ಹಸಿರು ಕ್ರಾಂತಿ: ಎಂ. ಕೆ. ಹುಬ್ಬಳ್ಳಿ: ರಾಷ್ಟ್ರೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರೀಯ ಏಕೀಕರಣವನ್ನು ಬೆಳೆಸಲು ಏಕತೆ ಸಂಸ್ಕೃತಿಕ ವಿನಿಮಯ ಮತ್ತು ವೈವಿಧ್ಯಮಯ ರಾಜ್ಯಗಳು ಮತ್ತು ಕೇಂದ್ರ ಪ್ರಾಂತ್ಯಗಳ ಯುವಕರಲ್ಲಿ ಪರಸ್ಪರ ತಿಳುವಳಿಕೆಯನ್ನು ಅನುಮೋದಿಸಲು ಹರಿಯಾಣದ ಕುರುಕ್ಷೇತ್ರದಲ್ಲಿ ಅಂತರ್ ರಾಜ್ಯ ಯುವ ವಿನಿಮಯ ಕಾರ್ಯಕ್ರಮವನ್ನು ಜುಲೈ ೨೩ ರಿಂದ ಆಯೋಜಿಸಲಾಗಿದೆ.
ಅಂತರ್ ರಾಜ್ಯ ಯುವ ವಿನಿಮಯ ಕಾರ್ಯಕ್ರಮಕ್ಕೆ ಬೆಳಗಾವಿಯ ವಿದ್ಯಾ ಸಂಗಮ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಒಳಪಡುವ ಬೆಳಗಾವಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ರಾಷ್ಟೀಯ ಸೇವಾ ಯೋಜನೆ ಸ್ವಯಂ ಸೇವಕ ವಿದ್ಯಾರ್ಥಿಗಳಾದ ಪ್ರಿಯಾಂಕಾ ತಿಲಗರ, ಯುವರಾಜ ಹಾವನ್ನವರ, ಬೆಳಗಾವಿ ಗೋಗಟೆ ಮಹಾವಿದ್ಯಾಲಯದ ಅಸ್ಮಿತಾ ಕದಂ, ಶಿವಕುಮಾರ ಚೌವಾನ, ಹಾಗೂ ಅಥಣಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಮುರಗೇಶ ಮಾದಗುಡ್ಡಿ, ಇವರುಗಳು ಆಯ್ಕೆಯಾಗಿ ರಾಜ್ಯದ ಸಂಸ್ಕೃತಿ, ಪರಂಪರೆ ಸಾರುವ ಜಾನಪದ ನೃತ್ಯ, ಗೀತೆ ಮೂಲಕ ಪ್ರಸ್ತುತ ಪಡಿಸಲು ಇವರನ್ನು ಬೆಳಗಾವಿಯಿಂದ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುವ ಅಂತರ್ ರಾಜ್ಯ ಯುವ ವಿನಿಮಯ ಕಾರ್ಯಕ್ರಮಕ್ಕೆ ಬೀಳ್ಕೊಡಲಾಯಿತು.
ಈ ವೇಳೆ ಸಂಗೋಳಿ ರಾಯಣ್ಣ ಕಾಲೇಜು ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ಲಕತ್ ಅತ್ತಾರ, ಉಪನ್ಯಾಸಕರಾದ ಡಾ.ಅರುಣ ಲೋಕುರೆ ಎನ್. ಎಸ್. ಎಸ್ ಸ್ವಯಂ ಸೇವಕರಾದ ಕೃಷ್ಣಾ, ತುಕಾರಾಮ, ಪಾಂಡು, ಸಾಕ್ಷಿ, ಸಾನ್ವಿ ಸೇರಿದಂತೆ ಪಾಲಕರು ಇದ್ದರು.