ಅಥಣಿ: ಜನರ ಆಸ್ತಿಯ ರಕ್ಷಣೆಯಲ್ಲಿ ಪೊಲೀಸರು ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕಳೆದುಹೋದ ಹಾಗೂ ಕಳ್ಳತನಕ್ಕೊಳಗಾದ ಮೊಬೈಲ್ಗಳನ್ನು ಪತ್ತೆಹಚ್ಚುವ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು, ಅತ್ಯಾಧುನಿಕ (ಸಿ.ಇ.ಐ.ಆರ್) ಪೋರ್ಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಕಳೆದುಹೋದ ಮೊಬೈಲ್ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿ ಒಟ್ಟು ೧೧೦ ಮೊಬೈಲ್ಗಳನ್ನು ಪೊಲೀಸರು ಮರಳಿ ಪಡೆದಿದ್ದು, ಅವನ್ನು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಿದ್ದು ಸಾರ್ವಜನಿಕರು ಅಥಣಿ ಪೊಲೀಸ್ರ ಕಾರ್ಯವನ್ನು ಶ್ಲಾಘೀಸಿದ್ದಾರೆ
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ ಹಾಗೂ ಅಥಣಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಜಿ. ಮುನ್ನೊಳ್ಳಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡಗಳನ್ನು ರಚಿಸಿ ಈ ತಂಡಗಳು ಕಳೆದ ಎರಡು ವರ್ಷಗಳಲ್ಲಿ ಕಾಣೆಯಾಗಿದ್ದ ಮೊಬೈಲ್ಗಳನ್ನು ಪತ್ತೆಹಚ್ಚಲು ನಿರಂತರ ಕಾರ್ಯಾಚರಣೆ ನಡೆಸಿ ಮೊಬೈಲಗಳನ್ನು ಪತ್ತೆಹಚ್ಚಿ ಶುಕ್ರವಾರ ಪತ್ತೆಯಾದ ೧೧೦ ಮೊಬೈಲ್ ಫೋನ್ಗಳನ್ನು ಅಥಣಿ ಪೊಲೀಸ್ ಸಮುದಾಯ ಭವನದ ಆವರಣದಲ್ಲಿ ಆಯಾ ವಾರಸುದಾರರಿಗೆ ಹಿಂದೂರುಗಿಸಿದರು, ಪೊಲೀಸರ ಈ ಕ್ರಮದ ಫಲವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ಗಳು ಮರಳಿ ದೊರೆತಿವೆ. ಮಾಲೀಕರು ತಮ್ಮ ಕಳೆದುಹೋದ ಮೊಬೈಲ್ಗಳನ್ನು ಮರಳಿ ಪಡೆದ ಸಂತೋಷ ವ್ಯಕ್ತಪಡಿಸಿ ಪೊಲೀಸರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಠಾಣಾವಾರು ಪತ್ತೆಯಾದ ಮೊಬೈಲ್ಗಳ ವಿವರ:
* ಅಥಣಿ ಪೊಲೀಸ್ ಠಾಣೆ: ೩೭
* ಐಗಳಿ ಪೊಲೀಸ್ ಠಾಣೆ: ೨೦
* ಕಾಗವಾಡ ಪೊಲೀಸ್ ಠಾಣೆ: ೨೦
* ರಾಯಬಾಗ ಪೊಲೀಸ್ ಠಾಣೆ: ೧೩
* ಹಾರೂಗೆರಿ ಪೊಲೀಸ್ ಠಾಣೆ: ೧೦
* ಕುಡಚಿ ಪೊಲೀಸ್ ಠಾಣೆ: ೧೦
ಈ ವೇಳೆ ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ ಮಾತನಾಡಿ ಸಾರ್ವಜನಿಕರ ಆಸ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಪ್ರತಿ ಪೊಲೀಸ್ ಠಾಣಾ ಮಟ್ಟದಲ್ಲಿ ಕಳುವಾದ ಅಥವಾ ಕಳೆದುಹೋದ ಮೊಬೈಲ್ಗಳನ್ನು ಪತ್ತೆಹಚ್ಚಲು ಒಬ್ಬ ನುರಿತ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ಉಳಿದ ಮೊಬೈಲ್ಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆಯು ತೀವ್ರಗತಿಯಲ್ಲಿ ಮುಂದುವರಿದಿದೆ ಎಂದು ಹೇಳಿದರು
ಈ ವೇಳೆ ಸಿಪಿಐ ಸಂತೋಷ ಹಳ್ಳೂರ, ಸಿಪಿಐ. ಮಲ್ಲಿಕಾರ್ಜುನ ಡಪ್ಪಿನ, ಪಿಎಸ್ಐ ಗಿರಮಲಪ್ಪ ಉಪ್ಪಾರ, ಐಗಳಿ ಪಿಎಸ್ಐ ಚಂದ್ರಶೇಖರ ಸಾಗನೂರ್, ಪಿಎಸ್ಐ ಮಲ್ಲಿಕಾರ್ಜುನ ತಳವಾರ, ರಾಘವೇಂದ್ರ ಖೋತ, ರಮೇಶ ತೆಲಸಂಗ, ಎಂ. ಎ ಆಳಂದ, ಸಿಬ್ಬಂದಿಗಳಾದ ಜಮೀರ್ ಡಾಂಗೆ, ಎಸ್. ಶೇಕ್, ಅಣ್ಣಪ್ಪ ಹಡಪದ್, ಧರ್ಮೇಂದ್ರ ಶ್ಯಾನವಾಡ, ಸುಧಾಕರ ಸನದಿ, ಧರೆಪ್ಪ ಧರಿಗೌಡರ ಸೇರಿದಂತೆ ಹಲವರು ಸಿಬ್ಬಂದಿ ವರ್ಗಾದರು ಉಪಸ್ಥಿತರಿದ್ದರು.


