ಸ್ವಾತಂತ್ರ್ಯದಿನದಂದು 2 ಲಕ್ಷ ಜನರಿಂದ ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ ವೀಕ್ಷಣೆ!

Ravi Talawar
ಸ್ವಾತಂತ್ರ್ಯದಿನದಂದು 2 ಲಕ್ಷ ಜನರಿಂದ ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ ವೀಕ್ಷಣೆ!
WhatsApp Group Join Now
Telegram Group Join Now

ಬೆಂಗಳೂರು: 78ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಪುಷ್ಪಕಾಶಿ ಲಾಲ್​ಬಾಗ್​ನಲ್ಲಿ ಆಯೋಜಿಸಿರುವ 216ನೇ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಸುಮಾರು 2.10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಕುರಿತ ಪ್ರದರ್ಶನವನ್ನು ವೀಕ್ಷಿಸಿದರು.

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಸೇರಿದಂತೆ ನಗರದ ಎಲ್ಲ ರೀತಿಯ ಕಚೇರಿಗಳಿಗೆ ಸಾರ್ವತ್ರಿಕ ರಜೆ ಇತ್ತು. ಹೀಗಾಗಿ, ಬೆಂಗಳೂರು ನಗರ ಮಾತ್ರವಲ್ಲದೇ, ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಆಗಮಿಸಿ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಬೆಂಗಳೂರು ನಗರ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಸಾವಿರಾರು ಜನ ಲಾಲ್‌ಬಾಗ್‌ನಲ್ಲಿ ಕಳೆದರು. ದಿನಪೂರ್ತಿ ಬಿಸಿಲಿದ್ದರೂ ಮಧ್ಯಾಹ್ನದ ಬಳಿಕ ನಗರದಲ್ಲಿ ತುಂತುರು ಮಳೆಯಾಯಿತು.

ಈ ನಡುವೆ ಜನರು ಗಾಜಿನ ಮನೆಯ ಒಳಪ್ರವೇಶಕ್ಕೆ ಉದ್ದುದ್ದದ ಸಾಲುಗಳಲ್ಲಿ ನಿಂತು ಪ್ರದರ್ಶನ ವೀಕ್ಷಣೆ ಮಾಡುತ್ತ ಸೆಲ್ಫಿ, ಫೋಟೋ ತೆಗೆಯುವುದರಲ್ಲಿ ನಿರತರಾಗಿದ್ದರು. ಪ್ರದರ್ಶನದಲ್ಲಿ ಪ್ರಮುಖವಾಗಿ ಸಂಸತ್ ಭವನ ಹಾಗೂ ಅಂಬೇಡ್ಕರ್​ ಅವರು ಸಂವಿಧಾನ ರಚನಾ ಸಭೆಯಲ್ಲಿ ಭಾಷಣ ಮಾಡಿರುವ ದೃಶ್ಯಗಳು ಅತ್ಯಂತ ಪ್ರಮುಖ ಆಕರ್ಷಣೆಯಾಗಿತ್ತು. ಜೊತೆಗೆ, ತ್ರಿವರ್ಣ ಬಣ್ಣಗಳಲ್ಲಿ ರಚನೆ ಮಾಡಿರುವ ಭಾರತದ ಭೂಪಟದ ಮುಂದೆ ಏಕಕಾಲಕ್ಕೆ ಜನರು ಆಗಮಿಸುತ್ತಿದ್ದರು.

WhatsApp Group Join Now
Telegram Group Join Now
Share This Article