ಜೈಪುರ: ರಾಜಸ್ಥಾನದಾದ್ಯಂತ ಭಾರೀ ಮಳೆಯಾಗಿದ್ದು, ನಿನ್ನೆ ಭಾನುವಾರ 15 ಜನರ ದುರಂತ ಸಾವಿಗೆ ಕಾರಣವಾಗಿದೆ. ವಿವಿಧ ಜಿಲ್ಲೆಗಳಲ್ಲಿ ಸಾವು ಸಂಭವಿಸಿದೆ. ಭರತ್‌ಪುರದಲ್ಲಿ ಏಳು, ಜುಂಜುನುದಲ್ಲಿ ಮೂರು, ಕರೌಲಿಯಲ್ಲಿ ಮೂರು, ಜೋಧ್‌ಪುರದಲ್ಲಿ ಒಬ್ಬರು ಮತ್ತು ಬನ್ಸ್ವಾರಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಪ್ರತ್ಯೇಕ ಘಟನೆಗಳಲ್ಲಿ, ಜೈಪುರ ಸಮೀಪದ ಕನೋಟಾ ಅಣೆಕಟ್ಟಿನಲ್ಲಿ ಐವರು ಯುವಕರು ಮುಳುಗಿ ಮೃತಪಟ್ಟಿದ್ದು, ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಸ್ಥಳೀಯ ಗ್ರಾಮಸ್ಥರು ಒಂದು ಗಂಟೆ ಕಾಲ ಶ್ರಮವಹಿಸಿ ಮೃತದೇಹಗಳನ್ನು ಹೊರತೆಗೆಯಲು ಪ್ರಯತ್ನಿಸಿದರೂ, ಸಕಾಲದಲ್ಲಿ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಎರಡು ಮೃತದೇಹಗಳನ್ನು ಭರತ್‌ಪುರದ ಆರ್‌ಬಿಎಂ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಇತರ ಐವರು ಹತ್ತಿರದ ಶವಾಗಾರದಲ್ಲಿವೆ. ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಪಂಚನ ಅಣೆಕಟ್ಟಿಗೆ ಭಾರಿ ಒಳಹರಿವು ಉಂಟಾಗಿದೆ.