ಸರ್ಕಾರದಿಂದ ಮಂಜೂರಾದ ಕೃಷಿ ಭೂಮಿ ಕಬ್ಬಳಿಕೆ : ಚರಕುಂಟೆ ಗ್ರಾಮದ 10 ರೈತರ ಆರೋಪ 

Ravi Talawar
ಸರ್ಕಾರದಿಂದ ಮಂಜೂರಾದ ಕೃಷಿ ಭೂಮಿ ಕಬ್ಬಳಿಕೆ : ಚರಕುಂಟೆ ಗ್ರಾಮದ 10 ರೈತರ ಆರೋಪ 
WhatsApp Group Join Now
Telegram Group Join Now
 ಬಳ್ಳಾರಿ ಜುಲೈ 14: ಸತ್ತವರ ಹೆಸರಿನಲ್ಲಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ವಿಚಾರಣೆಯಲ್ಲಿ ಎಕ್ಸ್ಪರ್ಟ್ ಮಾಡಿ ಸರ್ಕಾರದಿಂದ ಮಂಜೂರಾದ ಭೂಮಿಯನ್ನು ಹೆಂಡತಿಯ ಮಕ್ಕಳ ಇತರೆ ಯಾವುದೇ ಕುಟುಂಬ ಸದಸ್ಯರ ಸಹಿ ಇಲ್ಲದೆ ಅಕ್ರಮವಾಗಿ ಸರ್ಕಾರದಿಂದ ಮಂಜೂರಾದ ಜಮೀನನ್ನು ಎಂ ಗೋವರ್ಧನ್ ಎಂಬ ಬಳ್ಳಾರಿಯ ಪ್ರಭಾವಿ ವ್ಯಕ್ತಿಯೊಬ್ಬರು ನಮ್ಮ ಜಮೀನನ್ನು  ಕಂಬಳಿಸಿದ್ದಾರೆ ಎಂದು ಚರಕುಂಟೆ  ಗ್ರಾಮದ ರೈತರ ಆರೋಪಿಸಿ ಜಿಲ್ಲಾ ಎಸ್ ಪಿ ಅವರಿಗೆ ದೂರನ್ನು ಸಲ್ಲಿಸಿದ್ದಾರೆ.
 ದೂರನ್ನು ಸಲ್ಲಿಸಿ ಮಾತನಾಡಿದ ಸಂತ್ರಸ್ತ ರೈತರು, ಕಳೆದ 35 ವರ್ಷಗಳ ಹಿಂದೆ ನಮ್ಮ ಕುಟುಂಬಸ್ಥರ ಹೆಸರಿಗೆ ಸರ್ಕಾರದಿಂದ 1.26 ಎಕರೆ ಜಮೀನು ಮಂಜೂರಾಗಿದ್ದು ಈ ಜಮೀನಿನಲ್ಲಿ ಅಂದಿನಿಂದ ಇಂದಿನವರೆಗೆ ಉಳುಮೆ ಏನು ಮಾಡಿಕೊಂಡು ನಮ್ಮ ಕುಟುಂಬಗಳನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದೇವೆ, ಆದರೆ ಎಂ ಗೋವರ್ಧನ್ ಎಂಬ ಬಳ್ಳಾರಿ ನಿವಾಸಿಯೊಬ್ಬರು ನಾನು ಈ ಜಮೀನನ್ನು ಖರೀದಿಸಿದ್ದೇನೆ ಎಂದು ನ್ಯಾಯಾಲಯದಲ್ಲಿ ನಮ್ಮ ಕುಟುಂಬದ ಸತ್ತವರ ಮೇಲೆ ಕೇಸ್ ದಾಖಲಿಸಿ ಅವರಿಗೆ ನೋಟಿಸ್ ನೀಡಿರುತ್ತಾರೆ. ಸತ್ತ ವ್ಯಕ್ತಿಗಳು ಹೇಗೆ ನೋಟಿಸ್ ಸ್ವೀಕರಿಸಲು ಸಾಧ್ಯ? ಇದನ್ನೇ ಬಂಡವಾಳವನ್ನಾಗಿಸಿಕೊಂಡ ಅವರು ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದಾರೆಂದು  ಎಕ್ಸ್ ಪಾರ್ಟಿ ಮಾಡಿ ಜಮೀನನ್ನು ತನ್ನ ಹೆಸರಿಗೆ ಕೋರ್ಟ್ ಕಮಿಷನ ಮೂಲಕ ನೋಂದಣಿ ಮಾಡಿಸಿಕೊಂಡಿರುತ್ತಾರೆ.
 ಇದು ಯಾವುದು ಅಸಲಿ ರೈತರ ಗಮನಕ್ಕೆ ಬಂದಿರುವುದಿಲ್ಲ ಕಳೆದ 2023 ರಂದು ಪಹಣಿ ಪತ್ರಿಕೆಯಲ್ಲಿ ಇದ್ದಕ್ಕಿದ್ದಂತೆ ಎಂ ಗೋವರ್ಧನ್ ಹೆಸರು ನಮೂದಾಗಿರುವುದು ಗಮನಕ್ಕೆ ಬಂದಿರುತ್ತದೆ. ಆಗ ನಾವುಗಳು ಎಚ್ಚೆತ್ತುಕೊಂಡು ತಹಸೀಲ್ದಾರ್ ಮತ್ತು ಸಹಾಯಕ ಆಯುಕ್ತರನ್ನು  ಸಂಪರ್ಕಿಸಿದಾಗ ನಿಮ್ಮ ಭೂಮಿ ಮಾರಾಟ ಮಾಡಲಾಗಿದೆ ಎಂದು ನಮಗೆ ತಿಳಿಸಿರುತ್ತಾರೆ. ಆಗ ನಾವುಗಳು ಸಹಾಯಕ ಆಯುಕ್ತರ  ಕೋರ್ಟ್ ನಲ್ಲಿ ಕೇಸ್ ಅನ್ನು ದಾಖಲಿಸಿ ಕೊಂಡು ನಮ್ಮ ಭೂಮಿ ನಮಗೆ ಕೊಡಿಸುವಂತೆ ಮನವಿ ಮಾಡಿಕೊಂಡಿರುತ್ತೇವೆ. ಮತ್ತು ಆ ಕೇಸ್ ಈಗ ವಿಚಾರಣೆ ಹಂತದಲ್ಲಿರುತ್ತದೆ. ಈಗ ಮುಂಗಾರು ಮಳೆ ಆರಂಭವಾಗಿದ್ದು ನಮ್ಮ ಜಮೀನನ್ನು ಉಳಿಮೆ ಮಾಡಿಕೊಂಡು ಬಿತ್ತನೆಗೆ ಹೋದಾಗ ಗೋವರ್ಧನ್ ಕಡೆಯ ಹತ್ತಾರು ಮಂದಿ ಬಂದು ಮಹಿಳೆಯರು ಎನ್ನದಂತೆ ನಮ್ಮ ಮೇಲೆ ದೌರ್ಜನ್ಯ ಎಸಗಿ ನಮ್ಮನ್ನು  ಕತ್ತು ಹಿಡಿದುಕೊಂಡು ಹೊಲದಿಂದ ಹೊರಗೆ ನೂಕಿರುತ್ತಾರೆ, ಮಹಿಳೆಯರು ವೃದ್ಧರು ಎನ್ನದಂತೆ ನಮ್ಮನ್ನು ಎಳೆದಾಡಿ ದೈಹಿಕವಾಗಿ ಮಾಡಿರುತ್ತಾರೆ. ವೃದ್ಧರು ಎಂಬ ಕಾರಣಕ್ಕೆ ನಿಮ್ಮನ್ನು ಬಿಡುತ್ತಿದ್ದೇವೆ ಇಲ್ಲವಾದಲ್ಲಿ ನಿಮ್ಮನ್ನು ಇದೇ ಹೊಲದಲ್ಲಿ ಹೊಡೆದು ಹಾಕುತ್ತಿದ್ದೇವೆ ಎಂದು ನಮ್ಮ ಮೇಲೆ ಪ್ರಾಣ ಬೆದರಿಕೆ ಆಗಿರುತ್ತಾರೆ ಎಂದು ಸಂತ್ರಸ್ತ ರೈತರು ಆರೋಪಿಸಿ ನಮಗೆ ನೀವಾದರೂ ನ್ಯಾಯ ಕೊಡಿಸಿ ಎಂದು ಜಿಲ್ಲಾ ಪೊಲೀಸ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಕೇಳಿಕೊಂಡಿದ್ದಾರೆ.
 ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಶೇಖಮ್ಮ, ಲಕ್ಷ್ಮಮ್ಮ, ಹನುಮಂತ,  ಪಾರ್ವತಿ, ಗೌರಮ್ಮ,  ನಾಗೇಂದ್ರಪ್ಪ,  ವೀರಬಸಪ್ಪ,, ಲಿಂಗಾರೆಡ್ಡಿ, ನಾಗೇಂದ್ರಪ್ಪ, ಹನಮಂತಪ್ಪ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article