ಉಕ್ರೇನ್ ದಾಳಿ ತೀವ್ರ; ರಷ್ಯಾದ ಕುರ್ಸ್ಕ್​ನಿಂದ 1 ಲಕ್ಷ 21 ಸಾವಿರ ಜನರ ಸ್ಥಳಾಂತರ

Ravi Talawar
ಉಕ್ರೇನ್ ದಾಳಿ ತೀವ್ರ; ರಷ್ಯಾದ ಕುರ್ಸ್ಕ್​ನಿಂದ 1 ಲಕ್ಷ 21 ಸಾವಿರ ಜನರ ಸ್ಥಳಾಂತರ
WhatsApp Group Join Now
Telegram Group Join Now

ಮಾಸ್ಕೋ : ಕುರ್ಸ್ಕ್ ಪ್ರದೇಶದ ಒಂಬತ್ತು ಗಡಿ ಜಿಲ್ಲೆಗಳಿಂದ 1,21,000 ಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ರಷ್ಯಾ ತುರ್ತು ಸಚಿವಾಲಯದ ಉಪ ವಕ್ತಾರ ಅರ್ತ್ಯೋಮ್ ಶರೋವ್ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ, 650 ಕ್ಕಿಂತ ಹೆಚ್ಚು ಜನ ಸ್ವಯಂಪ್ರೇರಿತವಾಗಿ ಸ್ಥಳವನ್ನು ತೊರೆದಿದ್ದಾರೆ ಅಥವಾ ಸಂಘಟಿತ ಗುಂಪುಗಳಲ್ಲಿ ಸುರಕ್ಷತೆಯೊಂದಿಗೆ ಪ್ರದೇಶದಿಂದ ಹೊರಗೆ ಬಂದಿದ್ದಾರೆ. ಜನರ ಸ್ಥಳಾಂತರ ಕಾರ್ಯಾಚರಣೆ ಈಗಲೂ ಮುಂದುವರೆದಿದೆ ಎಂದು ಶರೋವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸ್ಥಳಾಂತರಗೊಂಡ ವ್ಯಕ್ತಿಗಳನ್ನು ಅವರ ಸಂಬಂಧಿಕರ ಮನೆಗಳಿಗೆ ಅಥವಾ ತಾತ್ಕಾಲಿಕ ಆಶ್ರಯ ತಾಣಗಳಿಗೆ ಕಳುಹಿಸಲಾಗುತ್ತಿದೆ. ಕುರ್ಸ್ಕ್ ಪ್ರದೇಶದಲ್ಲಿ 84 ತಾತ್ಕಾಲಿಕ ಆಶ್ರಯಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ ಸದ್ಯ 6,500 ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದಾರೆ ಎಂದು ಅವರು ಹೇಳಿದರು. ರಷ್ಯಾದ 23 ಪ್ರದೇಶಗಳಲ್ಲಿ ಒಟ್ಟು 120 ತಾತ್ಕಾಲಿಕ ಆಶ್ರಯ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ ಸುಮಾರು 3,000 ಜನರು ವಾಸಿಸುತ್ತಿದ್ದಾರೆ ಎಂದು ಶರೋವ್ ಮಾಹಿತಿ ನೀಡಿದರು.

ಏತನ್ಮಧ್ಯೆ, ರಷ್ಯಾದಾದ್ಯಂತ 57 ವಿವಿಧ ಪ್ರದೇಶಗಳಲ್ಲಿ ಕುರ್ಸ್ಕ್ ಪ್ರದೇಶದಿಂದ ಸ್ಥಳಾಂತರಗೊಂಡವರಿಗೆ ಆಶ್ರಯ ನೀಡಲು 19,000 ಕ್ಕೂ ಹೆಚ್ಚು ಜನರಿಗೆ ಸ್ಥಳಾವಕಾಶ ಸಾಮರ್ಥ್ಯದ ಇನ್ನೂ 390 ತಾತ್ಕಾಲಿಕ ಆಶ್ರಯ ಶಿಬಿರಗಳು ಸಿದ್ಧವಾಗಿವೆ ಎಂದು ಅವರು ಹೇಳಿದರು.

ಉಕ್ರೇನ್ ಪಡೆಗಳು ಆಕ್ರಮಣಕಾರಿಯಾಗಿ ದಾಳಿ ನಡೆಸುವುದನ್ನು ಮುಂದುವರೆಸಿದ್ದು, ಎಲ್ಲಾ ದಾಳಿಗಳನ್ನು ಹಿಮ್ಮೆಟ್ಟಿಸಲಾಗಿದೆ ರಷ್ಯಾದ ರಕ್ಷಣಾ ಸಚಿವಾಲಯ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now
Share This Article