ಗೋಕಾಕ: ನಗರಕ್ಕೂ ಮತ್ತು ಲೋಕಮಾನ್ಯ ಬಾಲ ಗಂಗಾಧರ ಟಿಳಕ ಅವರಿಗೂ ಅವಿನಾಭಾವ ಸಂಬಂಧ ಇತ್ತು ಏಕೆಂದರೆ ಸಾರ್ವಜನಿಕ ಗಣೇಶೋತ್ಸವ ಮಾಡಲು ಜನರನ್ನು ಸೇರಿಸಿ ಆ ಮೂಲಕ ದೇಶ ಭಕ್ತಿ ಹಾಗೂ ಸ್ವಾತಂತ್ರ್ಯ ಜಾಗೃತಿ ಮೂಡಿಸುವ ಮಹಾನ್ ಕಾರ್ಯ ವನ್ನು ಟಿಳಕ ಅವರು 18–19ನೇ ಶತಮಾನದಲ್ಲಿಯೇ ಆರಂಭಿಸಿದ್ದರು, ಆಗ ಮುಂಬೈ ರಾಜ್ಯದ ಭಾಗವಾಗಿದ್ದ ನಮ್ಮ ಬೆಳಗಾವಿ ಜಿಲ್ಲೆಯ ಆಗಿನ ಯುವಕರಾಗಿದ್ದ ನಮ್ಮ ಅಜ್ಜ ದಿವಂಗತ ರಘುನಾಥ (ತಮ್ಮಣ್ಣ) ವಿಷ್ಣು, ಮಹಾಜನ, ಅವರ ಸಹೋದರರಾದ ದಿ ನರಸಿಂಹ ಆಬಾಜಿ ದೇಶಪಾಂಡೆ, (ನಮ್ಮ ಮಹಾಜನ ಮನೆತನದಿಂದ ದೇಶಪಾಂಡೆ ಮನೆತನಕ್ಕೆ ದತ್ತು ಹೋದವರು) , ಗುಂಡೋಪಂತ,, ಉದ್ದವ, ಮಹಾಜನ ದಿ ಧೋಂಡೋಪಂತ ಜೀವಾಜಿ, ದೇಶಪಾಂಡೆ, ದದ ಮಧುಕರ ಜೋಶಿ, ಕೃಷ್ಟಾಚಾರ್ಯ ಸಾಂಗ್ಲಿ ಮುಂತಾದವರು ಟಿಳಕ ಅವರ ನಿಕಟ ಸಂಪರ್ಕ ಹೊಂದಿದ್ದರು.
1920 ರಲ್ಲಿ ಪುಣೆ ನಗರದಲ್ಲಿ ಟಿಳಕರು ಇಹಲೋಕ ಯಾತ್ರೆ ಮುಗಿಸಿದಾಗ ಈ ಮಹನೀಯರೆಲ್ಲರೂ ಅವರ ಅಂತ್ಯ ಯಾತ್ರೆಯಲ್ಲಿ ಭಾಗವಹಿಸಿದ್ದರು, ಅದೇ ವರ್ಷ ಅಂದರೆ 1920 ರಲ್ಲಿ ಗೋಕಾಕ ನಗರದ ಕಿಲ್ಲಾ ದಲ್ಲಿ ಆಗ ಸಾಮಾಜಿಕ ಧಾರ್ಮಿಕ ಕೇಂದ್ರ ವಾಗಿದ್ದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಗೋಕಾಕ ನಗರದಲ್ಲಿ ಮೊದಲ ಬಾರಿ ಸಾರ್ವಜನಿಕವಾಗಿ ಶ್ರೀ ನರಸಿಂಹ ಆಬಾಜಿ ದೇಶಪಾಂಡೆ ಅವರ ನೇತೃತ್ವದಲ್ಲಿ
ಶ್ರೀ ಗಣೇಶೋತ್ಸವವನ್ನು ಪ್ರಾರಂಭಿಸಿದರು, 1970 ರಲ್ಲಿ ಸ್ಥಾಪನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗ ಲೋಕೋಪಯೋಗಿ ಮಂತ್ರಿಗಳಾಗಿದ್ದ ಮಾಜಿ ಪ್ರಧಾನಿ ದೇವೇಗೌಡರನ್ನು ಕರೆಸಿ ಭವ್ಯವಾದ ಕಾರ್ಯಕ್ರಮ ಮಾಡಲಾಗಿತ್ತು ಆಗ ನಮ್ಮ ತಂದೆ ದಿ ವಿಷ್ಣು ಪಂತ ಮಹಾಜನ ಅವರು ಆ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ,ಅ ಕಾಲದಲ್ಲಿ ಮರಾಠಿ ಕನ್ನಡ ಹಿಂದಿ ಗೀತೆಗಳ ಸಂಗೀತ, ಭಾವಗೀತೆ ಭಕ್ತಿ ಗೀತೆಗಳನ್ನು ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿತ್ತು,
1995 ರಲ್ಲಿ ಕಿಲ್ಲಾ ಗಣೇಶ ಉತ್ಸವದ ಕುರಿತು 76ನೇವರ್ಷದ ಕುರಿತು ನಾನು ಬರೆದ ನಎಲೇಖನ ಗೋಕಾಕ ಟಾಯಿಮ್ಸ ದಿನಪತ್ರಿಕೆ ಯಲ್ಲಿ ಪ್ರಟವಾಗಿತ್ತು ಅದನ್ನು ಸಹ ಮೇಲೆ ಹಾಕಿದ್ದೇನೆ ದಿನಕಳೆದಂತೆ ಧಾರ್ಮಿಕ ಪ್ರಭಾವ ಕಡಿಮೆ ಆಗುತ್ತಿದೆ ಆದರೂ ಸಹ ಗೋಕಾಕ ನಗರದ ಕಿಲ್ಲಾ ದಲ್ಲಿ ಏಳು ದಿವಸ ಗಣೇಶ ಹಬ್ಬದ ಆಚರಣೆ ಸರಳವಾಗಿ ಆಚರಿಸಲಾಗುತ್ತದೆ,
ಲೇಖಕರು: ಶ್ರೀಕಾಂತ ವಿ ಮಹಾಜನ ಸಾಮಾಜಿಕ ಕಾರ್ಯಕರ್ತರು ಘಟಪ್ರಭಾ ಮತ್ತು ಗೋಕಾಕ ಮೊ 9449201076
e mail shrikantlic@gmail,com