ಅಮೆರಿಕದಲ್ಲಿ ವಿದೇಶಿ ಸಿನಿಮಾಗೆ ಶೇ. 100 ಟ್ಯಾಕ್ಸ್

Ravi Talawar
ಅಮೆರಿಕದಲ್ಲಿ ವಿದೇಶಿ ಸಿನಿಮಾಗೆ ಶೇ. 100 ಟ್ಯಾಕ್ಸ್
WhatsApp Group Join Now
Telegram Group Join Now

ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಈಗ ಅವರು ಹಾಲಿವುಡ್​ನ ಉಳಿಸಲು ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಅಮೆರಿಕದ ಹೊರಗೆ ನಿರ್ಮಾಣ ಆಗುವ ಎಲ್ಲಾ ಸಿನಿಮಾಗಳಿಗೆ ಶೇ.100 ತೆರಿಗೆ ವಿಧಿಸಲು ಡೊನಾಲ್ಡ್ ಟ್ರಂಪ್ ರೆಡಿ ಆಗಿದ್ದಾರೆ. ಅಷ್ಟೇ ಅಲ್ಲ, ಹಾಲಿವುಡ್ ಸಂಕಷ್ಟದಲ್ಲಿ ಇದ್ದು, ಅದನ್ನು ಉಳಿಸಲು ಈ ಕ್ರಮ ಕೈಗೊಂಡಿದ್ದಾಗಿ ಅವರು ಹೇಳಿದ್ದಾರೆ. ಅಂದರೆ, ಈಗ ಅಮೆರಿಕದಲ್ಲಿ ಭಾರತೀಯ ಸಿನಿಮಾಗಳನ್ನು ನೋಡಬೇಕು ಎಂದರೆ ಅದು ದುಬಾರಿ ಆಗಲಿದೆ.

‘ಅಮೆರಿಕದ ಹೊರಗೆ ತಯಾರಾಗುವ ಎಲ್ಲಾ ಚಿತ್ರಗಳ ಮೇಲೆ ಹೊಸ ಸುಂಕಗಳನ್ನು ವಿಧಿಸಲಾಗುತ್ತಿದೆ. ಅಮೆರಿಕದ ನಿರ್ಮಾಪಕರು ಮತ್ತು ಸ್ಟುಡಿಯೋಗಳು ವಿದೇಶದಲ್ಲಿ ಕೆಲಸ ಮಾಡುವ ಪ್ರವೃತ್ತಿಯಿಂದ ಹಾಲಿವುಡ್ ಹಾಳಾಗುತ್ತಿದೆ’ ಎಂದು ಟ್ರಂಪ್ ಅವರು ಅಮೆರಿಕದ ಶ್ವೇತ ಭವನದಲ್ಲಿ ಹೇಳಿದ್ದಾರೆ.

‘ತುಂಬಾನೇ ವೇಗವಾಗಿ ಅಮೆರಿಕದಲ್ಲಿ ಸಿನಿಮಾ ಉದ್ಯಮ ಸಾಯುತ್ತಿದೆ. ನಮ್ಮ ಚಲನಚಿತ್ರ ನಿರ್ಮಾಪಕರು ಮತ್ತು ಸ್ಟುಡಿಯೋಗಳನ್ನು ಅಮೆರಿಕದಿಂದ ದೂರ ಸೆಳೆಯಲು ಇತರ ದೇಶಗಳು ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ನೀಡುತ್ತಿವೆ. ಹಾಲಿವುಡ್ ಮತ್ತು ಅಮೆರಿಕದ ಇತರ ಹಲವು ಪ್ರದೇಶಗಳು ಧ್ವಂಸಗೊಳ್ಳುತ್ತಿವೆ. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article