26ನೇ ವರ್ಷದ ಕಾರ್ಗಿಲ್ ವಿಜಯ ದಿವಸ ಆಚರಣೆ

Ravi Talawar
26ನೇ ವರ್ಷದ ಕಾರ್ಗಿಲ್ ವಿಜಯ ದಿವಸ ಆಚರಣೆ
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.4778646, 0.48660126);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
WhatsApp Group Join Now
Telegram Group Join Now
ಯಾದಗಿರಿ:  ಜಿಲ್ಲೆಯ ಶಹಾಪೂರ ತಾಲೂಕಿನ ಶಾರದಹಳ್ಳಿ ಗ್ರಾಮದ ಶ್ರೀ ಶಂಕ್ರಪ್ಪ ವಿ. ಆಚಾರ್ಯ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಮಂಗಳವಾರ 26ನೇ ವರ್ಷದ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆಸಲ್ಲಿಸಲಾಯಿತು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಶಿಕ್ಷಕ ಬಾಲರಾಜ ಎಂ. ವಿಶ್ವಕರ್ಮ ಅರಳಗುಂಡಗಿ ಮಾತನಾಡಿ, 1999ರಲ್ಲಿ ಕಾಶ್ಮೀರದ ಕಾರ್ಗಿಲ್ ಎಂಬ ಸ್ಥಳದಲ್ಲಿ ಭಾರತ ಮತ್ತದರ ಬದ್ಧ ವೈರಿ ಪಾಕ್ ನ ನಡುವೆ ಸುಮಾರು ಎರಡು ತಿಂಗಳುಗಳ ಕಾಲ ನಡೆದ ಆಪರೇಷನ್ ವಿಜಯ ಹೆಸರಿನಡಿಯ ಯುದ್ಧದಲ್ಲಿ ಭಾರತದ ವೀರಯೋಧರು ಪಾಕ್ ಸೇನೆಯನ್ನು ಸದೆಬಡಿದು, ತಮ್ಮ ಪರಾಕ್ರಮವನ್ನು ಮೆರೆದು, ಯುದ್ದವನ್ನು ಗೆದ್ದ ದಿನವೇ ಈ ಕಾರ್ಗಿಲ್ ವಿಜಯೋತ್ಸವ ದಿವಸವಾಗಿದೆ. ಈ ಯುದ್ಧದಲ್ಲಿ  ಭಾರತದ 527 ವೀರ ಯೋಧರು ವೀರ ಮರಣವನ್ನಪ್ಪಿದರು. ಹಾಗಾಗಿ ಜು.26 ಭಾರತೀಯರೆಲ್ಲರಿಗೂ ವೀರ ಮರಣವನ್ನಪ್ಪಿದ ಯೋಧರ ತ್ಯಾಗ-ಬಲಿದಾನವನ್ನು ಸ್ಮರಿಸುವ ಮತ್ತು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುವ ದಿನವಾಗಿದೆ. ಆದ್ದರಿಂದ ಹುತಾತ್ಮ ಯೋಧರ ಬಲಿದಾನವನ್ನು ಭಾರತೀಯರು ಸದಾ ಸ್ಮರಿಸಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ಶಂಕ್ರಪ್ಪ ವಿ. ಆಚಾರ್ಯ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಸಂತೋಷ ಎಂ ಆಚಾರ್ಯ ಶಾರದಹಳ್ಳಿ, ಮಹೇಶ ಎಸ್. ವಾರದ, ಮಾನಪ್ಪ ಆರ್. ಸಾಹು ಅರಳಗುಂಡಗಿ, ಚಂದ್ರಶೇಖರ ವಿಶ್ವಕರ್ಮ ದೋರನಹಳ್ಳಿ, ಮೌನೇಶ ಎನ್. ವಿಶ್ವಕರ್ಮ ಶಾರದಹಳ್ಳಿ, ಕು. ಸೃಜನ್ ಎಸ್. ಆಚಾರ್ಯ, ಕು. ಸಮೃದ್ಧ ಎಸ್. ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article