ಹುನಗುಂದ: ತಾಲೂಕಿನ ಅಮರಾವತಿ ಗ್ರಾಮ ಪಂಚಾಯತಿಯ ಪಿಡಿಒ ಶಿಲ್ಪಾ ರ್ಯಾಕಿ ಅವರು ಗ್ರಾಮಸ್ಥರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ, ಗ್ರಾಮ ಪಂಚಾಯಿತಿಗೆ ಗುರುವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರಾದ ಶರಣಪ್ಪ ಗೋಪಲಪ್ಪನವರ ಮಾತನಾಡಿ, ಕಳೆದ ಒಂದು ವರ್ಷವಾದರು ಗ್ರಾಮದ ಜನರ ಎನ್.ಆರ್.ಜಿ. ಜಾಬ್ ಕಾರ್ಡ ಮಾಡಿಕೊಡದೆ ಜನರನ್ನು ಸತಾಯಿಸುತ್ತಿದ್ದಾರೆ. ಎನ್.ಆರ್.ಜಿ. ಕೆಲಸ ನೀಡುತ್ತಿಲ್ಲ. ಕೆಲಸ ಮಾಡಿದವರ ಕಾರ್ಮಿಕರಿಗೆ ಸರಿಯಾಗಿ ಹಣ ಪಾವತಿಸುತ್ತಿಲ್ಲ, ರೈತರು ದನದ ಕೊಟ್ಟಿಗೆ ನಿರ್ಮಿಸಿದ ಮತ್ತು ಜನತಾ ಮನೆಗಳನ್ನು
ಬಿಲ್ ಸರಿಯಾಗಿ ಪಾವತಿಸುತ್ತಿಲ್ಲ. ಪಿಡಿಒ ಮತ್ತು ಕಂಪೂಟರ್ ಆಪರೇಟರ್ ಕಚೇರಿಗೆ ಸರಿಯಾಗಿ ಬಾರದೆ ಜನರಿಗೆ ಕೈಗೆ ಸಿಗುತ್ತಿಲ್ಲ. ಗ್ರಾಮದಲ್ಲಿ ರಸ್ತೆ, ಚರಂಡಿ, ಶೌಚಾಲಯ ಸರಿಯಾಗಿ ಇಲ್ಲ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲ ಅಭಿವೃದ್ದಿ ಕೆಲಸಗಳು ಕುಂಠಿತಗೊಂಡಿವೆ ಆದ್ದರಿಂದ ಅವರ ಕಾರ್ಯವೈಖರಿ ಗ್ರಾಮದ ಜನರಿಗೆ ಬೇಸರ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ ಮಾತನಾಡಿ, ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರಿಗೆ, ಸಾರ್ವಜನಿಕರಿಗೆ ಪಿಡಿಒ ಗೌರವ ನೀಡುವುದಿಲ್ಲ, ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುತ್ತಿಲ್ಲಿ. ಗ್ರಾಮದ ಜನರ ಕುಂದುಕೊರತೆಯನ್ನು ಆಲಿಸುತ್ತಿಲ್ಲ. ಪಿಡಿಒ ಮತ್ತು ಕಂಪೂಟರ್ ಆಪರೇಟರ್ಗಳನ್ನು ಈ ಪಂಚಾಯತಿಯಿಂದ ಬೇರೆ ಕಡೆಗೆ ವರ್ಗಾವಣೆ ಮಾಡುವವರಿಗೆ ನಮ್ಮ ಹೋರಾಟವನ್ನು ನಿಲ್ಲಿಸುವದಿಲ್ಲ. ಇಲ್ಲವಾದರೆ ಜಿಪಂ ಮುಖ್ಯಕಾರ್ಯನಿರ್ವಾಹಕರು ಪಂಚಾಯತಿಗೆ ಆಗಮಿಸುವವರೆಗೆ ಪ್ರತಿಭಟನೆಯನ್ನು ಹಿಂತೆಗೆಯುವುದಿಲ್ಲ ಕಚೇರಿ ಬಾಗಿಲು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುಳೀಧರ ದೇಶಪಾಂಡೆ ಆಗಮಿಸಿ ಜಿಪಂ ಮುಖ್ಯಕಾರ್ಯನಿರ್ವಾಹಕರು ಅವರಿಗೆ ದೂರವಾಣಿ ಮೂಲಕ ತಿಳಿಸಿದಾಗ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಗ್ರಾಮಸ್ಥರಾದ ಮೃತ್ಯುಂಜಯ ಕಪರದ, ಮಹಾಂತೇಶ ಚಿತ್ತವಾಡಗಿ, ಮಂಜುನಾಥ ಹುನಕುಂಟಿ, ಆನಂದ ಹುನಕುಂಟಿ, ಮುತ್ತುರಾಜ ಗೌಡರ್, ಅಜಯ ಕಂಬಳಿ, ಶಿವು ಗೌಡರ, ಬಸವರಾಜ ಗೋಲಪ್ಪನವರ, ಚಂದಪ್ಪ ಗೂಳಿ, ಶಶಿಕುಮಾರ ಗೋಲಪ್ಪನವರ ಸೇರಿದಂತೆ ಗ್ರಾಮದ ಜನರು ಪಾಲ್ಗೊಂಡಿದ್ದರು.