“ದಿ.3ರಿಂದ ಮೂಡಲಗಿಯಲ್ಲಿ 15ನೇ ಸತ್ಸಂಗ ಸಮ್ಮೇಳನ”

Chandrashekar Pattar
“ದಿ.3ರಿಂದ ಮೂಡಲಗಿಯಲ್ಲಿ  15ನೇ ಸತ್ಸಂಗ ಸಮ್ಮೇಳನ”
Oplus_131072
WhatsApp Group Join Now
Telegram Group Join Now

ಮೂಡಲಗಿ: ಮಂಗಳವಾರ ದಿ. 3 ರಿಂದ 9 ರವರಿಗೆ, ಸಂಜೆ 6 ಗಂಟೆಯಿಂದ 15ನೇ ಸತ್ಸಂಗ ಸಮ್ಮೇಳನ ಪಟ್ಟಣದ ಆರ್.ಡಿ.ಎಸ್ ಕಾಲೇಜು ಆವರಣದಲ್ಲಿ ಜರುಗಲಿದೆ ಎಂದು ವೇದಮೂರ್ತಿ ಶ್ರೀ ಶಂಕರಯ್ಯಾ ಹಿರೇಮಠ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಗಾಂಧಿ ಚೌಕ ಹತ್ತಿರದ ಗುರು ಮಠದಲ್ಲಿ 15ನೇ ಸತ್ಸಂಗ ಸಮ್ಮೇಳನದ ಪ್ರಚಾರ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪರಮಪೂಜ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರು ಸತ್ಸಂಗದ ಅಧ್ಯಕ್ಷತೆ ವಹಿಸಿ, ಪ್ರವಚನ ಕಾರ್ಯಕ್ರಮ ನಡೆಸಿಕೊಡುವರು. ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿಗಳು ಉದ್ಘಾಟಿಸುವರು. ಮಹಾಲಿಂಗಪೂರ ಸಿದ್ದಾರೂಢ ಮಠ ಶ್ರೀ ಸಹಜಾನಂದ ಸ್ವಾಮಿಗಳು, ಕಲಬುರ್ಗಿಯ ಎಂ.ಎ.ಪೂರ್ಣಪ್ರಜ್ಞಾ ಯೋಗಾಶ್ರಮದ ಮಾತೊಶ್ರೀ ಲಕ್ಷ್ಮೀ ತಾಯಿಯವರು, ಜೋಡಕುರಳಿ ಸಿದ್ದಾರೂಢ ಮಠ ಶ್ರೀ ಚಿದ್ಚನಾನಂದ ಭಾರತಿ ಸ್ವಾಮೀಜಿ, ಶಿವಾಪೂರ(ಹ) ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ದರಾಮ ಸ್ವಾಮೀಜಿ, ಇಟನಾಳ ಮೈಲಾರಲಿಂಗೇಶ್ವರ ದೇವಸ್ಥಾನ ಮತ್ತು ಸಿದ್ದೇಶ್ವರ ಆಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಜೀಯವರು ಭಾಗವಹಿಸುವರು. ಒಂದು ವಾರದ ವರೆಗೆ ಜರುಗಲಿರುವ ಈ ಪ್ರವಚನ ಕಾರ್ಯಕ್ರಮದ ನಂತರ ಪ್ರತಿದಿನ ಬಂದ ಭಕ್ತಾದಿಗಳಿಗೆಲ್ಲ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಲಾಸ ನಾಶಿ, ನೇಮಣ್ಣಾ ಬೇವಿನಕಟ್ಟಿ, ತಮ್ಮಣ್ಣ ಗಡಾದ, ಹನಮಂತ ಗುಬಚಿ ಸೇರಿದಂತೆ ಅನೇಕರು ಇದ್ದರು.

WhatsApp Group Join Now
Telegram Group Join Now
Share This Article