ದೇಶದ ಪ್ರಥಮ ದೇಶದ ಸ್ವಾತಂತ್ರ್ಯ ವೀರ ಮಹಿಳೆ ಕಿತ್ತೂರ ಚನ್ನಮ್ಮ. ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರ ಚನ್ನಮ್ಮಾಜಿ ಅವರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ್ದು ಎಲ್ಲರಿಗೂ ಪ್ರೇರಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.
ದೇಶದಲ್ಲಿ ಇತಿಹಾಸದಲ್ಲಿ ನಾಳಿನ ದಿನ ಬಹಳ ಪವಿತ್ರವಾದದ್ದು ಏಕೆಂದರೆ ತಾಯಿ ಕಿತ್ತೂರು ಚನ್ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ರಾಯಭಾರಿ ಟ್ಯಾಕರೇ ಅವನನ್ನು ಯುದ್ಧದಲ್ಲಿ ಕೊಂದು ಸಂಗ್ರಾಮ ವಿಜಯಿಯಾಗಿ 200 ವರ್ಷ ಈ ಸಂದರ್ಭದಲ್ಲಿ ಇಂದು ಬೆಳಗಾವಿ ನಾಳೆಯಿಂದ ಮೂರು ದಿನಗಳ ಕಾಲ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ನೇತೃತ್ವದಲ್ಲಿ ಅದ್ದೂರಿ 200 ನೇ ವಿಜಯೋತ್ಸವ ಕಿತ್ತೂರು ಉತ್ಸವ ನಡೆಯುತ್ತಿರುವದು ನಮ್ಮ ಹೆಮ್ಮೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಮಂಗಳವಾರ ಸಂಜೆ ನಡೆದ ಕರ್ನಾಟಕ ಸರ್ಕಾರ, ಜಿಲ್ಲಾ ಆಡಳಿತ, ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಚನ್ನಮ್ಮನ ಕಿತ್ತೂರು ಉತ್ಸವ 2024 ರ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಯಾಂಡಲವುಡ, ಬಾಲಿವುಡ ಗಾಯಕ ಕೂನಾಲ ಗಾಂಜಾವಾಲ, ಕನ್ನಡದ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಅವರು ನಡೆಸಿಕೊಡುವ ಮತ್ತು ಸ್ವಾತಂತ್ರ್ಯ ಸಂಗ್ರಾಮ ಗೀತೆಗಳ, ಹಾಡು, ಭರತ ನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ ಮಾತನಾಡಿ ಇಂದು ಬೆಳಗಾವಿಯಲ್ಲಿ ಉತ್ಸವ ನಾಳೆಯಿಂದ ಮೂರು ದಿನಗಳ ಕಾಲ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಅದ್ದೂರಿ ಕಿತ್ತೂರು ಉತ್ಸವ ನೆರವೇರುವದು ಎಂದರು.
ಕಾರ್ಯಕ್ರಮದಲ್ಲಿ ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಶಾಸಕ ರಾಜು ಸೆಟ್, ಎಮ್ ಎಲ್ ಸಿ ಚನ್ನರಾಜ್ ಹಟ್ಟಿಹೊಳಿ, ಮೇಯರ್, ಉಪಮೆಯರ, ಆಡಳಿತ ಇಲಾಖೆಯ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು . ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ ಕನ್ನಡದ ಅಭಿಮಾನಿಗಳಿಗೆ ಕಿತ್ತೂರು ಉತ್ಸವದ ಸಮೃಮದ ಕಾರ್ಯಕ್ರಮ ಮನಸೊರೆಗೊಂಡಿತು.