ಬೆಂಗಳೂರಿನ ವ್ಯಕ್ತಿಗೆ 14 ದಿನ ಡಿಜಿಟಲ್ ಅರೆಸ್ಟ್; ₹1.62 ಕೋಟಿ ವಂಚನೆ

Ravi Talawar
ಬೆಂಗಳೂರಿನ ವ್ಯಕ್ತಿಗೆ 14 ದಿನ ಡಿಜಿಟಲ್ ಅರೆಸ್ಟ್; ₹1.62 ಕೋಟಿ ವಂಚನೆ
WhatsApp Group Join Now
Telegram Group Join Now

ಬೆಂಗಳೂರು, ಅ.21: ರಾಜ್ಯದಲ್ಲಿ ಡಿಜಿಟಲ್ ವಂಚನೆಗಳು ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸೈಬರ್​​​ ಕ್ರೈಂಗಳು  ಹೆಚ್ಚಾಗಿದೆ. ಇದೀಗ ಬೆಂಗಳೂರಿನ 66 ವರ್ಷದ ನಿವೃತ್ತ ವ್ಯಕ್ತಿಯೊಬ್ಬರಿಗೆ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ₹ 1.62 ಕೋಟಿ ವಂಚನೆ ಮಾಡಿದ್ದಾರೆ. ವರದಿಗಳ ಪ್ರಕಾರ ವಂಚನೆಗೆ ಒಳಗಾದ ವ್ಯಕ್ತಿಯನ್ನು 14 ದಿನಗಳ ಕಾಲ “ಡಿಜಿಟಲ್ ಬಂಧನ”ದಲ್ಲಿ ಇರಿಸಲಾಗಿತ್ತು. ಸೆಪ್ಟೆಂಬರ್ 27 ರಂದು ಮಧ್ಯಾಹ್ನ 2:30 ಕ್ಕೆ ಈ ವ್ಯಕ್ತಿಗೆ ಒಂದು ಕರೆ ಬಂದಿತು, ಆ ಕರೆಯಲ್ಲಿ ಪೊಲೀಸ್​ ಎಂದು ಹೇಳಿಕೊಂಡು ಮುಂಬೈನ ಐಷಾರಾಮಿ ಹೋಟೆಲ್ ಮೇಲೆ ದಾಳಿ ನಡೆಸಿದಾಗ, ನಿಮ್ಮ ಹೆಸರಿನಲ್ಲಿ ಕೆಲವೊಂದು ದಾಖಲೆಗಳು ಸಿಕ್ಕಿದೆ ಎಂದು ಹೇಳಿದ್ದಾರೆ.

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ವಂಚಕನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಮುಂಬೈ ಸೈಬರ್ ಅಪರಾಧ ಇಲಾಖೆಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವಂಚನೆಗೆ ಒಳಗಾಗಿದ್ದ ವ್ಯಕ್ತಿಗೆ ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ ವಂಚನೆಗೆ ಒಳಗಾಗಿದ್ದ ವ್ಯಕ್ತಿಗೆ ವೀಡಿಯೊ ಕರೆ ಬಂದಿದ್ದು, ವಿಡಿಯೋ ಕಾಲ್​​​ ಮಾಡಿದ ವ್ಯಕ್ತಿ ನಾನು ಸೈಬರ್ ಅಪರಾಧ ಠಾಣೆಯ ಇನ್ಸ್‌ಪೆಕ್ಟರ್ ಕುದ್ಲಿಪ್ ಸಿಂಗ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ವಿಡಿಯೋದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ ಎಂದು ಹೇಳಿದ್ದಾನೆ.

WhatsApp Group Join Now
Telegram Group Join Now
Share This Article