರುಗಳ ಬಗ್ಗೆ ಇರುವ ವ್ಯತ್ಯಾಸ ಎಲ್ಲರಿಗೂ ತಿಳಿದಿದೆ. ಜನಪ್ರತಿನಿಧಿ ಮತ್ತು ಶಾಸಕರಾಗಿ ಹೇಗೆ ಇರಬೇಕು ಎನ್ನುವದನ್ನು ಶಿವಸಂಗಪ್ಪ ಕಡಪಟ್ಟಿಯರನ್ನು ನೋಡಿ ನಾವು ಕಲಿತಿದ್ದೇವೆ. ಅವರನ್ನು ಮತ್ತು ಕಂಠಿಯವರು ಅಧಿಕಾರದಲ್ಲಿದ್ದಾಗ ನಿಸ್ವಾರ್ಥ ಸೇವೆ ಮಾಡಿ ಮಾದರಿಯಾಗಿದ್ದಾರೆ. ಇಲಕಲ ಬಸ್ ಘಟಕ ನಿರ್ಮಾಣ ಮತ್ತು ಕುಡಿಯುವ ನೀರು ಒದಗಿಸಿದ್ದು ಶಿವಸಂಗಪ್ಪ ಕಡಪಟ್ಟಿಯವರು. ಇತ್ತೀಚೆಗೆ ಬೇರೆಯವರು ಮಾಡಿದ್ದಾರೆ ಎಂದರು. ಕುಷ್ಟಗಿಯ ಪ್ರಗತಿಪರ ರೈತ ಡಾ. ದೇವೇಂದ್ರಪ್ಪ ಬಳೂಟಗಿ ಸನ್ಮಾನಗೊಂಡು ಮಾತನಾಡಿ ಕೃಷಿ ಬೆಳೆಯಲ್ಲಿ ಸಾಕಷ್ಟು ಅನುಭವ ಹೊಂದಿದ ಮಾಜಿ ಶಾಸಕ ಲಿಂ. ಶಿಸಂಗಪ್ಪ ಕಡಪಟ್ಟಿ ಅವರು ಬರಡು ಮತ್ತು ಬಂಜರು ಭೂಮಿಯನ್ನು ಪಲವತ್ತಗೊಳಿಸಿ ಚಿನ್ನದಂತ ಬೆಳೆ ಬೆಳೆದು ಹೆಸರಾದವರು. ೬೦೦ ಎಕರೆ ಭೂಮಿ ಹೊಂದಿದ ನನಗೆ ಕೃಷಿಯಲ್ಲಿ ವಿವಿದ ಬೆಳೆ ಮತ್ತು ದಾಳಿಂಬೆ, ಮಾವು, ರಕ್ತ ಚಂದನ, ಏಲಕ್ಕಿ, ಮೆಣಸು, ಕಾಫಿ, ಅಡಿಕೆ, ಶ್ರೀಗಂಧ ಮತ್ತು ತೇಗು ಬೇರೆ ಹಣ್ಣು ಬೆಳೆಯಲು ಲಿಂ. ಕಡಪಟ್ಟಿ ಅಣ್ಣಾವ್ರು ಪ್ರೆರೇಪಣೆ ನೀಡಿದ್ದಾರೆ. ದೇಶದ ಕೃಷಿ ಕಾಯಕವನ್ನು ಅತೀಯಾಗಿ ಗೌರವಿಸಿದ ಅವರು ಕೃಷಿಯಿಂದಲೆ ದೇಶ ಅಭಿವೃದ್ದಿ ಎಂಬ ದೃಷ್ಟಿಕೋನದಲ್ಲಿ ಅವರ ಮಾರ್ಗದರ್ಶನದಿಂದಲೆ ನಾನು ಕೃಷಿಯಲ್ಲಿ ಪಳಗಿ ಅನುಭವ ಕೃಷಿ ಕ್ಷೇತ್ರದಲ್ಲಿ ಡಾಕ್ಟರೇಟ ಪದವಿ ಪಡೆದಿದ್ದೇನೆಂದು ಎಂದು ಅವರ ಜೊತೆಗಿನ ಅನುಭವ ಹಂಚಿಕೊಳ್ಳುತ್ತ ವಿವಿದ ಕ್ಷೇತ್ರದ ಅನುಭವಿಕರನ್ನು ಗೌರವಿಸುತ್ತ ಕಡಪಟ್ಟಿಯವರು ಅನುಭವ ಮತ್ತು ಮುತ್ಸದ್ದಿ ರಾಜಕಾರಣಿಯಾಗಿದ್ದರೆಂದು ದೇವೇಂದ್ರಪ್ಪ ತಿಳಿಸಿದರು. ಶ್ರೀ ಎಸ್.ಎಸ್. ಕಡಪಟ್ಟಿ ಮೆಮೋರಿಯಲ್ ಹಾಸ್ಪಟಲ್ ಇಲಕಲ್ಲ ಇವರಿಂದ ಉಚಿತ ಆರೊಗ್ಯ ತಪಾಸಣಾ ಶಿಬಿರ ನಡೆಯಿತು. ಬಸವರಾಜ ಕಡಪಟ್ಟಿ, ಡಾ. ಮಹಾಂತೇಶ ಕಡಪಟ್ಟಿ ಮತ್ತು ಚನ್ನಬಸವರಾಜ ಕಡಪಟ್ಟಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸಾಯಿ ಕೃಷ್ಣನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಂಗು ಮಠ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಆರೋಗ್ಯ ಶಿಬಿರದಲ್ಲಿ ತಜ್ಞ ವೈದ್ಯರಿಂದ ಸಕ್ಕರೆ ರೊಗ, ರಕ್ತದೊತ್ತಡ, ಹೃದಯ ರೋಗ ಮತ್ತು ಇಸಿಜಿ ತಪಾಷಣೆ ನಡೆಯಿತು. ಕಾರ್‍ಯಕ್ರಮ ಮೊದಲು ಲಿಂ. ಶಿಸಂಗಪ್ಪ ಕಡಪಟ್ಟಿ ಅವರ ಭಾವಚಿತ್ರಕ್ಕೆ ಪುಪ್ಷಾರ್ಚನೆ ನಡೆಯಿತು. ಬಾಕ್ಸ್; ಕ್ಷಮತೆ ಮತ್ತು ಸೇವೆಯಿಂದ ರಾಜಕಾರಣ ಮಾಡಿ ಕೃಷಿ ಉತ್ಪತ್ತಿ, ಕಾರ್ಮಿಕ ವರ್ಗ ಕ್ಷೇಮದಿಂದರಲು, ಕೃಷಿಗೆ ಹೀಗೆ ಉತ್ಪಾದನೆ ವರ್ಗಕ್ಕೆ ಸಹಾಯ ಮಾಡುವದೆ ರಾಜಕೀಯ ಸೇವಾ ವರ್ಗವಾಗಿದೆ. ಉತ್ಪಾದನೆ ವರ್ಗದ ಮೇಲೆ ಒಡೆತನ ಸಾದಿಸದೆ ಇರುವದು ಸೇವಾ ವರ್ಗ. ಹೀಗೆ ಬಹು ಕ್ಷೇತ್ರದಲ್ಲಿ ನಿಷ್ಟೆ, ಶ್ರದ್ಧೆ ಮತ್ತು ಭಕ್ತಿಯಿಂದ ಮಾಜಿ ಶಾಸಕ ಲಿಂ. ಶಿವಸಂಗಪ್ಪ ಕಡಪಟ್ಟಿಯವರು ಎಲ್ಲ ಕ್ಷೇತ್ರದಲ್ಲಿಯು ಆದರ್ಶ ವ್ಯಕ್ತಿಗಳಾಗಿದ್ದರು. ಗುರುಮಹಾಂತ ಶ್ರೀಗಳು ಚಿತ್ತರಗಿ ಸಂಸ್ಥಾನಮಠ ಹುನಗುಂದ.