ಬೆಳಗಾವಿ: ವೀರ ಮಹಿಳೆ, ಧಿಟ್ಟ ಸ್ವಾತಂತ್ರ್ಯ ಹೋರಾಟಗಾರ್ತಿ, ಕಿತ್ತೂರು ನಾಡಿನ ಎಂದೆಂದಿಗೂ ಮರೆಯದ ಸ್ಫೂರ್ತಿಯ ಹೆಮ್ಮೆಯ ತಾಯಿ ಕಿತ್ತೂರು ಚಮ್ಮಮ್ಮಾಜಿಯಾ ಉತ್ಸವ ಆಚರಣೆಗೆ ಬರುವ ದಸರಾ ಸಂದರ್ಭದಲ್ಲಿ 200 ವರ್ಷಗಳ ಕಿತ್ತೂರು ಉತ್ಸವ ಸಂಭ್ರಮ ಆಚರಣೆ ನಿಮಿತ್ಯವಾಗಿ ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರ ಪ್ರಯತ್ನದ ಫಲವಾಗಿ ಸೋಮವಾರದಂದು ಬೆಂಗಳೂರು ವಿಧಾನ ಸಭೆಯಲ್ಲಿ ನಡೆದ ಶಾಸಕರು ಮತ್ತು ಜಿಲ್ಲಾಡಳಿತದ ಕೋರಿಕೆ ಮೇರೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಿತ್ತೂರು ಕೋಟೆ ಆವರಣದ 7 ಎಕರೆ ವಿಸ್ತೀರ್ಣದಲ್ಲಿ ಭವ್ಯ ಥೀಮ್ ಪಾರ್ಕ್ ನಿರ್ಮಾಣಕ್ಕೆ 35 ಕೋಟಿ ರೂಪಾಯಿ ಮತ್ತು ಕಿತ್ತೂರು ಅಭಿವೃದ್ಧಿ ಪ್ರಧಿಕಾರದಿಂದ 5 ಕೋಟಿ ರೂಪಾಯಿ ಒಟ್ಟು 40 ಕೋಟಿ ರೂಪಾಯಿಗಳ ಅನುಧಾನವನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ,ಚನ್ನಮ್ಮನ ಶಾಸಕ ಬಾಬಾಸಾಹೇಬ ಪಾಟೀಲ,ಜಿಲ್ಲಾಧಿಕಾರಿ ಮಹಮ್ಮದ ರೋಷನ್, ಜಿಲ್ಲಾ, ಕಿತ್ತೂರ ತಾಲೂಕ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.