ತೈಪೆ, ತೈವಾನ್: ಮಂಗಳವಾರ J-16 ಮತ್ತು KJ-500 ಸೇರಿದಂತೆ 21 ಚೀನಾದ ಮಿಲಿಟರಿ ವಿಮಾನಗಳು ತನ್ನ ವಾಯು ಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯ ತಿಳಿಸಿದೆ. 21 ಪೀಪಲ್ಸ್ ಲಿಬರೇಶನ್ ಆರ್ಮಿ -ಪಿಎಲ್‌ಎ ವಿಮಾನಗಳಲ್ಲಿ ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿ ಉತ್ತರ, ಮಧ್ಯ, ನೈಋತ್ಯ ಮತ್ತು ಪೂರ್ವ ತೈವಾನ್‌ನ ಪೂರ್ವ ವಾಯು ರಕ್ಷಣಾ ಗುರುತಿನ ವಲಯ ಪ್ರವೇಶಿಸಿದೆ ಎಂದು ಅಲ್ಲಿನ ಸಚಿವಾಲಯ ತಿಳಿಸಿದೆ.
“21 PLA ವಿಮಾನಗಳು ವಿವಿಧ ಪ್ರಕಾರಗಳಲ್ಲಿ ಪತ್ತೆಯಾಗಿವೆ. ಅವುಗಳಲ್ಲಿ 18 ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿ ಉತ್ತರ, ಮಧ್ಯ, ನೈಋತ್ಯವನ್ನು ಪ್ರವೇಶಿಸಿವೆ ಎಂದು ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯವು X ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ. ಸೋಮವಾರ, ತೈವಾನ್ 9 ಚೀನೀ ಮಿಲಿಟರಿ ವಿಮಾನಗಳು ಮತ್ತು 9 ನೌಕಾ ಹಡಗುಗಳು ತೈವಾನ್ ಸುತ್ತಲೂ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿತ್ತು, ಅದರಲ್ಲಿ 6 ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿ ತೈವಾನ್‌ನ ಪೂರ್ವ ವಾಯು ರಕ್ಷಣಾ ಗುರುತಿನ ವಲಯವನ್ನು ಪ್ರವೇಶಿಸಿವೆ ಎಂದು ತೈವಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಗಸ್ಟ್ ಆರಂಭದಿಂದ ಇಲ್ಲಿಯವರೆಗೆ 71 ವಿಮಾನ ಗಳು ಹಾಗೂ 36 ಬಾರಿ ಚೀನಾದ ಹಡಗುಗಳನ್ನು ಪತ್ತೆ ಮಾಡಲಾಗಿದೆ ಎಂದು ತೈವಾನ್ ನ್ಯೂಸ್ ವರದಿ ಮಾಡಿದೆ. ಸೆಪ್ಟೆಂಬರ್ 2020 ರಿಂದ ತೈವಾನ್ ಸುತ್ತಲೂ ಚೀನಾದ ಮಿಲಿಟರಿ ವಿಮಾನಗಳು ಮತ್ತು ನೌಕಾ ಹಡಗುಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಚೀನಾ ತನ್ನ ಹಿಡಿತವನ್ನು ಸಾಧಿಸುವ ಯತ್ನವನ್ನು ಮತ್ತಷ್ಟು ತೀವ್ರಗೊಳಿಸಿದೆ. ತೈವಾನ್ ನ್ಯೂಸ್ ವರದಿಯ ಪ್ರಕಾರ, ಚೀನಾ ತೈವಾನ್ ಅನ್ನು ನೇರವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಅದರ ಹಿಡಿತವನ್ನು ಬಿಗಿಗೊಳಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದೆ.