ಧಾರಾಕಾರ ಮಳೆಯಿಂದ ಬೆಳಗಾವಿ ಜಿಲ್ಲೆಯ 13 ಸೇತುವೆಗಳು ಮುಳುಗಡೆ

Ravi Talawar
ಧಾರಾಕಾರ ಮಳೆಯಿಂದ ಬೆಳಗಾವಿ ಜಿಲ್ಲೆಯ 13 ಸೇತುವೆಗಳು ಮುಳುಗಡೆ
WhatsApp Group Join Now
Telegram Group Join Now

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಳಗಾವಿ ಜಿಲ್ಲೆಯ ಒಟ್ಟು 13 ಸೇತುವೆಗಳು ಮುಳುಗಡೆಯಾಗಿವೆ. ಗೋಕಾಕ್​ ಉಪವಿಭಾಗದಲ್ಲಿ ಬರುವ ಸಂಕೇಶ್ವರ- ಗಡಹಿಂಗ್ಲಜ ಸಂಪರ್ಕಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಕುಲಗೋಡ- ಮಹಾಲಿಂಗಪುರ ಸಂಪರ್ಕ ಸೇತುವೆ, ಲೋಳಸೂರ-ಶಿಂಗ್ಲಾಪುರ ಹಾಗೂ ಯರನಾಳ-ಹುಕ್ಕೇರಿ ಸಂಪರ್ಕಿಸುವ ಸೇತುವೆಗಳು ಜಲಾವೃತವಾಗಿವೆ.

ಅದೇ ರೀತಿ ಚಿಕ್ಕೋಡಿ ಉಪವಿಭಾಗದಲ್ಲಿ ಬರುವ ಬೋಜ್- ಕರಜಗಾ, ಬೋಜವಾಡಿ- ನಿಪ್ಪಾಣಿ, ಮಲ್ಲಿಕವಾಡ- ದನವಾಡ, ಬಾರವಾಡ- ಕುನ್ನೂರ, ಬೋಜ್- ಕುನ್ನೂರ, ಜತ್ರಾಟ- ಭೀವಶಿ, ರಾಯಭಾಗ ತಾಲೂಕಿನ ಭಾವನಸವದತ್ತಿ- ಮಾಂಜರಿ ಸಂಪರ್ಕಿಸುವ ರಸ್ತೆಗಳು ಜಲಾವೃತವಾಗಿವೆ.

ಬೆಳಗಾವಿ ಜಿಲ್ಲೆಯ 13 ಸೇತುವೆಗಳು ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಈ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು ಖಾನಾಪುರ- ಹೆಮ್ಮಡಗಾ ಸಂಪರ್ಕಿಸುವ ರಸ್ತೆ ಕೂಡ ಮುಳುಗಡೆಯಾಗಿದೆ. ಹಾಗಾಗಿ, ಮುಳುಗಡೆಯಾದ ಈ ಎಲ್ಲಾ ಸೇತುವೆಗಳ ಮೇಲೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ. ಅಲ್ಲದೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

 

WhatsApp Group Join Now
Telegram Group Join Now
Share This Article