ಮುಂಬೈ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್​ ಟೈಗರ್ ಮೆಮನ್​ನ 14 ಆಸ್ತಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರ

Ravi Talawar
ಮುಂಬೈ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್​ ಟೈಗರ್ ಮೆಮನ್​ನ 14 ಆಸ್ತಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರ
WhatsApp Group Join Now
Telegram Group Join Now

ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಟೈಗರ್ ಮೆಮನ್ ಮತ್ತು ಆತನ ಕುಟುಂಬಕ್ಕೆ ಸೇರಿದ 14 ಆಸ್ತಿಗಳನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಮುಂಬೈನ ವಿಶೇಷ ನ್ಯಾಯಾಲಯ ಆದೇಶಿಸಿದೆ. ಟಾಡಾ (ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ನ್ಯಾಯಾಲಯದ ಆದೇಶದ ಮೇರೆಗೆ ಈ ಆಸ್ತಿಗಳು 1994 ರಿಂದ ಬಾಂಬೆ ಹೈಕೋರ್ಟ್​ನ ರಿಸೀವರ್ ವಶದಲ್ಲಿದ್ದವು.

ಈ 14 ಆಸ್ತಿಗಳಲ್ಲಿ ಬಾಂದ್ರಾ (ಪಶ್ಚಿಮ)ದ ಕಟ್ಟಡವೊಂದರಲ್ಲಿರುವ ಫ್ಲಾಟ್, ಮಾಹಿಮ್​ನಲ್ಲಿರುವ ಕಚೇರಿ ಕಟ್ಟಡ, ಮಾಹಿಮ್​ನಲ್ಲಿ ಖಾಲಿ ನಿವೇಶನ, ಸಾಂತಾಕ್ರೂಜ್ (ಪೂರ್ವ) ನಲ್ಲಿರುವ ಖಾಲಿ ನಿವೇಶನ ಮತ್ತು ಫ್ಲಾಟ್, ಕುರ್ಲಾದ ಕಟ್ಟಡವೊಂದರಲ್ಲಿನ ಎರಡು ಫ್ಲಾಟ್​ಗಳು, ಮೊಹಮ್ಮದ್ ಅಲಿ ರಸ್ತೆಯಲ್ಲಿರುವ ಕಚೇರಿ, ಡೊಂಗ್ರಿಯಲ್ಲಿನ ಒಂದು ಅಂಗಡಿ ಮತ್ತು ನಿವೇಶನ, ಮನೀಶ್ ಮಾರ್ಕೆಟ್​ನಲ್ಲಿನ ಮೂರು ಅಂಗಡಿಗಳು ಮತ್ತು ಶೇಖ್ ಮೆಮನ್ ಸ್ಟ್ರೀಟ್​ನಲ್ಲಿರುವ ಕಟ್ಟಡ ಸೇರಿವೆ.

1993ರ ಮಾರ್ಚ್ 12ರಂದು ಮುಂಬೈನ ವಿವಿಧ ಭಾಗಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಮೃತಪಟ್ಟು, 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಕೇಂದ್ರ ತನಿಖಾ ದಳ (ಸಿಬಿಐ) ಈ ಸ್ಫೋಟ ಪ್ರಕರಣದ ತನಿಖೆ ನಡೆಸಿತ್ತು.

ಕಳೆದ ವಾರ ಮಾರ್ಚ್ 26 ರಂದು ಹೊರಡಿಸಿದ ಆದೇಶದಲ್ಲಿ, ವಿಶೇಷ ಟಾಡಾ ನ್ಯಾಯಾಲಯದ ನ್ಯಾಯಾಧೀಶ ವಿ.ಡಿ.ಕೇದಾರ್ ಅವರು “ಸ್ಥಿರಾಸ್ತಿಗಳ ಸ್ವಾಧೀನವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವ ಅಗತ್ಯವಿದೆ” ಎಂದು ಹೇಳಿದ್ದರು. ಕೇಂದ್ರ ಸರ್ಕಾರವು ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳು ಋಣಭಾರಗಳಿಂದ ಮುಕ್ತವಾಗಿವೆ ಮತ್ತು ಕೇಂದ್ರ ಸರ್ಕಾರವು ಸಕ್ಷಮ ಪ್ರಾಧಿಕಾರದ ಮೂಲಕ ಆ 14 ಸ್ಥಿರಾಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅರ್ಹವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now
Share This Article