“ಗುರುವಿನ ಸನ್ಮಾರ್ಗದಲ್ಲಿ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ”

Pratibha Boi
“ಗುರುವಿನ ಸನ್ಮಾರ್ಗದಲ್ಲಿ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ”
WhatsApp Group Join Now
Telegram Group Join Now

ಯರಗಟ್ಟಿ: ಮಾನವನ ಪಾಪ ಕಳೆಯುವ ಸಾಮಥ್ಯ ಗುರುವಿಗೆ ಮಾತ್ರ ಇದೆ. ಗುರುವಿನ ಸನ್ಮಾರ್ಗದಲ್ಲಿ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಇಂಚಲ ಶಿವಯೋಗೇಶ್ವರ ಸಾಧು ಸಂಸ್ಥಾನ ಮಠದ ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿ ಹೇಳಿದರು.
ಸಮೀಪದ ಜೀವಾಪೂರ ಗ್ರಾಮದಲ್ಲಿ ಮಂಗಳವಾರ ನೂತನವಾಗಿ ನಿರ್ಮಿಸಿದ ಶ್ರೀ ದ್ಯಾಮಮ್ಮದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ದೇವಿಯ ಮೂರ್ತಿ ಪ್ರಾಣಪ್ರತಿ?ಪನಾ ಹಾಗೂ ಕಳಸಾರೋಹಣ ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದ ಅವರು, ಪರೋಪಕಾರ, ಪುಣ್ಯಕಾರ್ಯಗಳು ಸೃಷ್ಟಿ ಸಹಜವಾಗಿ ನಡೆಯಬೇಕು. ನನ್ನಿಂದ ಎಂಬ ಭಾವ ಬಂದಲ್ಲಿ ಕೇಡು ತಪ್ಪಿದ್ದಲ್ಲ, ಸೂರ್ಯ ಚಂದ್ರರು, ಮರಗಳು, ನದಿಗಳು ಮತ್ತು ಸಜ್ಜನರು ಇತರರಿಗೆ ಉಪಕಾರ ಮಾಡಲೆಂದೇ ಭಗವಂತ ಸೃಷ್ಟಿಸಿದ್ದಾನೆ. ಗುರುವಿನ ಅನುಗ್ರಹದಿಂದ ಜೀವನ ಅರ್ಥಪೂರ್ಣವಾಗುತ್ತದೆ. ಪುಣ್ಯಕಾರ್ಯಗಳನ್ನು ಮಾಡುವ ಮಹತ್ವ ತಿಳಿಯುತ್ತದೆ. ಪಾಪಗಳನ್ನು ಇದೇ ಜೀವನದಲ್ಲಿ ತೀರಿಸಬೇಕಾಗುವುದು. ಪೂಜೆ,ಯಜ್ಞ, ಯಾಗಾದಿಗಳಿಂದ ಶಮನವಾಗುತ್ತದೆ ಎಂದರು.
ಕಿಲ್ಲಾ ತೋರಗಲ್ಲ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಮಾತನಾಡಿ, ದೇವಾಲಯಗಳು ದೈವ ಜನಮನದಲ್ಲಿ ಸಾತ್ವಿಕ ಸತ್ಯ ಶುದ್ಧ ಚೈತನ್ಯ ಶಕ್ತಿ ತುಂಬುವ ಶ್ರದ್ಧಾ ಭಕ್ತಿಯ ಕೇಂದ್ರಗಳಾಗಬೇಕು ಎಂದು ಹೇಳಿದರು.
ಇದಕ್ಕೂ ಮುಂಚೆ ಮುಂಜಾನೆ ೬ ಗಂಟೆಗೆ ಹೋಮ, ಹವನ, ಮಹಾರುದ್ರಾಭಿ?ಕ, ಬಿಲ್ವಾರ್ಚನೆ, ವಾಸ್ತು ಹೋಮ, ಗಣಹೋಮ, ನವಗ್ರಹ ಶಾಂತಿ, ಕಳಸಾರೋಹನ ನಡೆದವು. ನಂತರ ಸುಮಂಗಲೆಯರ ಆರತಿ, ಕುಂಭಮೇಳ, ಭಜನೆ ವಿವಿಧ ವಾದ್ಯಮೇಳದೊಂದಿಗೆ ಶ್ರೀಗಳನ್ನ ಭವ್ಯ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಂಡರು. ಗ್ರಾಮಸ್ಥರು ದೇವಿ ಉಡಿತುಂಬಿದರು. ಮಹಾಪ್ರಸಾದ ನಡೆಯಿತು.
ನಯಾನಗರ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರಘರಾಜೇಂದ್ರ ಸ್ವಾಮೀಜಿ, ಗುತ್ತಿಗೊಳಿ ಹೊಸಕೋಟಿ ಅಭಿನವ ರೇವಯ್ಯ ಸ್ವಾಮೀಜಿ, ಸೊಗಲ ಚಿದಾನಂದ ಅವಧೂತ ಅಜ್ಜನವರು, ಹುಬ್ಬಳ್ಳಿ ?ಡಕ್ಷರಿ ಸ್ವಾಮೀಜಿ, ರುದ್ರಾಪೂರ ಸದ್ಗುರು ಬ್ರಹ್ಮಾನಂದ ಗುರುಗಳು, ಬಬಲಾದಿ ಮಠದ ಶಂಕ್ರಯ್ಯ ಮುತ್ಯಾ, ಜೀವಾಪೂರ ಬಸು ಅಜ್ಜನವರು ಆಶೀರ್ವಚನ ನೀಡಿದರು.
ಸವದತ್ತಿ ಬಿಜೆಪಿ ತಾಲೂಕ ಮಂಡಳ ಅಧ್ಯಕ್ಷ ವಿರುಪಾಕ್ಷ ಮಾಮನಿ ಉದ್ಘಾಟಿಸಿದರು. ನ್ಯಾಯವಾಧಿ ಶಿವಾನಂದ ಪಾಟೀಲ, ಸವದತ್ತಿ ಮಾಜಿ ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಮುದಕಪ್ಪ ಯರಡ್ಡಿ, ಗೌಡಪ್ಪ ನಾಯ್ಕರ, ಸವದತ್ತಿ ಪಿಎಲ್‌ಡಿ ಬ್ಯಾಂಕ ಮಾಜಿ ನಿರ್ದೇಶಕ ರಾಮಚಂದ್ರಪ್ಪ ಯರಡ್ಡಿ, ಯರಗಟ್ಟಿ ಎಪಿಎಂಸಿ ನಿರ್ದೇಶಕ ವೆಂಕಣ್ಣ ಯರಡ್ಡಿ, ಗುತ್ತಿಗೆದಾರ ಪ್ರವೀಣ ಸೋನವಾಲ್ಕರ, ಶಿಕ್ಷಕ ಬಸಪ್ಪ ನರಿ, ಮಾಜಿ ಸೈನಿಕ ರಾಮಪ್ಪ ಕುರಿ, ಪಿಎಸ್‌ಐ ಈರಪ್ಪ ರಿತ್ತಿ, ಕಲ್ಮೇಶ ಬಾಲರಡ್ಡಿ, ಶ್ರೀಕಾಂತ ಯರಡ್ಡಿ, ಬಸವರಾಜ ನರಿ, ಮುತ್ತನಗೌಡ ನಾಯ್ಕರ, ಬಸವರಾಜ ಕಡಬಿ, ಸದಾಶಿವ ಗೋಪಾಳಿ, ಲಕ್ಷಣ ಅರಳಿಕಟ್ಟಿ ಸೇರಿದಂತೆ, ಚನ್ನಯ್ಯ ಪೂಜೇರ, ಸುರೇಶ ಕಂಬಾರ ಸ್ವಾಗತಿಸಿ, ವಂದಿಸಿದರು.

WhatsApp Group Join Now
Telegram Group Join Now
Share This Article