ಯರಗಟ್ಟಿ,ಜು.೨೮: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಧರ್ಮಾಧಿಕಾರಿಗಳು ರಾಜ್ಯದೆಲ್ಲೆಡೆ ಧಾರ್ಮಿಕ ಕ್ಷೇತ್ರಗಳ ಜಿರ್ಣೋದ್ಧಾರಕ್ಕೆ ಪೂರಕವಾಗಿ ಸಹಾಯ ಹಸ್ತ ನೀಡುತ್ತಿದ್ದಾರೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಲವಕುಮಾರ ಹೇಳಿದರು.
ಸಮೀಪದ ಸೋಮಾಪೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಯಿಂದ ಸಿದ್ಧಾರೂಢ ಮಠಕ್ಕೆ ಜೀಣೋದ್ಧಾರಕ್ಕಾಗಿ ೩ಲಕ್ಷ ರೂ ಮೊತ್ತದ ಡಿ.ಡಿ. ವಿತರಿಸಿ ಮಾತನಾಡಿದ ಅವರು, ಸಂಸ್ಥೆಯ ವಿರೇಂದ್ರ ಹೆಗ್ಗಡೆಯವರಿಗೆ ಆಶ್ರಮದ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಮನವಿ ಮೇರೆಗೆ ಪೂಜ್ಯರ ಮಾರ್ಗದರ್ಶನದಲ್ಲಿ ಆಶ್ರಮದ ಜೀರ್ಣೋದ್ದಾರಕ್ಕೆ ಶ್ರೀಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಅನುದಾನ ಮಂಜುರು ಮಾಡಲಾಗಿದೆ ಎಂದು ಹೇಳಿದರು.
ಜೈದೇವ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಹಲವಾರು ದಾನಗಳಿಗೆ ಹೆಸರಾಗಿದೆ. ನಾಡಿನ ಜನರ ನೋವನ್ನು ದೂರ ಮಾಡುವ ಧಾರ್ಮಿಕ ಕ್ಷೇತ್ರವಾಗಿದೆ. ಅವರ ಸಮಾಜಿಕ ಕಾರ್ಯಗಳು ಇನ? ರಾಜ್ಯಾದ್ಯಂತ ಪಸರಿಸಲಿ ಎಂದು ಹಾರೈಸಿದರು.ಜಿಲ್ಲಾ ನಿರ್ದೇಶಕ ಲವಕುಮಾರ, ಯೋಜನಾಧಿಕಾರಿ ಶ್ರೀಕಾಂತ, ವಲಯ ಮೇಲ್ವೀಚರಕ ನಾಗರಾಜ.ಡಿ ಅವರನ್ನು ಶ್ರೀಗಳು ಗ್ರಾಮಸ್ಥರು ಸನ್ಮಾನಿಸಿದರು.ಯರಗಟ್ಟಿ ಯೋಜನಾಧಿಕಾರಿ ಶ್ರೀಕಾಂತ, ವಲಯ ಮೇಲ್ವಿಚಾರಕ ನಾಗರಾಜ ನಾಯ್ಕ, ಆರ್.ಬಿ.ಅಣ್ಣಿಗೇರಿ, ಪ್ರಕಾಶ ನಾಯ್ಕರ, ಅರುಣ ಗೊರಾಬಾಳ, ಮಹಾದೇವ ಜಮನಾಳ, ದೇಮಪ್ಪ ದೇಸಾಯಿ, ಸಿದ್ಧಾರೂಢ ಗೊಟಿ, ದೇಮಪ್ಪ ಬುಶನ್ನವರ, ಮರಮೇಶ ನಾಯ್ಕರ, ಪಿಎಸ್.ನಾಯ್ಕರ, ಸಾಗರ ದೊಡಮನಿ, ಸುರೇಶ ನಾಯ್ಕರ ಸಿದ್ದಪ್ಪ ಗೊರಬಾಳ ಸೇರಿದಂತೆ ಭಕ್ತರು ಇದ್ದರು.