ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಮಹಾನ್ ಮಾನವತಾವಾದಿ ಧರ್ಮನಿರಪೇಕ್ಷ ಈಶ್ವರಚಂದ್ರ ವಿದ್ಯಾಸಾಗರ್ ಅವರ 204ನೇ ಜನ್ಮದಿನಾಚರಣೆ ಕಾರ್ಯಕ್ರಮ ನಗರದ ವಿಮ್ಸ್ ಮೈದಾನದಲ್ಲಿ ಹಾಗೂ ಐಟಿಐ ಗ್ರೌಂಡ್ ಮತ್ತು ವಾರ್ಡಾ ಪಿಯು ಕಾಲೇಜಿನಲ್ಲಿ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ಮಾಡಲಾಯಿತು.
ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ ಅವರು ಮಾತನಾಡಿ…. 150ವರ್ಷಗಳ ಹಿಂದೆ ಶಿಕ್ಷಣ ಕೇವಲ ಮೇಲ್ಜಾತಿಯ ಪುರುಷರ ಸ್ವತ್ತಾಗಿತ್ತು. ಕೆಳ ವರ್ಗದವರು ಹಾಗೂ ಎಲ್ಲಾ ವರ್ಗದ ಹೆಣ್ಣು ಮಕ್ಕಳ ಶಿಕ್ಷಣದ ಕನಸಿನ ಬಾಗಿಲು ಮುಚ್ಚಿತ್ತು ಇದರ ವಿರುದ್ಧ ಹಳ್ಳಿ ಹಳ್ಳಿಗೆ ಹೋಗಿ ಸಮಾರವನ್ನೇ ಸಾರಿದ ಪರಿಣಾಮವಾಗಿ ಇಂದು ಎಲ್ಲಾ ವರ್ಗದ ಜನರಿಗೆ ಮತ್ತು ಹೆಣ್ಣು ಮಕ್ಕಳಿಗೂ ಶಿಕ್ಷಣದ ಬಾಗಿಲು ತೆರೆದವು. ಹಲವು ಗೊಡ್ಡು ಸಂಪ್ರದಾಯ ಮತ್ತು ಹಳೆಯ ಕಂದಾಚಾರ ಸಡ್ಡು ಹೊಡೆದು ಬಾಲ್ಯ ವಿವಾಹ ನಿಷೇಧ ಕುರಿತು ಹೋರಾಡಿದರು. ವಿಧವಾ ವಿವಾಹ ಪರ ನಿಂತು ಹೋರಾಡಿ ಮಗನಿಗೆ ವಿಧವೆಯನ್ನು ಮದುವೆ ಮಾಡಿದ ನಂತರದ ದಿನಗಳಲ್ಲಿ ಮಗ ತನ್ನ ಹೆಂಡತಿಯನ್ನು ಸರಿಯಾಗಿ ನಡೆಸಿಕೊಳ್ಳದ ಕಾರಣ ಮಗನ ಎಲ್ಲಾ ರೀತಿಯ ಸಂಬಂಧ ಕಳೆಚಿಕೊಂಡು ಸೊಸೆಯನ್ನು ಮಗಳೆಂದು ಸ್ವೀಕರಿಸಿದರು.
ವಿದ್ಯಾಸಾಗರ್ ಅವರ ಧರ್ಮನಿರಪೇಕ್ಷ ಶಿಕ್ಷಣದ ಪರವಾಗಿ ಧ್ವನಿ ಎತ್ತಿದ್ದರು, ವಿಜ್ಞಾನ, ಅರ್ಥಶಾಸ್ತ್ರ, ಗಣಿತ ತರ್ಕ ಹಾಗೂ ಇಂಗ್ಲೀಷ್ ಶಿಕ್ಷಣದ ಮಹತ್ವ ಸಾರಿದರು. ಇಂತಹ ಮಹಾನ್ ವ್ಯಕ್ತಿಗಳ ವಿಚಾರ ಮೈಗೂಡಿಸಿಕೊಂಡು ನ್ಯಾಯ ಮತ್ತು ಸತ್ಯಕ್ಕಾಗಿ ದನಿ ಎತ್ತಿ, ಎಲ್ಲಾ ರೀತಿಯ ಶೋಷಣಾ ಮುಕ್ತ ಸಮಾಜ ನಿರ್ಮಾಣಕ್ಕೆ ಮುನ್ನಡೆಯೋಣವೆಂದು ಸಂಕಲ್ಪ ತೊಡಬೇಕಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷರು ಎಂ.ಶಾಂತಿ, ಹಾಗೂ ಸಾರ್ವಜನಿಕರಾದ ರಾಧಾ, ಮಹ್ಮದ್
ಶಮಿಹುಲ್ಲ, ಸುರೇಶ್ ಬಾಬು, ಆಂಟೋನಿ ಮತ್ತು ವಿದ್ಯಾರ್ಥಿ, ಯುವಕರು ಭಾಗವಹಿಸಿದ್ದರು.