೧೭ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ : ವಿಜಯಾನಂದ ಕಾಶಪ್ಪನವರ

Sandeep Malannavar
೧೭ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ : ವಿಜಯಾನಂದ ಕಾಶಪ್ಪನವರ
WhatsApp Group Join Now
Telegram Group Join Now

ಹುನಗುಂದ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಟಿಎಪಿಸಿಎಂಎಸ್ ಸಹಯೋಗದಲ್ಲಿ ೨೦೨೫-೨೬ನೇ ಸಾಲಿನ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಮಂಗಳವಾರ ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸುವ ಮೂಲಕ ಖರೀದಿಗೆ ಚಾಲನೆ ನೀಡಿದರು.
ಈ ವೇಳೆ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ತೊಗರಿ ಪ್ರತಿ ಕ್ವಿಂಟಲಗೆ ೮ ಸಾವಿರ ರೂ. ದಂತೆ ಬೆಂಬಲ ಬೆಲೆಯನ್ನು ನಿಗಧಿಗೊಳ್ಳಿಸಿ ಖರೀದಿಸುವ ಮೂಲಕ ರೈತರ ಬೆಳೆದ ಬೆಳೆಗೆ ಪ್ರಾಮಾಣಿಕ ಬೆಲೆ ಕಲ್ಪಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ಮಾಡಿದ್ದಾರೆ.
ಈಗಾಗಲೇ ಸೂರ್ಯಕಾಂತಿ, ಹೆಸರು ಸೇರಿದಂತೆ ಅನೇಕ ಬೆಳೆಗಳಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿದೆ. ಮೆಕ್ಕೆಜೋಳಕ್ಕೂ ಕೂಡಾ ಬೆಂಬಲ ಬೆಲೆಯಲ್ಲಿ ಖರೀದಿಸಲು ನಮ್ಮ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಕೂಡಾ ಆರಂಭಿಸಲಾಗುವುದು. ಈ ಬಾರಿ ಅತಿಯಾದ ಮಳೆಯಿಂದ ರೈತರ ಸಾಕ? ಬೆಳೆ ನ?ವಾಗಿದ್ದು, ನ?ವಾದ ಬೆಳೆಗೆ ನಮ್ಮ ಸರ್ಕಾರ ಈಗಾಗಲೆ ೨೬೦೦ ಕೋಟಿ ನಷ್ಟ ಪರಿಹಾರವನ್ನು ಕೂಡಾ ರೈತರಿಗೆ ನೀಡಿದೆ. ಈ ಬಾರಿ ಹುನಗುಂದ ಮತ್ತು ಇಳಕಲ್ ಅವಳಿ ತಾಲೂಕಿನ ರೈತರು ಈಗಾಗಲೆ ಹೆಚ್ಚಿನ ಕ್ಷೇತ್ರದಲ್ಲಿ ತೊಗರಿಯನ್ನು ಬೆಳೆದಿದ್ದಾರೆ. ರೈತರಿಗೆ ಅನುಕೂಲವಾಗಲಿ ಎಂದು ಜಿಲ್ಲಾಧಿಕಾರಿಗಳಿಗೆ ಮಾತನಾಡಿ, ಅವಳಿ ತಾಲೂಕಿನಲ್ಲಿ ಹೆಚ್ಚಿನ ಖರೀದಿ ಕೇಂದ್ರ ತೆರೆಯಬೇಕೆಂದು ತಿಳಿಸಿದಾಗ ಈ ಬಾರಿ ೧೭ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು. ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ದಂಡಿನ ಮಾತನಾಡಿ, ಸರ್ಕಾರ ಮತ್ತು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಆದೇಶದಂತೆ ತೊಗರಿ ಬೆಳೆಗೆ ಪ್ರತಿ ಕ್ವಿಂಟಲ್‌ಗೆ ೮ ಸಾವಿರದಂತೆ ಖರೀದಿಸುತ್ತಿದ್ದು. ಈಗಾಗಲೇ ಅವಳಿ ತಾಲೂಕಿನಲ್ಲಿ ೪೯೨೯ ತೊಗರಿ ಬೆಳೆದ ರೈತರು ನೋಂದಣಿ ಮಾಡಿಕೊಂಡಿದ್ದು. ನೋಂದಣಿ ಕಾರ್ಯ ೮೦ ದಿನಗಳವರೆಗೆ ನಡೆದಿದ್ದು, ಖರೀದಿ ಪ್ರಕ್ರಿಯೆ ೯೦ ದಿನಗಳವರೆಗೆ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಟಿಎಪಿಸಿಎಂಎಸ್ ಅಧ್ಯಕ್ಷ ಜೈನಸಾಬ ಹಗೇದಾಳ, ಮುಖಂಡರಾದ ಶೇಖರಪ್ಪ ಬಾದವಾಡಗಿ, ಬಸವರಾಜ ಗದ್ದಿ, ಸಂಗಣ್ಣ ಗಂಜಿಹಾಳ, ಸಂಜೀವ ಜೋಶಿ, ಮಹಾಲಿಂಗಯ್ಯ ಹಿರೇಮಠ, ಪ್ರಭು ಇದ್ದಲಗಿ ಸೇರಿದಂತೆ ಟಿಪಿಸಿಎಂಎಸ್‌ನ ಸದಸ್ಯರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು.”
ಬಾಕ್ಸ್; ರೈತರು ಬೆಳೆದ ಪ್ರತಿಯೊಂದು ಬೆಳೆಗೆ ಬೆಲೆ ನಿಗದಿಗೊಳಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು. ಇತ್ತೀಚಿಗೆ ಕಬ್ಬು ಬೆಳೆಗಾರರು ಕಬ್ಬು ಬೆಳೆಗೆ ಸೂಕ್ತ ಬೆಲೆಯನ್ನು ನಿಗದಿಗೊಳಿಸುವಂತೆ ಹೋರಾಟ ಮಾಡಿದಾಗಲೂ ಕೇಂದ್ರ ಸರ್ಕಾರ ರೈತರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಕಬ್ಬಿಗೆ ಸೂಕ್ತ ಬೆಲೆಯನ್ನು ನಿಗದಿಗೊಳಸದೇ ರೈತರೊಂದಿಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆಯನ್ನು ನ್ನು ತೋರಿದಾಗ ನಮ್ಮ ಸರ್ಕಾರ ಪ್ರತಿ ಟನ್‌ಗೆ ೨೫೦ ರೂ. ಕಬ್ಬು ಬೆಳೆಗಾರರಿಗೆ ಸಹಾಯ ಧನ ನೀಡಿದೆ. ಇನ್ನು ಕಳೆದ ನಾಲ್ಕು ವ? ಬಿಜೆಪಿ ಸರ್ಕಾರ ಅವಧಿಯಲ್ಲಿ ಒಂದು ಬೆಳೆಗೂ ಕೂಡಾ ಬೆಂಬಲ ಬೆಲೆಯನ್ನು ಕೊಡಲಿಲ್ಲ.
ವಿಜಯಾನಂದ ಕಾಶಪ್ಪನವರ ಶಾಸಕರು, ಹುನಗುಂದ ಮತಕ್ಷೇತ್ರ
ತೊಗರಿ ಬೆಳಗೆ ೪೫೦ ರೂ. ಸಹಾಯ ಧನ ನೀಡಲು ರೈತರ ಮನವಿ;
ತೊಗರಿ ಬೆಳೆಗೆ ಸರ್ಕಾರ ಈಗಾಗಲೇ ಪ್ರತಿ ಕ್ವಿಂಟಲ್‌ಗೆ ೮ ಸಾವಿರ ಬೆಂಬಲ ಬೆಲೆ ಘೋಷಿಸಿದ್ದು ಅದರ ಜೊತೆಗೆ ಸರ್ಕಾರ ೪೫೦ ರೂ ಹೆಚ್ಚಿನ ಸಹಾಯ ಧನ ನೀಡಬೇಕೆಂದು ರೈತ ಮುಖಂಡರು ಶಾಸಕರಿಗೆ ಮನವಿ ಸಲ್ಲಿಸಿದರು.

 

WhatsApp Group Join Now
Telegram Group Join Now
Share This Article