ಸ್ವೀಡನ್​ನ ಶಾಲೆ ಮೇಲೆ ಗುಂಡಿನ ದಾಳಿ: 10 ಮಂದಿ ಮರಣ, ಐವರು ಗಾಯ

Ravi Talawar
ಸ್ವೀಡನ್​ನ ಶಾಲೆ ಮೇಲೆ ಗುಂಡಿನ ದಾಳಿ: 10 ಮಂದಿ ಮರಣ, ಐವರು ಗಾಯ
WhatsApp Group Join Now
Telegram Group Join Now

ಸ್ವೀಡನ್​ನ ಶಾಲೆಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, 10 ಮಂದಿ ಸಾಔನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ದಾಳಿ ನಡೆಸಿದವರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುದ್ದಿ ಸಂಸ್ಥೆ ರಾಯ್ಟರ್ಸ್​ ಪ್ರಕಾರ, ಕೇಂದ್ರ ಒರೆಬ್ರೊ ನಗರದ ಶಾಲೆಯ ಮೇಲೆ ದಾಳಿ ನಡೆಸಿದೆ. ದಾಳಿಕೋರ ಮನಬಂದಂತೆ ಗುಂಡು ಹಾರಿಸಿದ್ದಾನೆ. ಸ್ವೀಡನ್​ನಲ್ಲಿ ಈ ನಗರವನ್ನು ಸುರಕ್ಷಿತ ನಗರವೆಂದೇ ಪರಿಗಣಿಸಲಾಗಿತ್ತು. ಗುಂಡಿನ ದಾಳಿಯಿಂದ ಜನರು ಆಘಾತಕ್ಕೊಳಗಾಗಿದ್ದಾರೆ.

ಶಸ್ತ್ರಸಜ್ಜಿತ ವ್ಯಕ್ತಿ ಒಬ್ಬರೇ ಈ ಕೆಲಸವನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಭಯೋತ್ಪಾದಕರ ಕೈವಾಡವಿದ್ದಂತೆ ತೋರುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ರಾಜಧಾನಿ ಸ್ಟಾಕ್‌ಹೋಮ್‌ನಿಂದ ಪಶ್ಚಿಮಕ್ಕೆ 200 ಕಿಮೀ (124 ಮೈಲುಗಳು) ದೂರದಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸ್ವೀಡಷ್ ಇತಿಹಾಸದಲ್ಲಿ ನಡೆದ ಅತ್ಯಂತ ಕೆಟ್ಟ ಸಾಮೂಹಿಕ ಗುಂಡಿನ ದಾಳಿ ಎಂದು ಪ್ರಧಾನಿ ಉಲ್ಫ್​ ಕ್ರಿಸ್ಟಿರ್ಸನ್ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article