ಬಳ್ಳಾರಿ:12 ಶಿಕ್ಷಣ ಇಲಾಖೆ 2018 ರ ನಂತರ ಆರಂಭಿಸಿರುವ ಶಾಲೆಗಳಿಗೆ ಮಾತ್ರ ಹೊಸ ನಿಯಮಗಳು ಅನ್ವಯಿಸಲಿ. ಆದರೆ ಹಳೇ ಶಾಲೆಗಳಿಗೆ ಹೊಸ ನಿಯಮಗಳು ಬೇಡ. ಇದಕ್ಕಾಗಿ ಎಷ್ಟು ಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸದೇ ಇರುವ ಕಾರಣ ಆ.15 ರಂದು ಕರಾಳ ದಿನಾಚರಣೆಯ ಅಂಗವಾಗಿ ನಮ್ಮ ಸಂಘಟನೆಯ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಆ.15 ರಂದು ಕಪ್ಪು ಪಟ್ಟಿ ಧರಿಸಿಕೊಂಡು ಮೌನ ಪ್ರತಿಭಟನೆ ನಡೆಸಲಿದ್ದಾರೆಂದು ಬಳ್ಳಾರಿ ಅನುದಾನ ರಹಿತ ಶಾಲೆಗಳ ಆಡಳಿತ ಒಕ್ಕೂಟ ಹೇಳಿದೆ.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಒಕ್ಕೂಟದ ಕಾರ್ಯದರ್ಶಿ ರಿಯಾಜ್ ಎಸ್.ಕೆ. ಅಧ್ಯಕ್ಷ ಎನ್.ಮರಿಸ್ವಾಮಿ ರೆಡ್ಡಿ, ಅಂದು ಸ್ವಾತಂತ್ರ್ಯ ಸಮಾರಂಭ ನಡೆಯುವ ಎನ್.ಸಿ.ಸಿ ಗ್ರೈಂಡ್ ಬಳಿ ಧರಣಿ ನಡೆಸಲಿದೆಂದು ಹೇಳಿದರು.
ಹಳೇ ಶಾಲೆಗಳೂ ನಿವೇಶನ ಭೂಪರಿವರ್ತನೆ ಮಾಡಬೇಕು, ಸಿಸಿ ಕೆಮೆರಾ ಅಳವಡಿಸಬೇಕು. ಕಂದಾಯ, ಅಗ್ನಿ, ಮಹಿಳಾ ಮತ್ತು ಮಕ್ಕಳ ಇಲಾಖೆಗಳಿಂದ ನಿರಾಪೇಕ್ಷಣ ಪತ್ರ ಪಡೆದು ರಿನಿವಲ್ ಮಾಡಬೇಕು ಎಂಬುದು ಎಷ್ಟು ಸರಿ.
ರಿನಿವನಲ್ ಗೆ ಪ್ರತಿ ವರ್ಷ ಐದು ಲಕ್ಷ ರೂಲಂಚ ನೀಡಲು ಬೇಕಾಗುತ್ತದೆ. ಹೀಗಾದರೆ ಶಾಲೆಗಳನ್ನು ನಡೆಸುವುದು ಹೇಗೆ. ಈಗಾಗಲೇ ಶಾಲೆಗಳಲ್ಲಿ ಗುಣ ಮಟ್ಟ ಕುಸಿದಿದೆಂದು ಗ್ರೇಶ್ ಮಾರ್ಕ್ಸ್ ಹಾಕುವ ಮಟ್ಟಕ್ಕೆ ಇಳಿದಿರುವ ಸರ್ಕಾರ ನಮ್ಮ ಖಾಸಗೀ Powder ಮೇಲೆ ರ ಆರಂಭಿಸಿದೆಂದು ಆರೋಪಿಸಿದರು.
ಸರ್ಕಾರ ಶಿಕ್ಷಣ ಇಲಾಖೆ ತಮ್ಮ ಒಂದೇ ಇಲಾಖೆಯಿಂದ ಹಣ ವಸೂಲಿಯ ಭ್ರಷ್ಟಾಚಾರ ಮಾಡುವುದು ಕಡಿಮೆ ಆಗುತ್ತದೆ ಎಂದು ಇತರೇ ಇಲಾಖೆಗಳಿಂದ ವಸೂಲಿಗೆ ಇಳಿದಿದೆಂದು ಹೇಳಿದರು. ಖಜಾಂಚಿ ಪಿ.ರಂಜಾನ್, ರಂಗಸ್ವಾಮಿ, ಮರ್ಚೇಡ್ ಮಲ್ಲಿಕಾರ್ಜುನ, ಎಂ.ಹನುಮಂತಪ್ಪ, ಕೆ.ಪರಮೇಶ್ವರಪ್ಪ ಮೊದಲಾದವರು ಇದ್ದರು.