ಬಳ್ಳಾರಿ: 20..ಜಿಲ್ಲೆಯ ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ಮಾವಿನಹಳ್ಳಿಯ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭಾವಗೀತೆಗಳು ಮತ್ತು ಬಯಲಾಟದಲ್ಲಿ ಪಟ್ಟಾಭಿಷೇಕ ಸನ್ನಿವೇಶವನ್ನು ಹಮ್ಮಿಕೊಳ್ಳಲಾಗಿತ್ತು.
ಭಾವಗೀತೆಗಳು ವೈಯಕ್ತಿಕ ಭಾವನೆಗಳು, ಪ್ರೀತಿ, ಪ್ರಕೃತಿ ಮತ್ತು ತತ್ವಜ್ಞಾನವನ್ನು ವ್ಯಕ್ತಪಡಿಸುವ, ಸಂಗೀತಮಯವಾಗಿ ಹಾಡಬಹುದಾದ ಸಣ್ಣ ಕವಿತೆಗಳಾಗಿವೆ. ಇವು ಪ್ರಮುಖವಾಗಿ ಹರಿತವಾದ ರಾಗ, ಲಯವನ್ನು ಹೊಂದಿರುತ್ತವೆ. ತಂತಿ ವಾದ್ಯದ ಹಿನ್ನೆಲೆಯಲ್ಲಿ ಹಾಡಲು ಸೂಕ್ತವಾಗಿವೆ. ಕನ್ನಡದಲ್ಲಿ ಬೇಂದ್ರೆ, ಪು.ತಿ.ನ, ಜಿ.ಎಸ್.ಶಿವರುದ್ರಪ್ಪ ಮುಂತಾದವರು ಭಾವಗೀತೆ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ಬಯಲಾಟವು ಉತ್ತರ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಬಯಲು ರಂಗಭೂಮಿ ಕಲೆಯಾಗಿದ್ದು, ಇದು ಸುಮಾರು ೧೫೦ ವರ್ಷಗಳ ಇತಿಹಾಸ ಹೊಂದಿದೆ. ಯಕ್ಷಗಾನದ ಶೈಲಿಯನ್ನು ಹೋಲುವ ಇದು, ಪುರಾಣ ಮತ್ತು ಮಹಾಕಾವ್ಯಗಳ ಕಥೆಗಳನ್ನು ಹಾಡು, ಕುಣಿತ ಮತ್ತು ವಿಶಿಷ್ಟ ವೇಷಭೂಷಣಗಳೊಂದಿಗೆ ತೆರೆದ ಮೈದಾನದಲ್ಲಿ ಪ್ರದರ್ಶಿಸುತ್ತದೆ. ದೊಡ್ಡಾಟ, ಸಣ್
ಆಧುನಿಕ ಭಾವಗೀತೆ ಕಾವ್ಯವು ವೈಯಕ್ತಿಕ ಭಾವನೆಗಳು ಅಥವಾ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಔಪಚಾರಿಕ ಪ್ರಕಾರದ ಕಾವ್ಯವಾಗಿದೆ, ಇದನ್ನು ಸಾಮಾನ್ಯವಾಗಿ ಮೊದಲ ವ್ಯಕ್ತಿ ನಿರೂಪಣೆಯಲ್ಲಿ ಮಾತನಾಡಲಾಗುತ್ತದೆ.
ಸಾಮಾನ್ಯವಾಗಿ ಹಳ್ಳಿಗಳ ದೇವಸ್ಥಾನದ ಆವರಣ, ತೆರೆದ ಮೈದಾನ ಅಥವಾ ಮರಳು ಹಾಸಿನ ಮೇಲೆ ಸೂರ್ಯಾಸ್ತದ ನಂತರ ಪ್ರದರ್ಶನ ನಡೆಯುತ್ತದೆ. ರೂಪಗಳು ಬಯಲಾಟದಲ್ಲಿ ಮುಖ್ಯವಾಗಿ ಐದು ವಿಧಗಳಿವೆ – ದಶರಥ, ಸಣ್ಣಾಟ, ದೊಡ್ಡಾಟ, ಹರಿಕಥೆ ಮತ್ತು ಯಕ್ಷಗಾನ. ಭಾರತೀಯ ಮಹಾಕಾವ್ಯಗಳು ಮತ್ತು ಪುರಾಣದ ಕಥೆಗಳನ್ನು ನೃತ್ಯ ಮತ್ತು ನಾಟಕದ ಮೂಲಕ ನಿರೂಪಿಸಲಾಗುತ್ತದೆ. ಸಂಗೀತ ಮತ್ತು ವೇಷಭೂಷಣ ಚಂಡೆಯ ಸದ್ದಿನೊಂದಿಗೆ ಆರಂಭವಾಗುವ ಈ ಕಲೆ, ಪಾತ್ರಗಳ ವಿಶಿಷ್ಟ ವೇಷಭೂಷಣ ಮತ್ತು ಗಾಯನದಿಂದಾಗಿ ಜನಪ್ರಿಯವಾಗಿದೆ. ಬಯಲಾಟದ ಇತಿಹಾಸದಲ್ಲಿ “ಕುಮಾರರಾಮ” ಅತ್ಯಂತ ಪ್ರಾಚೀನವಾದ ಕೃತಿ ಎಂದು ಪರಿಗಣಿಸಲಾಗಿದೆ. ಉತ್ತರ ಕರ್ನಾಟಕದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಬಯಲಾಟ, ಸುಗ್ಗಿಯ ಮತ್ತು ಬೇಸಿಗೆ ಕಾಲದಲ್ಲಿ ಹಳ್ಳಿಗಳಲ್ಲಿ ಹೆಚ್ಚಿನ ಪ್ರದರ್ಶನಗಳನ್ನು ಕಾಣುತ್ತದೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಯಲಾಟ ಕಲಾವಿದರಾದ ಕಂದಾರ್ ತಿಪ್ಪೇಸ್ವಾಮಿ ಹೇಳಿದರು.
ಭಾವನಾತ್ಮಕತೆ ಕವಿಯ ಆತ್ಮನಿಷ್ಠ ಭಾವನೆಗಳಿಗೆ, ನೋವು-ನಲಿವುಗಳಿಗೆ ಒತ್ತು ನೀಡುತ್ತವೆ. ಸಂಗೀತಮಯತೆ ಇವು ಹಾಡಲು ಯೋಗ್ಯವಾಗಿರುತ್ತವೆ. ಸುಗಮ ಸಂಗೀತದ ಮೂಲಕ ಜನಪ್ರಿಯವಾಗಿವೆ. ಸಂಕ್ಷಿಪ್ತತೆ ಮಹಾಕಾವ್ಯಗಳಿಗೆ ವಿರುದ್ಧವಾಗಿ, ಇವು ಚಿಕ್ಕದಾಗಿ ಮತ್ತು ತೀವ್ರತೆಯಿಂದ ಕೂಡಿರುತ್ತವೆ. ಪ್ರೀತಿ, ಪ್ರಕೃತಿ, ಭಕ್ತಿ, ಸಾವು ಮತ್ತು ತತ್ವಜ್ಞಾನ ಪ್ರಮುಖ ವಿಷಯಗಳು ಮತ್ತು ಬಯಲಾಟ ಕರ್ನಾಟಕ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯದಿಂದ ಕೂಡಿದ ಗಂಡುಕಲೆ. ಇದರಲ್ಲಿ ಸಾಹಿತ್ಯ ಸಂಗೀತ, ನೃತ್ಯಗಳು ಮುಪ್ಪುರಿಗೊಂಡಿವೆ. ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟ. ಸಾಮಾನ್ಯವಾಗಿ ಸುಗ್ಗಿ ಕೆಲಸ ಮುಗಿದ ಮೇಲೆ ‘ಬಯಲಾಟ’ಗಳ ಸುಗ್ಗಿ ಆರಂಭವಾಗುತ್ತದೆ. ಇದಕ್ಕೆ ಕಾರಣ ಕೆಲಸದ ಬಿಡುವು. ಬಯಲು ನಾಟಕದ ಪ್ರದರ್ಶನಕ್ಕೆ ಮುನ್ನ ಬಹಳ ಪರಿಶ್ರಮ ಬೇಕಾಗುತ್ತದೆ. ಬಯಲಾಟದ ಹುಚ್ಚು ಇರುವವರೆಲ್ಲ ಒಂದು ಕಡೆ ಸೇರಿ ತಾವು ಕಲಿಯಬೇಕೆಂದಿರುವ ಪ್ರಸಂಗವನ್ನು ಆಯ್ಕೆ ಮಾಡುತ್ತಾರೆ. ಪ್ರಸಂಗದ ಪಾತ್ರಗಳಿಗೆ ಆಯ್ಕೆಯಾದ ಕಲಾವಿದರು ಅನೇಕ ತಿಂಗಳ ಕಾಲ ಪ್ರತಿದಿನ ರಾತ್ರಿ ಸೇರಿ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ. ಬಯಲಾಟ ಕಲಿಸುವವನಿಗೆ ‘ಭಾಗವತ’ ಎಂದು ಕರೆಯುತ್ತಾರೆ.
ಇಂದಿನ ಮಕ್ಕಳಿಗೆ ಪರಿಚಯಿಸುವ ಕೆಲಸ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟಿನ ಕಾರ್ಯದರ್ಶಿ ಕೆ.ಹೇಮೇಶ್ವರ ಮಾಡುತ್ತಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಬಲಾ ವಾದಕರಾದ ಶ್ರೀ.ಚಾಗೆವರಬಸಪ್ಪ ಅಧ್ಯಕ್ಷ ನುಡಿಯನ್ನು ಪ್ರಸ್ತಾಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾವಗೀತೆಗಳು, ಹೆಚ್.ಲೋಕರಾಜ್ ಮತ್ತು ತಂಡದವರು ನೇರವೇರಿಸಿದರು. ಕೆ.ಪಂಪಾಪತಿ ಪಾತ್ರ ಕೃತ್ಯವೀರ, ಕಾರ್ತ್ಯವೀರಾರ್ಜುನ ಎಚ್ ಆರ್ ಪ್ರವೀಣ್ ಕುಮಾರ್ ಮತ್ತು ರೇಣುಕಾ ರಾಜ ಬಿ.ಕೆ. ಸಿದ್ದಪ್ಪ ಧರ್ಮಪ್ಪ ತಂಡದವರು ಪ್ರದರ್ಶನ ನೀಡಿದರು.
ಶಾಲಾ ಶಿಕ್ಷಕರಾದ ಶ್ರೀಮತಿ ಪ್ಯಾರಿಜಾನ್, ಮಂಜುನಾಥ, ಕಂಠ್ಯಪ್ಪ, ಶಾರದಾ, ನಾಗವೇಣಿ, ಅನಿತಾ, ಬಯಲಾಟ ಕಲಾವಿದರು ಬಿ.ಸಿದ್ದಪ್ಪ ಧರ್ಮಪ್ಪ ಊರಿನ ಮುಖಂಡರು ಗಿರಿಯಪ್ಪ, ಸಿದ್ದಾಪುರ ವೆಂಕಟೇಶ್, ಮಲ್ಲಯ್ಯ, ಹೆಚ್ ಹುಲಗಪ್ಪ, ಆಂಜೀನಪ್ಪ, ಹನುಮಂತಪ್ಪ, ಎಸ್.ಡಿಎಂಸಿ ಉಪಾಧ್ಯಕ್ಷ ಸುಮಲತಾ ತಿಪ್ಪಯ್ಯ, ನಿಜಾಮುದ್ದೀನ್ ಔಲಿಯ ಹೋನ್ನಳ್ಳಿ,ಶಿಕ್ಷಕರ,ರಾಮು ಗೊಲ್ಲ ನಾಗೇನಹಳ್ಳಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟಿನ ಅಧ್ಯಕ್ಷ ಗುರುಮಹಾಂತೇಶ. ಬಿ ಹಾಗೂ ಕಾರ್ಯದರ್ಶಿ ಕುರುಬರ ಹೇಮೇಶ್ವರ, ಪುರುಷೋತ್ತಮ ಡಿ.ನಿರೂಪಣೆ ಶ್ರೀ ಕಂಠ್ಯಪ್ಪ, ಸ್ವಾಗತ ಪುರುಷೋತ್ತಮ ಡಿ,ಶ್ರೀ ಕು.ನಾಗವೇಣಿ ವಂದಿಸಿದರು.


