ಸಂಜನಾ ಹಳ್ಯಾಳ ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 1900 ನೇ ರ್ಯಾಂಕ್: ಗ್ರಾಮಸ್ಥರಿಂದ ಸತ್ಕಾರ

Ravi Talawar
ಸಂಜನಾ ಹಳ್ಯಾಳ ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 1900 ನೇ ರ್ಯಾಂಕ್: ಗ್ರಾಮಸ್ಥರಿಂದ ಸತ್ಕಾರ
WhatsApp Group Join Now
Telegram Group Join Now
ಕಾಗವಾಡ:ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದ ಸಂಜನಾ ಶಶಿಕಾಂತ ಹಳ್ಯಾಳ ಈತಳು ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 1900 ನೇ ರ್ಯಾಂಕ್ ಪಡೆದು  ಎಮ್ ಬಿಬಿಎಸ್ ಪದವಿಗೆ ಅರ್ಹತೆ ಪಡೆದು ಕೊಪ್ಪಳದ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಕೊಪ್ಪಳದಲ್ಲಿ ಪ್ರವೇಶ ಪಡೆಯಲಿದ್ದು,ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ‌.
ರವಿವಾರ ದಿ.24 ರಂದು ಪಟ್ಟಣದ ಆರ್ ಹೋಟೆಲ್ ನಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿನಿ ಸಂಜನಾ ಹಳ್ಯಾಳರನ್ನು ಗ್ರಾಮಸ್ಥರು ಸನ್ಮಾನಿಸಿ ಅವಳ ಉಜ್ವಲ ಭವಿಷ್ಯಕ್ಕೆ ಶುಭ ಕೋರಿದ್ದಾರೆ.
ಇದೆ ವೇಳೆ ಯುವ ಮುಖಂಡರಾದ ನಿಜಗುಣಿ ಮಗದುಮ್ ಮಾತನಾಡಿ, ಸಂಜನಾ ಹಳ್ಯಾಳ ಈತಳು ಎಮ್ ಬಿಬಿಎಸ್ ಪದವಿಗೆ ಅರ್ಹತೆ ಪಡೆದದ್ದು ಎಲ್ಲ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಇಮ್ಮಡಿಗೊಳಿಸುವಂತೆ ಮಾಡಿದೆ. ಇದು ಗ್ರಾಮಸ್ಥರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಇದೆ ವೇಳೆ ಚನ್ನಮ್ಮನ ಕಿತ್ತೂರು ತಹಶಿಲ್ದಾರ ಕಲಗೌಡ ಪಾಟೀಲ್,ಮುಖ್ಯ ಪಶು ವೈಧ್ಯಾಧಿಕಾರಿಗಳಾದ ಡಾ. ಡಿ ಜೆ ಕಾಂಬಳೆ ಅಭಿನಂದನಾ ಪರ ಮಾತನಾಡಿದರು.
ನಂತರ ಸಂಜನಾ ಶಶಿಕಾತ ಹಳ್ಯಾಳ ಇತಳನ್ನು ಗ್ರಾಮಸ್ಥರೆಲ್ಲರೂ ಸತ್ಕರಿಸಿ ಅಭಿನಂದಿಸಿದರು.
ಈ ವೇಳೆ ಅಧ್ಯಕ್ಷತೆಯನ್ನು ಮದಭಾವಿ ಗ್ರಾಪಂ ಅಧ್ಯಕ್ಷ ಮಹದೇವ ಕೋರೆ ವಹಿಸಿದ್ದರು.ಡಾ.ಶಶಿಕಾಂತ ಹಳ್ಯಾಳ,ಅಲಗೌಡ ಮುದಿಗೌಡರ,ಡಾ.ವಿಜಯ ಕುರೆಣ್ಣನವರ,ಡಾ.ಸಂಜಯ ಕುರೆಣ್ಣನವರ,ಮಹಾಂತೇಶ ಘೂಳಪ್ಪನವರ ಸೇರಿದಂತೆ ಮದಭಾವಿ,ವಜ್ರವಾಡ,ನದಿ ಇಂಗಳಗಾಂವಿ,ಅಥಣಿಯಿಂದ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
WhatsApp Group Join Now
Telegram Group Join Now
Share This Article