ಡೆಹ್ರಾಡೂನ್​​ನಿಂದ 13 ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್

Ravi Talawar
ಡೆಹ್ರಾಡೂನ್​​ನಿಂದ 13 ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್
WhatsApp Group Join Now
Telegram Group Join Now

ಬೆಂಗಳೂರು ಗ್ರಾಮಾಂತರ, ಜೂ.06: ಉತ್ತರಾಖಂಡ್​ಗೆ  ಚಾರಣಕ್ಕೆಂದು ರಾಜ್ಯದ 21 ಜನರು ತೆರಳಿದ್ದರು. ಈ ವೇಳೆ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ಚಾರಣಿಗರು ಉತ್ತರಾಖಂಡದ  ಸಹಸ್ತ್ರತಲ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದು, ಆ ಪೈಕಿ 9 ಮಂದಿ ಮೃತಪಟ್ಟಿದ್ದರು.

ಬಳಿಕ ಬದುಕುಳಿದವರ ರಕ್ಷಣೆಗಾಗಿ ತುರ್ತು ಕಾರ್ಯಾಚರಣೆ ನಡೆಸಿ, ಮೃತಪಟ್ಟ ಕನ್ನಡಿಗರ ಶವಗಳನ್ನು ಬೆಂಗಳೂರಿಗೆ ತರುವ ಬಗ್ಗೆ ಉತ್ತರಾಖಂಡ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ಜೊತೆ ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ​ಮಾತುಕತೆ ನಡೆಸಿ, ಇದೀಗ ಕೃಷ್ಣಬೈರೇಗೌಡ ಅವರು ಡೆಹ್ರಾಡೂನ್​​ನಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದಿದ್ದಾರೆ.

ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವ ಕೃಷ್ಣಬೈರೆಗೌಡ ಜೊತೆ ಇಂಡಿಗೋ ವಿಮಾನದಲ್ಲಿ 13 ಜನ ಕನ್ನಡಿಗರು ಆಗಮಿಸಿದ್ದಾರೆ. ಏರ್ಪೋರ್ಟ್​ನಲ್ಲಿ ಸ್ವಾಗತಕೋರಲು ಕುಟುಂಬಸ್ಥರು ಸಹ ಆಗಮಿಸಿದ್ದಾರೆ.

WhatsApp Group Join Now
Telegram Group Join Now
Share This Article