ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಇಬ್ಬರಲ್ಲಿ HMPV ವೈರಸ್ ಪತ್ತೆಯಾಗಿದ್ದು, 13 ಮತ್ತು 7 ವರ್ಷ ವಯಸ್ಸಿನ ಮಕ್ಕಳಲ್ಲಿ ಗುರುತಿಸಲಾಗಿದೆ. ಈ ಎರಡೂ ಶಂಕಿತ ರೋಗಿಗಳ ರಕ್ತದ ಮಾದರಿಗಳನ್ನು ನಾಗ್ಪುರದ ಏಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಉಪನಿರ್ದೇಶಕ ಶಶಿಕಾಂತ್ ಶಂಭರ್ಕರ್ ತಿಳಿಸಿದ್ದಾರೆ.
ಆರೋಗ್ಯ ಉಪ ನಿರ್ದೇಶಕ ಶಶಿಕಾಂತ್ ಶಂಭರ್ಕರ್ ಅವರ ಪ್ರಕಾರ, ನಾಗಪುರದಲ್ಲಿ ಇಬ್ಬರು ಶಂಕಿತ ಎಚ್‌ಎಂಪಿವಿ ರೋಗಿಗಳು ಪತ್ತೆಯಾಗಿದ್ದಾರೆ. ಈ ರೋಗಿಗಳಲ್ಲಿ ಒಬ್ಬರಿಗೆ 7 ವರ್ಷ ಮತ್ತು ಇನ್ನೊಬ್ಬರಿಗೆ 13 ವರ್ಷ. ಈ ಎರಡೂ ರೋಗಿಗಳ ವರದಿಗಳು ಖಾಸಗಿ ಆಸ್ಪತ್ರೆಯಲ್ಲಿ ಪಾಸಿಟಿವ್ ಬಂದಿವೆ. ಈ ಎರಡೂ ರೋಗಿಗಳಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಇಬ್ಬರ ರಕ್ತದ ಮಾದರಿಗಳು ಮತ್ತು ಪರೀಕ್ಷೆಯ ವರದಿಗಳನ್ನು ನಾಗ್ಪುರ ಏಮ್ಸ್ ಗೆ ಕಳುಹಿಸಲಾಗಿದೆ.
ದೇಶದಲ್ಲಿ ಈಗಾಗಲೇ HMPV ಯ 5 ಪ್ರಕರಣಗಳನ್ನು ಪತ್ತೆಹಚ್ಚಿದೆ. ಬೆಂಗಳೂರು, ಗುಜರಾತ್, ತಮಿಳು ನಾಡುಗಳಲ್ಲಿ ವರದಿಯಾಗಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಬೆಂಗಳೂರಿನಲ್ಲಿ ಎರಡು HMPV ಪ್ರಕರಣಗಳನ್ನು ದೃಢಪಡಿಸಿದೆ ಮತ್ತು ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ದೇಶಾದ್ಯಂತ ಉಸಿರಾಟದ ಕಾಯಿಲೆಗಳನ್ನು ಮೇಲ್ವಿಚಾರಣೆ ಮಾಡಲು ನಡೆಯುತ್ತಿರುವ ಕಣ್ಗಾವಲು ಪ್ರಯತ್ನಗಳ ಭಾಗವಾಗಿ ಈ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.