ನವದೆಹಲಿ, ಸೆಪ್ಟೆಂಬರ್ 15: ಕೇರಳದಲ್ಲಿ ಅತ್ಯಂತ ಅಪರೂಪದ ಆದರೆ ಮಾರಕವಾದ ಮೆದುಳಿನ ಸೋಂಕು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ನ (brain eating amoeba) ಹೊಸ ಪ್ರಕರಣ ವರದಿಯಾಗಿದ್ದು, ತಿರುವನಂತಪುರಂನಲ್ಲಿ 17 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಎಚ್‌ಎಸ್) ಈ ವರ್ಷ ಇಲ್ಲಿಯವರೆಗೆ 17 ಜನರು ಸಾವನ್ನಪ್ಪಿದ್ದಾರೆ. ಒಟ್ಟು 67 ಜನರು ಅಪರೂಪದ ಮೆದುಳು ತಿನ್ನುವ ಅಮೀಬಾದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಡಿಸಿದೆ. ಆರೋಗ್ಯ ಇಲಾಖೆಯು ಕೇವಲ 2 ದೃಢಪಡಿಸಿದ ಸಾವುಗಳು ಸಂಭವಿಸಿವೆ ಎಂದು ಹೇಳಿತ್ತು, ಇನ್ನೂ 14 ಪ್ರಕರಣಗಳು ಪರಿಶೀಲನೆಯಲ್ಲಿವೆ.
ಕೇರಳದಲ್ಲಿ ಮೆದುಳು ತಿನ್ನುವ ಸೋಂಕಿಗೆ 17 ಮಂದಿ ಬಲಿ, 67ಮಂದಿಗೆ ಸೋಂಕು

ಸೆಪ್ಟೆಂಬರ್ 12ರಂದು ಎರಡು ಹೊಸ ಪ್ರಕರಣಗಳು ವರದಿಯಾಗಿದ್ದು, ಈ ತಿಂಗಳ ಸಂಖ್ಯೆ 19 ಪ್ರಕರಣಗಳು ಮತ್ತು 7 ಸಾವುಗಳಿಗೆ ಏರಿದೆ. ಆರೋಗ್ಯ ಇಲಾಖೆಯು ಅಕ್ಕುಳಮ್ ಪ್ರವಾಸಿ ಗ್ರಾಮದಲ್ಲಿ ಈಜುಕೊಳವನ್ನು ಮುಚ್ಚಿ ಪರೀಕ್ಷೆಗಾಗಿ ನೀರಿನ ಮಾದರಿಗಳನ್ನು ಸಂಗ್ರಹಿಸಿದೆ. ಈ ಬಾಲಕ ಹಿಂದಿನ ದಿನ ಸ್ನೇಹಿತರೊಂದಿಗೆ ಈಜುಕೊಳಕ್ಕೆ ಭೇಟಿ ನೀಡಿದ್ದ ಮತ್ತು ಅಲ್ಲಿ ಸ್ನಾನ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 14ರಂದು ಇಲಾಖೆಯ ವೆಬ್ಸೈಟ್ನಲ್ಲಿ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಅಡಿಯಲ್ಲಿ ಬಿಡುಗಡೆಯಾದ ನವೀಕರಿಸಿದ ಮಾಹಿತಿಯ ಪ್ರಕಾರ, ಈ ವರ್ಷ ಕೇರಳದಲ್ಲಿ 67 ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಪ್ರಕರಣಗಳು ದಾಖಲಾಗಿದ್ದು, 17 ಸಾವುಗಳು ಸಂಭವಿಸಿವೆ.