125 ವರ್ಷದ ನ್ಯಾಯಾಲಯದಲ್ಲಿಯ ಸೇವೆ ನನ್ನ ಪುಣ್ಯ:ನ್ಯಾ.ಉಷಾ ರಾಣಿ

Ravi Talawar
125 ವರ್ಷದ ನ್ಯಾಯಾಲಯದಲ್ಲಿಯ ಸೇವೆ ನನ್ನ ಪುಣ್ಯ:ನ್ಯಾ.ಉಷಾ ರಾಣಿ
WhatsApp Group Join Now
Telegram Group Join Now
ಬೈಲಹೊಂಗಲ: ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮನ ನಾಡಿನಲ್ಲಿ 125 ಸಂವತ್ಸರ ಪೊರೈಸಿರುವ ನ್ಯಾಯಾಲಯದಲ್ಲಿ 4ವರ್ಷ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವದು ನನ್ನ ಪೂರ್ವಜನ್ಮದ ಪುಣ್ಯವಿದು ಎಂದು ಹಿರಿಯ ಶ್ರೇಣಿ  ದಿವಾಣಿ ನ್ಯಾಯಾಧೀಶೆ ಉಷಾ ರಾಣಿ. ಆರ್ ಹೇಳಿದರು.
   ಪಟ್ಟಣದ ನ್ಯಾಯವಾದಿಗಳ ಸಭಾಭವನದಲ್ಲಿ ವರ್ಗಾವಣೆಗೊಂಡ ಮೂರು ಜನ ನ್ಯಾಯಾಧೀಶರ ಬಿಳ್ಕೋಡುಗೆ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಬೈಲಹೊಂಗಲ ಅತ್ಯಂತ ಗಟ್ಟಿತನಕ್ಕೆ ಹೆಸರಾಗಿದೆ. ಈ ಸ್ಥಳಕ್ಕೆ ಬರುವ ಮೊದಲು ಮನಸ್ಸಿನಲ್ಲಿ ಕಳವಳವಿತ್ತು ಆದರೆ ನಾಲ್ಕು ವರ್ಷಗಳ ಕಾಲ ಇಲ್ಲಿಯ ಹಿರಿಯ ಕಿರಿಯ ನ್ಯಾಯವಾದಿಗಳು, ಕಕ್ಷಿದಾರರು ಹಾಗೂ ಈ ಭಾಗದ ಜನತೆಯ ನೀಡಿದ ಸಹಕಾರ ನ್ಯಾಯಂಗ ಸೇವೆಯಲ್ಲಿ ಎಂದು ಮರೆಯಲಾಗದು. ಸರ್ಕಾರದ ನಿಯಮದಲ್ಲಿ‌ ವರ್ಗಾವಣೆ ಕಡ್ಡಾಯ ಆದರೆ ಅನೇಕ‌ ಸ್ಥಳಗಳಲ್ಲಿ ವರ್ಗಾವಣೆಯಾಗಿದ್ದೆನೆ ಆದರೆ  ಮೊದಲಸಲ ನಾನು ಭಾರವಾದ ಮನಸ್ಸಿನಿಂದ ತೆರಳುತಿದ್ದೆನೆ. ಬೈಲಹೊಂಗಲ ಸದಾ ನನ್ನ ತವರು ಮನೆ ಇದ್ದಹಾಗೆ ಎಂದು ತಮ್ಮ ನಾಲ್ಕು ವರ್ಷದ ಸೇವಾ ನೆನಪು ಮಾಡಿಕೊಂಡರು.
   ವರ್ಗಾವಣೆಗೊಂಡ ಪ್ರಧಾನ ನ್ಯಾಯಾಧೀಶ ಮನು ಶರ್ಮಾ ಹಾಗೂ ಕಿರಿಯ ಶ್ರೇಣಿ ನ್ಯಾಯಾಧೀಶ ಸುನೀಲಕುಮಾರ್ ಮಾತನಾಡಿ, ನಮ್ಮ ಸೇವಾವಧಿಯಲ್ಲಿ ನ್ಯಾಯಾಲಯದ ಸುಗಮ ಕಾರ್ಯ ಕಲಾಪಗಳು ನಡೆಯಲು ನ್ಯಾಯವಾದಿಗಳು ನೀಡಿದ ಸಹಕಾರ ಅತ್ಯಂತ ಶ್ಲಾಘನೀಯ. ಹಿರಿಯ ನ್ಯಾಯವಾದಿಗಳ ಅನುಭವದಿಂದ ಅನೇಕ ವಿಷಯಗಳನ್ನು ಅರಿಯುವದರೊಂದಿಗೆ ಸಾಕಷ್ಟು ವಿಷಯಗಳನ್ನು ತಿಳಿಯುವ ಅವಕಾಶ ನಮಗೆ ಲಭಿಸಿದೆ. ನಮಗೆ ಸೇವೆ ಸಲ್ಲಿಸಲೂ ನಿಯುಕ್ತಿಯಾದ ಮುಂದಿನ ನ್ಯಾಯಲಯದಲ್ಲಿ ಬೈಲಹೊಂಗಲದಲ್ಲಿ ಪಡೆದ ಅನುಭವ ನಮ್ಮ ಸೇವೆಗೆ ಅತ್ಯಂತ ಉಪಯುಕ್ತವಾಗಲಿದೆ ಎಂದರು.
 ಹಿರಿಯ ನ್ಯಾಯವಾದಿ ಎಮ್.ವಾಯ್.ಸೋಮಣ್ಣವರ ಮಾತನಾಡಿ, ನ್ಯಾಯಾಧೀಶರಿಗೆ ಬಿಡುವಿಲ್ಲದ ಕಾರ್ಯಗಳು ಇದ್ದಾಗಲು ಇಲ್ಲಿಯ ಯುವ ನ್ಯಾಯವಾದಿಗಳಿಗೆ ನ್ಯಾಯಾಧೀಶರ ಹುದ್ದೆಗೆರಲು ಪ್ರೋತ್ಸಾಹಿಸಿ ಅವರಿಗೆ ವಿಶೇಷ ವರ್ಗಗಳನ್ನು ಏರ್ಪಡಿಸಿ ಮಾರ್ಗದರ್ಶನ ನೀಡುವದರೊಂದಿಗೆ ಅನಕು ಸಂದರ್ಶನ ನಡೆಸಿ ಬೈಲಹೊಂಗಲದಿಂದ ಇಬ್ಬರು ನ್ಯಾಯಾಧೀಶರಾಗುವಂತೆ ಮಾಡುವಲ್ಲಿ ಮೂರು ಜನ ನ್ಯಾಯಾಧೀಶರ ಶ್ರಮ ಮೆಚ್ಚುವಂತದ್ದು.
ಬೈಲಹೊಂಗಲ ನ್ಯಾಯಲಯಕ್ಕೆ ಇಲ್ಲಿಯವರೆಗೂ ಬಂದಿರುವ ನ್ಯಾಯಾಧೀಶರು ಈ ನೆಲದ ಅನುಭವ ಮರೆತಿಲ್ಲ. ಅನೇಕ ನ್ಯಾಯಾಧೀಶರು ತಮ್ಮ ಸೇವಾನುಭವದಲ್ಲಿ ಬೈಲಹೊಂಗಲ ನ್ಯಾಯವಾದಿಗಳ ಸಂಘದ ಅನುನ್ಯತೆಯನ್ನು ನೆನಪಿಸಿಕೊಳ್ಳುತ್ತಾರೆ.
ನ್ಯಾಯವಾದಿಗಳಾದ ಎಸ್.ಎಸ್.ಆಲದಕಟ್ಟಿ, ಎನ್.ಕೆ.ಮೆಳ್ಳಿಕೇರಿ, ಎಸ್.ಎಮ್.ಅಬ್ಬಾಯಿ, ಆರ್.ಎ.ಪಾಟೀಲ ಮಾತನಾಡಿದರು.
 ಬೆಳಗಾವಿ ನ್ಯಾಯವಾದಿಗಳ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಸ್.ಕಿವಡಸಣ್ಣವರ ಹಾಗೂ ಪ್ರಧಾನ ಕಾರ್ಯದರ್ಶಿ ವಾಯ್.ಕೆ.ದಿವಟೆ ಹಾಗೂ ನ್ಯಾಯವಾದಿ ಮಂಜುನಾಥ. ಕೆ.ಎಸ್ ಅವರನ್ನು ನ್ಯಾಯವಾದಿಗಳ ಸಂಘದಿಂದ ಸತ್ಕರಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಎಮ್.ಆರ್.ಮೆಳವೆಂಕಿ ಅಧ್ಯಕ್ಷತೆವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಸಂಘದ ಉಪಾಧ್ಯಕ್ಷ ಎ.ಎಂ.ಸಿದ್ರಾಮನಿ, ವಿ.ಜಿ.ಕಟದಾಳ, ವಿ.ಸಿ.ಪೂಜಾರ ಇದ್ದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ಕುಮಾರಿ ಮೇಘಾ ಸೋಮಣ್ಣವರ, ಮಹಾಂತೇಶ ಮಠದ,
 ಹಿರಿಯ ನ್ಯಾಯವಾದಿಗಳಾದ ಬಿ.ಎಸ್.ಕಿವಡಸನ್ನವರ, ಎ.ಎಮ್.ಮೂಗಿ, ಬಿ.ಆರ್.ಅಲಸಂಧಿ, ಝಡ್.ಎ.ಗೋಕಾಕ, ಸಿ.ಎಸ್.ಚಿಕ್ಕನಗೌಡರ, ಬಿ.ಬಿ.ಹುಲಮನಿ,ಉಮಾ ಬುಲಾಕೆ,   ಎಸ್.ಎಸ್.ಮಠದ, ಬಿ.ಎಮ್.ಮೂಲಿಮನಿ, ಎಸ್.ಎಮ್.ಕುಲಕರ್ಣಿ, ಎ.ಎ.ಪಟ್ಟಿಹಾಳ, ಜಿ.ಬಿ.ಶಿಗಿಹಳ್ಳಿ, ಜಿ.ಬಿ.ಗೀರಿಜನ್ನವರ, ಎ.ಸಿ.ನೇಗಿನಹಾಳ, ಎಮ್.ಜೆ.ಪಾಸಲಕರ, ಸಿ.ಎಚ್.ಹೊಸಮನಿ, ಬಿ.ಬಿ.ವೆಂಕಣ್ಣವರ, ಬಿ.ಆರ್.ಹರಿದಾಸ, ಪ್ರೇಮಾ ಬಡಿಗೇರ ಸೇರಿದಂತೆ ನೂರಾರು ವಕೀಲರು ಉಪಸ್ಥಿತರಿದ್ದರು.
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ನಿರೂಪಿಸಿದರು. ವಿಠಲ ಕಟದಾಳ ಸ್ವಾಗತಿಸಿದರು. ಸಂತೋಷ ಹಣ್ಣಿಕೇರಿ ವಂದಿಸಿದರು.
WhatsApp Group Join Now
Telegram Group Join Now
Share This Article