ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 117ನೇ ಜಯಂತಿ ಉತ್ಸವ: ಶ್ರೀಗಳ ಗುಣಗಾನ

Ravi Talawar
ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 117ನೇ ಜಯಂತಿ ಉತ್ಸವ: ಶ್ರೀಗಳ ಗುಣಗಾನ
WhatsApp Group Join Now
Telegram Group Join Now

ಹುಬ್ಬಳ್ಳಿ, ಏಪ್ರಿಲ್ 2: ಪದ್ಮಭೂಷಣ, ಕರ್ನಾಟಕ ರತ್ನ, ಬಸವಶ್ರೀಪ್ರಶಸ್ತಿ ಪುರಸ್ಕೃತರು, ತ್ರಿವಿಧ ದಾಸೋಹಿ, ಮಹಾಯೋಗಿ, ಶ್ರೀ ಮ.ನಿ.ಪ್ರ ಸ್ವರೂಪಿ ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ೧೧೭ನೇ ಜಯಂತಿ ಉತ್ಸವ ಕಾರ್ಯಕ್ರಮ ಕೆಕೆ ಮಾರ್ಟನಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿತ್ತು.

ಪರಮ ಪೂಜ್ಯ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮಿಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ, ಪೂಜೆ ಸಲ್ಲಿಸಿ, ಶ್ರದ್ಧಾ-ಭಕ್ತಿಯ ನಮನಗಳನ್ನು ಸಲ್ಲಿಸಿದರು. ನುಡಿಗಳ ಮೂಲಕ ಶ್ರೀಗಳ ಗುಣಗಾನ ಮಾಡಿದರು.

ವಾಕರಸಾ ಸಂಸ್ಥೆಯ ಮಾಜಿ ಅಧ್ಯಕ್ಷರು, ಮುಖಂಡರಾದ ಸದಾನಂದ ಡಂಗನವರ, ನಿವೃತ್ ಗ್ರಂಥಪಾಲಕ ಡಾ. ಬಿ.ಎಸ್.ಮಾಳವಾಡ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‍್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಉಪಾಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ಟರ, ಕೋಶಾಧ್ಯಕ್ಷ, ಕೆಕೆ ಮಾರ್ಟನ ಮಾಲಿಕ ಶಿವಯೋಗಿ ಮುಗಬಸ್ತ, ಸುನಂದಾ ಮುಗಭಸ್ತ, ಭುವನ, ವೈಷ್ಣವಿ, ಮದು, ಶೃತಿ, ಮುಂತಾದವರು ಭಾಗವಹಿಸಿದ್ದರು.

ಮಾತನಾಡಿದ ಗಣ್ಯರು ಸಮಷ್ಠಿ ಕಲ್ಯಾಣವನ್ನೇ ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಶ್ರೇಷ್ಠ ಸಂತರು, ಶರಣರು ತುಮಕೂರ ಸಿದ್ಧಗಂಗಾಮಠದ ಪರಮ ಪೂಜ್ಯ ಲಿಂ. ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮಿಜಿಯವರು. ತುಮಕೂರ ಸಿದ್ಧಗಂಗಾಮಠ ಎಲ್ಲರಲ್ಲಿ ಪ್ರೀತಿ, ವಿಶ್ವಾಸ ಮತ್ತು ಆತ್ಮವಿಶ್ವಾಸ ಮೂಡಿಸುತ್ತದೆ. ಪೂಜ್ಯರು ಸೇವೆಗಳಿಗೆ ಹೊಸ ಭಾಷ್ಯ ನೀಡಿದ್ದಾರೆ.

ಕಾಯಕ, ದಾಸೋಹ, ಶಿವಯೋಗದ ಮಹತ್ವವನ್ನು ಎಲ್ಲರಲ್ಲಿ ಸದಾ ಜಾಗೃತಿಯನ್ನುಂಟು ಮಾಡಿದ ಮಹಾತ್ಮರು. ವಿದ್ಯಾರ್ಥಿಗಳಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದ ಪೂಜ್ಯರು ಸದಾ ಸ್ಮರಣಿಯರು. ಪೂಜ್ಯರು ಕಾಲವನ್ನೇ ಗೆದ್ದ ಶರಣರು. ಪ್ರಶಸ್ತಿಗಳಿಗೆ ಗೌರವ ತಂದು ಕೊಟ್ಟಿದ್ದಾರೆ. ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ ಪೂಜ್ಯರು ಸಮಾಜಕ್ಕೆ ಒಂದು ದೊಡ್ಡ ಶಕ್ತಿಯಾಗಿದ್ದಾರೆ. ಸಮಷ್ಟಿ ಕಲ್ಯಾಣ ಬಯಸಿದ ಪೂಜ್ಯರ ಸಂದೇಶಗಳನ್ನು ಪಾಲಿಸಬೇಕು ಎಂದರು.

WhatsApp Group Join Now
Telegram Group Join Now
Share This Article