ನವದೆಹಲಿ, ಮೇ 08: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 08ನೇ ವೇತನ ಆಯೋಗದ ಶೀಘ್ರವೇ ಜಾರಿಗೆ ಕಾತರರಿಂದ ಕಾಯುತ್ತಿದ್ದಾರೆ. ಈ ಮಧ್ಯೆ IRTSA ಆಯೋಗಕ್ಕೆ ಸಂಬಂಧಿಸಿದಂತೆ ಪತ್ರ ಬರೆದು ಒಂದಷ್ಟು ಶಿಫಾರಸುಗಳನ್ನು ಮುಂದಿಟ್ಟಿತ್ತು. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರದಿಂದ ಪರಿಶೀಲನೆಯ ಅಪ್ಡೇಟ್ ಮಾಹಿತಿ ಸಿಕ್ಕಿದೆ.
8ವೇತನ ಆಯೋಗದ ನವೀಕರಣ ಸುದ್ದಿಗೆ ಕಾಯುತ್ತಿರುವ ಅಪಾರ ಸಂಖ್ಯೆಯ ಸರ್ಕಾರಿ ನೌಕರರಿಗೆ ಈ ಮಾಹಿತಿ ಉಪಯುಕ್ತವಾಗಿದೆ. ವೇತನ ಆಯೋಗ ಜಾರಿ ಸಂಬಂಧಿಸಂತೆ ಕೇಂದ್ರ ಸರ್ಕಾರದ ಮುಂದೆ ಔಪಚಾರಿಕ ಪಸ್ತಾವನೆ ಬಂದಿದೆ. ಆದಷ್ಟು ಶೀಘ್ರವೇ ಕೇಂದ್ರ ಸರ್ಕಾರ ಪ್ರಸ್ತಾವವನ್ನು ಪರಿಶೀಲನೆಗೆ ಒಳಪಡಿಸಿ ಸಿಹಿ ಸುದ್ದಿ ನೀಡಲಿದೆ.
ಕೇಂದ್ರ ಸರ್ಕಾರವು ಹೊಸ ವೇತನ ಆಯೋಗವನ್ನು ಶೀಘ್ರವೇ ಜಾರಿ ಮಾಡುವಂತೆ ಆಗ್ರಹಿಸಿ ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘ (IRTSA) ದ ಸದಸ್ಯರು ಆಯೋಗ ಸೌಲಭ್ಯ, ನೌಕರರಿಗೆ ತಲುಪುವಲ್ಲಿ ಉಂಟಾಗುತ್ತಿರುವ ಸಮಸ್ಯೆ, ಕುಂದುಕೊರತೆಗಳು, ಸರಳವಾಗಿ ಪರಿಹರಿಸುವ ನಿಟ್ಟಿನಲ್ಲಿ ಏನೆಲ್ಲ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು.
ಕೇಂದ್ರ ಸರ್ಕಾರವು ಏಳನೇ ವೇತನ ಆಯೋಗದಲ್ಲಿ ಉಂಟಾದ ಕೆಲವು ಗೊಂದಲ, ವೇತನ ಸಮಸ್ಯೆ ಇಲ್ಲಿ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು ಎಂದೆಲ್ಲ ಹಲವು ಶಿಫಾರಸುಗಳನ್ನು ಮಾಡಿದ್ದಾರೆ. ಭವಿಷ್ಯದಲ್ಲಿ ಯಾವುದೇ ದೋಷವಿಲ್ಲದ ವ್ಯವಸ್ಥೆ ಜಾರಿಗೆ ಬರಬೇಕು ಎಂಬ ಅವರು ಆಶಯ ವ್ಯಕ್ತಪಡಿಸಿದ್ದರು.
10 ವರ್ಷದ ಅವಧಿಗೆ ಆಯೋಗ ರಚನೆ 8ನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರ ಹತ್ತು ವರ್ಷಗಳ ಅವಧಿಗೆ ಜಾರಿ ಮಾಡಲಿದೆ. ಸದ್ಯ ಏಳನೇ ವೇತನ ಆಯೋಗ ಜಾರಿ ಇದ್ದು, ಇದರಿಂದ ಸಿಗುವ ಕೊನೆಯ ಸೌಲಭ್ಯಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಘೋಷಿಸಿದೆ. ತುಟ್ಟಿಭತ್ಯೆ (DA hike), ತುಟ್ಟಿ ಪರಿಹಾರ (DR hike) ಸೇರಿದಂತೆ ಕೆಲವು ಸೌಲಭ್ಯಗಳು ಕಳೆದ ಜನವರಿಗೆ 1ರಿಂದ ಜಾರಿಗೆ ಬರುವಂತೆ ಅನುಮೋದಿಸಿದೆ.
ಮುಂದಿನ ದಿನಗಳಲ್ಲಿ ಹೊಸ ವೇತನ ಆಯೋಗ ಜಾರಿಗೆ ಬರಬೇಕಿದೆ. ಇದನ್ನು ಶೀಘ್ರವೇ ಜಾರಿ ಮಾಡಬೇಕು. ಹಳೆಯ ಆಯೋಗದಲ್ಲಿದ್ದ ನ್ಯೂನ್ಯತೆಗಳನ್ನು ಸರಿಪಡಿಸಬೇಕು. ನೌಕರರಿಗೆ ಇರುವ ಹಾಲಿ ಸಮಸ್ಯೆ ಕೊನೆಗಾಣಿಸಬೇಕು. ಉದ್ಯೋಗ ಬಡ್ತಿ, ವರ್ಗಾವಣೆ, ವೇತನ, ಭತ್ಯೆ ವಿಚಾರಗಳಲ್ಲಿ ಸಮಸ್ಯೆ ಮುಂದೆ ಆಗದಂತೆ ಮಾಡಬೇಕು. ಎಂಟನೇ ವೇತನ ಆಯೋಗದ ಜಾರಿಗೆ ಇನ್ನೂ ಅಧಿಕ ಸಮಯ ಇದೆ. ಸಮಸ್ಯೆಗಳ ಪರಿಹರಕ್ಕಾಗಿ ಈ ಸಮಯವನ್ನು ಬಳಸಿಕೊಳ್ಳಬೇಕು ಎಂದು IRTSA ಸದಸ್ಯರು ಮನವಿ ಮಾಡಿದ್ದಾರೆ.
HRA ಹೆಚ್ಚಳ ಬಗ್ಗೆ ಕೇಂದ್ರ ಮೌನ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗಕ್ಕೆ ಸೌಲಭ್ಯಗಳಾದ ತುಟ್ಟಿಭತ್ಯೆಯನ್ನು ಶೇ.50ಕ್ಕೆ ಹೆಚ್ಚಿಸಿ ಅನುಮೋದಿಸಿತು. ಇದರಲ್ಲಿ ಸಮಸ್ಯೆ ಇಲ್ಲದಿದ್ದರೂ, ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಹೆಚ್ಚಳ ಕುರಿತು ಕೆಲವು ಸಮಸ್ಯೆಗಳಿವೆ ಎಂದು ನೌಕರರು ಹೇಳಿತ್ತಿದ್ದಾರೆ. ನಿಯಮಗಳ ಪ್ರಕಾರ ಡಿಎ ಜತೆ ಎಚ್‌ಆರ್‌ಎ ಏರಿಕೆ ಆಗಬೇಕು. ಆದರೆ ಈ ಬಗ್ಗೆ ಕೇಂದ್ರ ಮೌನವಾಗಿರುವುದು ನೌಕರರ ಆತಂಕಕ್ಕೆ ಕಾರಣವಾಗಿದೆ. ಹೊಸ ಆಯೋಗದಿಂದ ಈ ರೀತಿ ಆಗದಂತೆ ನಿಯಮ ರೂಪಿಸಬೇಕು ಎಂದು ಕೋರಿದ್ದಾರೆ.