ಹುನಗುಂದ,01- ಜೀವನದಲ್ಲಿ ಆಕಸ್ಮಿಕ ಅನಾರೋಗ್ಯ ಬಂದರೆ ವೈಧ್ಯಕೀಯ ಸೇವೆ ಫಲಕಾರಿಯಾಗಿ ರೋಗದಿಂದ ಗುಣರಾಬಹುದು ಆದರೆ ದುಶ್ಚಟಗಳ ದಾಸರಾಗಿ ನಾವೆ ಆರೋಗ್ಯ ಹಾಳು ಮಾಡಿಕೊಂಡರೆ ಯಾವ ಚಿಕಿತ್ಸೆಯು ಫಲಿಸದೆ ಅನ್ಯಾಯವಾಗಿ ಜೀವನ ಹಾಳಾಗುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಮತ್ತು ಸಂಚಾರ ನ್ಯಾಯಾಲಯದ ನ್ಯಾಯಾದೀಶರಾದ ಜಿ.ಎ.ಮೂಲಿಮನಿ ಹೇಳಿದರು.
ಇಲ್ಲಿನ ಬಸವ ಮಂಟಪದಲ್ಲಿ ಶ್ರೀ ವಿಜಯ ಮಹಾಂತೇಶ ವಿದ್ಯವರ್ಧಕ ಸಂಘದ ಅಡಿಯಲ್ಲಿ ನಡೆಯುವ ಎಲ್ಲ ಅಂಗ ಸಂಸ್ಥೆಗಳ ಮತ್ತು ನಗರದ ವಿವಿದ ಸಂಸ್ಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಚಿತ್ತರಗಿ ಸಂಸ್ಥಾನಮಠದ ಲಿಂ. ಡಾ. ವಿಜಯಮಹಾಂತೇಶ ಶ್ರೀಗಳ ಜನ್ಮದಿನ ಮತ್ತು ವ್ಯಸನಮುಕ್ತ ದಿನಾಚರಣೆ ಕಾರ್‍ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತ ಶರಣ ಸಂತರ ಆದಿಯಾಗಿ ಸಮಾಜ ಅರೋಗ್ಯದಿಂದ ಇರಲು ಸಾಕಷ್ಟು ಶ್ರಮಿಸಿದ್ದಾರೆ. ದೇಶದ ಜನತೆ ಆರೋಗ್ಯ ನ್ಯೂನ್ಯತೆಯಿಂದ ಬಳಲದೆ ಸದೃಢರಾಗಿರಬೇಕು. ಕೊಲ್ಲುವ ಹಕ್ಕು ಯಾರಿಗೂ ಇಲ್ಲ ಮತ್ತೊಬ್ಬರನ್ನು ಬದುಕಿಸುವ ಹಕ್ಕು ಮನುಷ್ಯನಿಗಿದೆ. ಆ ನಿಟ್ಟಿನಲ್ಲಿ ಚಿತ್ತರಗಿ ಪೀಠದ ಬಸವ ತತ್ವ ಹರಿಕಾರರು ಲಿಂ.ಡಾ ವಿಜಯಮಹಾಂತ ಶ್ರೀಗಳು ದಣಿವರಿಯದೆ ನಾಡಿನಾದ್ಯಂತ ಸಂಚರಿಸಿ ಭಕ್ತರ ಮನೆಗೆ ತೆರಳಿ ಜೋಳಿಗೆ ಮೂಲಕ ದುಶ್ಚಟಗಳನ್ನು ಬೇಡಿ ಎಲ್ಲರ ಆರೋಗ್ಯ ಕಾಪಾಡಲು ಶ್ರಮಿಸಿದ್ದಾರೆ. ಅವರ ಮಹತ್ತರ ಆಶಯದಂತೆ ಹಿರಿಯರು, ಯುವಕರು ಚಟಗಳಿಂದ ಮುಕ್ತಗರಾಗಿ ವಿವಿದ ಬಗೆಯ ಸಾಮಾಜಿಕ ಕಾರ್‍ಯಗಳಲ್ಲಿ ತೊಡಗಬೇಕು ಎಂದು ನ್ಯಾಯಾಧೀಶರಾದ ಮೂಲಿಮನಿ ತಿಳಿಸಿದರು. ವಿಮವಿವ ಸಂಘದ ಕಾರ್‍ಯಾಧ್ಯಕ್ಷ ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆಲವು ವಸ್ತುಗಳ ಮೇಲೆ ಆರೋಗ್ಯಕ್ಕೆ ಹಾನಿಕಾರ ಎಂದು ಬರೆದರೂ ಸಹಿತ ಲೆಕ್ಕಿಸದೆ ಬಳಸಿ ತಿಳಿದೂ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾರೆ. ಚುನಾವಣೆ ಬಂತೆಂದರೆ ಸಾಕು ಯುವಪೀಳಿಗೆ ಮಧ್ಯ ಮತ್ತು ಧೂಮಪಾನಕ್ಕೆ ಹಾಳಾಗುತ್ತಿದ್ದಾರೆ. ಯಾರ ಒತ್ತಾಸೆಗೆ ಒಳಗಾಗದೆ ಸ್ವಯಂಪ್ರೇರಣೆಯಿಂದ ದುಶ್ಚಟಗಳನ್ನು ಬಿಟ್ಟು ಜೀವನದುದ್ದಕ್ಕೂ ಆರೋಗ್ಯವಂತರಾಗಬೇಕು ಎಂದರು. ಶಿರೂರ ಮಹಾಂತ ತೀರ್ಥದ ಡಾ. ಬಸವಲಿಂಗ ಶ್ರೀಗಳು ಸಾನಿಧ್ಯವಹಿಸಿ ಪ್ರಮಾಣ ವಚನ ಭೋದಿಸಿದರು. ನ್ಯಾಯಾಧೀಶರಾದ ಹನಮಂತರಾವ್ ಕುಲಕರ್ಣಿ, ಬಸವರಾಜ ನೇಸರಗಿ, ಮಹಾಂತೇಶ ಮಠದ ಮತ್ತು ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಾಪ್ಪ ಕಿರಸೂರ ಉಪಸ್ಥಿತರಿದ್ದರು. ವಿಮಸಂಘದ ಗೌರವ ಕಾರ್‍ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ನಗರದ ಯುವಕರು ರಕ್ತದಾನ ಶಸಿಬಿರದಲ್ಲಿ ಭಾಗವಹಿಸಿದ್ದರು. ಮತ್ತು ರಕ್ತತಪಾಷಣೆ ನಡೆಯಿತು. ಡಾ. ಸುನೀಲ ಬೈರಗೊಂಡ, ಮಾದರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಮುಖ್ಯ ಶಿಕ್ಷಕ ಬಿ.ಎಸ್. ಬನ್ನಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಪಿ.ಎಂ. ಅಕ್ಕಿ ನಿರೂಪಿಸಿ ವಂದಿಸಿದರು
ಶರಣರು ಸಮಾಜ ಅರೋಗ್ಯದಿಂದ ಇರಲು ಸಾಕಷ್ಟು ಶ್ರಮಿಸಿದ್ದಾರೆ : ನ್ಯಾ. ಜಿ.ಎ.ಮೂಲಿಮನಿ
