ಸಂಕೇಶ್ವರ : ಇಲ್ಲಿಯ ಬ್ರಿಲಿಯಂಟ್ ಸಿಬಿಎಸ್ಇ ಶಾಲೆಯು ಮಂಗಳವಾರ ಪ್ರಕಟವಾದ ಸಿಬಿಎಸ್ಇ ೧೦ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶದಲ್ಲಿ ಶೇ.೧೦೦ ರಷ್ಟು ಫಲಿತಾಂಶ ಗಳಿಸಿ ತನ್ನ ಶೈಕ್ಷಣಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಶಾಲೆಯ ಪ್ರಾಚಾರ್ಯೆ ನಸೀಮಾ ಢಾಂಗೆ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿರುವುದು ಶಾಲೆಯ ಉನ್ನತ ಶೈಕ್ಷಣಿಕ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ಶಾಲೆಗೆ ಮಂಜುಕುಮಾರಿ ಚೌದರಿ ಪ್ರಥಮ, ಸಯ್ಯದ ಗಜೇಂದ್ರಗಡ ದ್ವಿತೀಯ, ಆದರ್ಶ ಪಾಟೀಲ ತೃತೀಯ ಸ್ಥಾನ ಪಡೆದಿದ್ದಾರೆ. ಶಾಲೆಯ ಒಟ್ಟಾರೆ ಶೇ.೧೦೦ ಫಲಿತಾಂಶವು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲದಿAದ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಬ್ರಿಲಿಯಂಟ್ ಸ್ಕೂಲ್ ಶೈಕ್ಷಣಿಕ ಮೌಲ್ಯಗಳನ್ನು ಆಧರಿಸಿ ಕಾರ್ಯನಿರ್ವಹಿಸುತ್ತಿದ್ದು ಅಧ್ಯಕ್ಷ ಪವನ ಕಣಗಲಿ ಅವರ ಮಾರ್ಗದರ್ಶನದಲ್ಲಿ ಅತ್ಯುತ್ತಮ ಕಲಿಕಾ ವಾತಾವರಣವನ್ನು ಸೃಷ್ಟಿಸಲಾಗಿದೆ. “ಲಾಸ್ಟ್ ಬೆಂಚ್ ಟು ಫಸ್ಟ್ ಬೆಂಚ್” ಪರಿಕಲ್ಪನೆಯೊಂದಿಗೆ ಪ್ರಸ್ತಕ ಶೈಕ್ಷಣಿಕ ಈ ವರ್ಷದಿಂದ ಕಲಿಕೆಯಲ್ಲಿ ಕುಂಟಿತ ವಿದ್ಯಾರ್ಥಿಗಳ ಕಿಲಿಕಾ ಸಾಮರ್ಥ್ಯ ವೃದ್ಧಿಸಲು ವಿಶೇಷ ತರಬೇತಿಯನ್ನು ಒದಗಿಸಲು ಬ್ರಿಲಿಯಂಟ್ ಸ್ಕೂಲ್ ಮುಂದಾಗಿದೆ. ಇದರ ಲಾಭವನ್ನು ಸ್ಥಳೀಯ ವಿದ್ಯಾರ್ಥಿಗಳು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ