ಸೆ,10 ರಂದು ಭಾರತದ ಮಾಜಿ ರಾಷ್ಟ್ರಪತಿ ಡಾ. ಬಿ. ಡಿ. ಜತ್ತಿ ಅವರ 113 ಜಯಂತಿ

Ravi Talawar
ಸೆ,10 ರಂದು ಭಾರತದ ಮಾಜಿ ರಾಷ್ಟ್ರಪತಿ ಡಾ. ಬಿ. ಡಿ. ಜತ್ತಿ ಅವರ 113 ಜಯಂತಿ
WhatsApp Group Join Now
Telegram Group Join Now
ಬೆಂಗಳೂರು – ಭಾರತದ ಮಾಜಿ ರಾಷ್ಟ್ರಪತಿಗಳು ಹಾಗೂ ಬಸವ ಸಮಿತಿಯ ಸಂಸ್ಥಾಪಕರಾದ ಡಾ.  ಬಿ.ಡಿ.ಜತ್ತಿಯವರ  113ನೇ ಜಯಂತೋತ್ಸವ ಮತ್ತು ಸಂಸ್ಥಾಪನಾ ದಿನಾಚರಣೆಯನ್ನು ದಿ.10ರಂದು ಬೆಳಿಗ್ಗೆ 11:30ಕ್ಕೆ ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿರುವ ಅನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಸಮಿತಿಯ ಅಧ್ಯಕ್ಷರಾದ ಡಾ.ಅರವಿಂದ ಜತ್ತಿ,ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ತಿಳಿಸಿದ್ದಾರೆ.
ಬೆಂಗಳೂರು ಬೇಲಿಮಠದ,ಮಠಾಧ್ಯಕ್ಷರಾದ ಪೂಜ್ಯಶ್ರೀ ಶಿವರುದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದಾರೆ, ಭಾರತ ಸರ್ಕಾರದ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯಿಲಿ  ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಬಸವ ಸಮಿತಿ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ ಅವರು ಅಧ್ಯಕ್ಷತೆಯನ್ನು ವಹಿಸುವರು,
ಬಸವ ಮಣಿಹದಲ್ಲಿ ವಿಶಿಷ್ಟ ಸಾಧನೆಗೈದಿರುವ ಬೆಂಗಳೂರಿನ ಹಿರಿಯ ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಅವರಿಗೆ ಬಸವ ವಿಭೂಷಣ ಪುರಸ್ಕಾರ, ಹಾಸನದ ಯುನೈಟೆಡ್ ಅಕಾಡೆಮಿಯ ಸಿ.ಎಂ.  ಚಂದ್ರಶೇಖರ, ಬೆಂಗಳೂರಿನ ವಚನ ಜ್ಯೋತಿ ಬಳಗದ ಎಸ್. ಪಿನಾಕಪಾಣಿ ಅವರಿಗೆ ಬಸವಶ್ರೀ ಪುರಸ್ಕಾರವನ್ನು ಮತ್ತು ಗೌರವ ಸನ್ಮಾನವನ್ನು ಬಸವ ಸಮಿತಿಯಿಂದ ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ಉಪಾಧ್ಯಕ್ಷರಾದ ಪ್ರಭುದೇವ ಚಿಗಟೇರಿ, ಉಪಾಧ್ಯಕ್ಷರಾದ ಶ್ರೀಮತಿ ಲೀಲಾದೇವಿ ಆರ್ ಪ್ರಸಾದ್, ಶ್ರೀ ಹನುಮಂತರೆಡ್ಡಿ ಮುದ್ನಾಳ, ಪ್ರಧಾನ ಕಾರ್ಯದರ್ಶಿಗಳಾದ ದಿಬ್ಬೂರು ಗಿರೀಶ್, ಡಾ. ಟಿ ಜಿ ಪ್ರಭಾಶಂಕರ, ಕೋಶಾಧ್ಯಕ್ಷರಾದ ಡಾ. ನಿರ್ಮಲಾ ಯಲಿಗಾರ,ಜಂಟಿ ಕಾರ್ಯದರ್ಶಿಗಳಾದ ಜೆ.  ಎಸ್. ವಿರೂಪಾಕ್ಷಯ್ಯ, ಸುನಿಲಕುಮಾರ ರಗಟೆ ಅವರು ಉಪಸ್ಥಿತರುವರು. ಕಾರಣ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೇಂದ್ರ ಬಸವ ಸಮಿತಿಯ ಕಾರ್ಯ ಸಮಿತಿಯ ಹಿರಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article