ಅಥಣಿ: ಇಂದಿನ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಅತ್ಯವಶಕ ಅದರಿಂದ ಸಾಕಷ್ಟು ಉಪಯೋಗವಾಗುವದು ಹೀಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೋಳಬೇಕೆಂದು ಶಾಸಕ ಲಕ್ಷ?ಮಣ ಸವದಿ ಹೇಳಿದರು.
ರವಿವಾರ ೨೦ರಂದು ಸ್ವಗೃಹದಲ್ಲಿ ರಸಪ್ರಶ್ನೆ ಸ್ಪರ್ಧೆಯ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು ಇಂದು ಸ್ಪರ್ಧಾತ್ಮಕ ಯುಗವಾಗಿದೆ ದೇಶ, ವಿದೇಶ, ರಾಜ್ಯಗಳ ಎಲ್ಲ ರಂಗಗಳ ಸಂಪೂರ್ಣ ಜ್ಞಾನ ಪಡೆಯುವುದು ಅವಶ್ಯ ಅದೇ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರಸಪ್ರಶ್ನೆಗಳೆ ಹೆಚ್ಚಿರುತ್ತವೆ ಅವುಗಳ ಕುರಿತು ಅಧ್ಯಯನ ಮಾಡುವುದು ವಿದ್ಯಾರ್ಥಿಗಳಿಗೆ ಸ್ಪೂರ್ತಿ,ಪ್ರೇರಣೆ ದೊರೆಯಲಿದೆ ಇಂತಹ ಕಾರ್ಯಕ್ರಮ ಆಯೋಜಿಸಿರುವ ಪತ್ರಿಕರ್ತರ ಸೇವೆ ಮಾದರಿಯಾಗಿದೆ ಎಂದರು.
ಪತ್ರಿಕಾ ದಿನಾಚರಣೆ ಅಂಗವಾಗಿ ಮುಕ್ತ ರಸಪ್ರಶ್ನೆ ಸ್ಪರ್ಧೆ ದಿ; ೨೬ರಂದು ಮಧ್ಯಾಹ್ನ ೩ ಗಂಟೆಗೆ ವಿವೆಕಾನಂದ ವಿದ್ಯಾವಿಕಾಶ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು,ಯುವಕರು,ಯುವತಿಯರು, ಹಿರಿಯರು ಪಾಲ್ಗೋಳಬಹುದು ಮುಕ್ತ ಅವಕಾಶವಿದೆ ಆಕರ್ಷಕ ನಗದು ಬಹುಮಾನಗಳಿವೆ.
ಕಾರ್ಯನಿರತ ಪತ್ರಕರ್ತರ ಸಂಘ ಅಥಣಿ ತಾಲೂಕು ಘಟಕದಿಂದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಮುಕ್ತ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವು ಸೋಮವಾರ ೨೮ರಂದು ಮುಂಜಾನೆ ೧೦ ಗಂಟೆಗೆ ಕೆ.ಎಲ್.ಇ ಸಂಸ್ಥೆಯ ಎಸ್.ಎಸ್.ಎಮ್. ಎಸ್ ಕಾಲೇಜಿನ ಖೋತ ಸಭಾಂಗಣದಲ್ಲಿ ಜರುಗಲಿದೆ.
ಸಾನಿಧ್ಯವನ್ನ ಗಚ್ಚಿನಮಠದ ಶಿವಬಸವ ಸ್ವಾಮಿಜಿ ವಹಿಸುವರು. ಉದ್ಘಾಟಕರಾಗಿ ಶಾಸಕ ಲಕ್ಷ್ಮಣ ಸವದಿ ನೆರವೆರಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಶಹಜಹಾನ ಡೊಂಗರಗಾಂವ,ಮಹೇಶ ಕುಮಠಳ್ಳಿ, ಪುರಸಭೆ ಅಧ್ಯಕ್ಷೆ ಶಿವಲಿಲಾ ಬುಟಾಳೆ,ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಪಾಲ್ಗೋಳುವರು. ಅಧ್ಯಕ್ಷತೆಯನ್ನ ಪರಶುರಾಮ ನಂದೇಶ್ವರ ವಹಿಸುವರು.
ಜಮಖಂಡಿಯ ಉಪನ್ಯಾಸಕ ಯಶವಂತ ಕೊಕ್ಕನವರ ಅವರು ಪತ್ರಿಕೊದ್ಯಮದ ವರ್ತಮಾನದ ಸಮಸ್ಯೆ ಹಾಗೂ ಸವಾಲುಗಳು ಕುರಿತು ಉಪನ್ಯಾಸ ನೀಡುವರು.
ಅದೇ ರೀತಿ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲಿಕ ಬಾಳೊಜಿ,ಜಿಲ್ಲಾಧ್ಯಕ್ಷ ದಿಲೀಪ ಕುರುಂದವಾಡೆ,ಪ್ರಾಚಾರ್ಯ ಡಾ.ಪ್ರಶಾಂತ ಮಗದುಮ್ಮ ಉಪಸ್ಥಿತರಿರುವರು.
ಈ ವೇಳೆ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಪರಶುರಾಮ ನಂದೇಶ್ವರ, ರಮೇಶ ಬಾದವಾಡಗಿ,ಶಿವಕುಮಾರ ಅಪರಾಜ,ರಾಕೇಶ ಮೈಗೂರ,ರಾಜು ಗಾಲಿ,ಅಜೀತ ಕಾಂಬಳೆ,ವಿಜಯಕುಮಾರ ಅಡಹಳ್ಳಿ,ಅಣಾಸಾಬ ತೆಲಸಂಗ,ಶೇಖರ ತೆವರೆಟ್ಟಿ,ಸಂತೋಷ ಬಡಕಂಬಿ,ಶಿವಾನಂದ ಪೂಜಾರಿ,ಜಬ್ಬಾರ ಚಿಂಚಲಿ,ವಿಲಾಸ ಕಾಂಬಳೆ,ಸಂದೀಪ ಘಟಕಾಂಬಳೆ,ಕಲ್ಲಪ್ಪ ಕನ್ನಾಳ,ಆರ,ಎಸ್.ದೊಡ್ಡನಿಂಗಪಗೊಳ,ಯಾಸಿನ ಜಾರೆ,ಶ್ರೀನಿವಾಸ ಪಟ್ಟಣ ಸೇರಿದಂತೆ ಮತ್ತಿತರರು ಇದ್ದರು.