ತುಮಕೂರು, (ಮಾರ್ಚ್ 13): ಪಡ್ಡೆ ಹುಡುಗರಿಗೆ ನಶೆ ಏರಿಸೋ ನಿಶಾ ತುಮಕೂರಿನ ಕ್ಯಾತ್ಸಂದ್ರದ ನಿವಾಸಿ. ಹಣವಂತರಿಗೆ ಹನಿಟ್ರ್ಯಾಪ್ ಮೂಲಕ ಗಾಳಹಾಕಿ ದುಡ್ಡು ಪೀಕುತ್ತಿದ್ದ ಐನಾತಿ. ಇದೇ ನಿಶಾ ಗುಬ್ಬಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಅಣ್ಣಪ್ಪಸ್ವಾಮಿಗೆ ಹನಿಟ್ರ್ಯಾಪ್ ಮಾಡಿ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾಳೆ. ಹೌದು…ಬೆತ್ತಲೆ ವಿಡಿಯೋ ಇಟ್ಟುಕೊಂಡು 20 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾಳೆ. ಸಾಲದಕ್ಕೆ ಹಣ ಕೊಡದಿದ್ದರೇ ರೇಪ್ ಕೇಸ್ ಹಾಕುವುದಾಗಿ ಬೆದರಿಸಿ ಸೋಷಿಯಲ್ ಮೀಡಿಯಾದಲ್ಲಿ ಬೆತ್ತಲೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿ ಇದೀಗ ಲಾಕ್ ಆಗಿದ್ದಾಳೆ.
ಬಿಜೆಪಿ ಮುಖಂಡನ ಬೆತ್ತಲೆ ವಿಡಿಯೋಗೆ 20 ಲಕ್ಷ ಡಿಮ್ಯಾಂಡ್: ಹನಿಟ್ರ್ಯಾಪ್ ಲೀಡರ್ ನಿಶಾ ಅಂದರ್:

ಫೇಸ್ಬುಕ್ ಮೂಲಕ ಅಣ್ಣಪ್ಪ ಸ್ವಾಮಿಗೆ ಪ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯವಾಗಿದ್ದ ನಿಶಾ, ಪ್ರತಿದಿನ ಗುಡ್ ಮಾರ್ನಿಂಗ್, ಗುಡ್ನೈಟ್ ಎಂದು ಮೇಸೇಜ್ ಕಳಿಸಿ ಕೊನೆಗೆ ಲಾಡ್ಜ್ ಕರೆತಂದು ಚಕ್ಕಂದವಾಡಿದ್ದಾಳೆ. ಬಳಿಕ ಆ ವಿಡಿಯೋ ಇಟ್ಟುಕೊಂಡು ಆಟ ಆಡಲು ಹೋಗಿ ಜೈಲು ಸೇರಿದ್ದಾಳೆ.