ಇಂಡಿ,ಜು.೨೯ : ಕೃಷಿ ವಿಶ್ವವಿದ್ಯಾಲಯದಲ್ಲಿ ಮತ್ತು ಕೃಷಿ ಇಲಾಖೆಯಲ್ಲಿ ರೈತರ ಏಳಿಗೆಗೆ ಪೂರಕವಾಗಿ ಕೆಲಸ ಮಾಡಿದ ಸರಕಾರಿ ಕೃಷಿ ಅಧಿಕಾರಿ ಡಾ. ಆರ್.ಬಿ. ಬೆಳ್ಳಿಯವರ ಸೇವೆ ವರ್ಣತಾತೀತ ಎಂದು ಬೀದರದ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಿವೃತ್ತಗೊಂಡ ಡಾ. ಬೆಳ್ಳಿಯವರಿಗೆ ಸನ್ಮಾನ ಸಮಾರಂಭ ಮತ್ತು ಕುರಿ ಮತ್ತು ಆಡು ತರಬೇತಿ ಕಾರ್ಯಕ್ರಮದಲ್ಲಿ ಡಾ. ಬೆಳ್ಳಿಯವರ ಸನ್ಮಾನ ಕುರಿತು ಮಾತನಾಡಿದರು.
ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಮಾತನಾಡಿ ಬೆಳ್ಳಿಯವರದು ರೈತರೊಂದಿಗೆ ಒಳ್ಳೆಯ ಒಡನಾಟ, ರೈತರಿಗೆ ಮಾಹಿತಿ ನೀಡಿ ಬೆಳೆ ಬೆಳೆಸುವಲ್ಲಿ ಹೆಚ್ಚಿನ ಉತ್ಪಾದನೆ ಮಾಡಿಸುವಲ್ಲಿ ಬೆಳ್ಳಿ ಕಾರ್ಯ ಶ್ಲಾಘನೀಯ. ಬೆಳ್ಳಿಯವರು ತಮ್ಮ ಮನೆಯಲ್ಲಿ ಹೆಚ್ಚು ರೈತರು ಬಂದರೆ ಅದಕ್ಕೆಂದೆ ಒಂದು ಸಭಾ ಭವನ ನಿರ್ಮಿಸಿ ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿರುವದು ಅವರು ರೈತರ ಕಾಳಜಿ ತೋರಿಸುತ್ತದೆ ಎಂದರು.
ಸನ್ಮಾನಿತ ಡಾ. ಆರ್.ಬಿ.ಬೆಳ್ಳಿ, ಕೃಷಿ ವಿವಿ ವಿದ್ಯಾರ್ಥಿ ಮಲ್ಲಿಕಾರ್ಜುನ, ಶ್ರೀಶೈಲ ಆಳೂರ, ಚಂದ್ರಶೇಖರ ಪಾಸೋಡಿ, ಎಸ್.ಟಿ.ಪಾಟೀಲ, ಮುತ್ತುಗೌಡ ಪಾಟೀಲ, ಕೃಷಿ ವಿಜ್ಞಾನ ಕೇಂದ್ರದ ಡಾ. ಪ್ರೇಮಚಂದ್ರ, ಡಾ. ಪ್ರಸಾದ, ಡಾ. ಬೆಳ್ಳಿಯವರ ಕೃಷಿ ಕ್ಷೇತ್ರದಲ್ಲಿ ರೈತರಿಗೆ ಮಾಡಿದ ಸಹಾಯ ಕುರಿತು ಮಾತನಾಡಿದರು.
ವೇದಿಕೆಯ ಮೇಲೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ಡಾ. ಶಿವಶಂಕರ ಮೂರ್ತಿ, ಕೃಷಿ ವಿವಿ ಪ್ರಾಧ್ಯಾಪಕ ಡಾ. ಶ್ರೀನಿವಾಸ, ಸಂಕಪ್ಪ ಹತ್ತರಕಿ ಡಾ. ವೀಣಾ ಚಂದಾವರಿ, ಮಂಜುಳಾ, ಡಾ. ಪ್ರಕಾಶ, ಮಜೀದ ಮತ್ತಿತರಿದ್ದರು. ಇದೇ ವೇಳೆ ರೈತರಿಗೆ ಕುರಿ ಮತ್ತು ಆಡು ಸಾಗಾಣಿಕೆ ತರಬೇತಿ ನೀಡಲಾಯಿತು.ಇದೇ ವೇಳೆ ಶ್ರೀಗಳು, ಕೃಷಿ ಇಲಾಖೆಯಿಂದ ಚಂದ್ರಕಾಂತ ಪವಾರ, ಪಟ್ಟಣದ ಧನಶೆಟ್ಟಿ ಅಗ್ರೋ ಕೇಂದ್ರದಿಂದ, ಕೃಷಿ ವಿದ್ಯಾರ್ಥಿಗಳಿಂದ, ನೂರಾರು ಪ್ರಗತಿಪರ ರೈತರು ಬೆಳ್ಳಿಯವರಿಗೆ ಸನ್ಮಾನಿಸಿದರು.
ಡಾ. ಆರ್.ಬಿ. ಬೆಳ್ಳಿಯವರ ಸೇವೆ ವರ್ಣತಾತೀತ : ಸಿದ್ದರಾಮೇಶ್ವರ ಸ್ವಾಮೀಜಿ
