ಸ್ವ ಉದ್ಯೋಗ ತರಬೇತಿ ಪಡೆದು ಸ್ವಾವಲಂಬಿಯಾಗಿ ಬದುಕಿ: ಶೈಲಾ ಜೆ

Ravi Talawar
 ಸ್ವ ಉದ್ಯೋಗ ತರಬೇತಿ ಪಡೆದು ಸ್ವಾವಲಂಬಿಯಾಗಿ ಬದುಕಿ: ಶೈಲಾ ಜೆ
WhatsApp Group Join Now
Telegram Group Join Now
ಬೈಲಹೊಂಗಲ:  ತಾಲೂಕಿನ  ಅಮಟೂರು  ಕಾರ್ಯಕ್ಷೇತ್ರ  ಗ್ರಾಮದಲ್ಲಿ  ಶ್ರೀ ಧರ್ಮಸ್ಥಳ ಗ್ರಾಮೀನ ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಶ್ರೀ ಭಾರತಾಂಬೆ  ಜ್ಞಾನವಿಕಾಸ ಕೇಂದ್ರದಲ್ಲಿ ಗುರುವಾರದಂದು  ಸ್ವ ಉದ್ಯೋಗ ಪ್ರೇರಣಾ ಶಿಬಿರ   ಕಾರ್ಯಕ್ರಮವು ನಡೆಯಿತು.
     ಕಾರ್ಯಕ್ರಮದ  ಅಧ್ಯಕ್ಷತೆಯನು ಶ್ರೀಮತಿ ಸಂಗೀತ ಸೋಗಿನಮನಿ, ಉದ್ಘಾಟಕರಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ಶ್ರೀಮತಿ ನೀಲವ್ವ ಆನಿಕಿವಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಆರ್ ಎಸ್ ಟಿ  ಉಪನ್ಯಾಸಕರಾದ ಶ್ರೀಮತಿ ರಾಜೇಶ್ವರಿ ಹಾಗೂ ಬೈಲಹೊಂಗಲ  ತಾಲೂಕಿನ ಜ್ಞಾನ ವಿಕಾಸದ ಸಮನ್ವಧಿಕಾರಿ ಶ್ರೀಮತಿ ಶೈಲಾ ಜೆ  ಇವರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
        ಪ್ರಾಸ್ತಾವಿಕವಾಗಿ ತಾಲೂಕಿನ ಸಮನ್ವಧಿಕಾರಿ ಶ್ರೀಮತಿ ಶೈಲಾ ಜೆ  ಮಾತನಾಡಿ  ಜ್ಞಾನವಿಕಾಸ ಕಾರ್ಯಕ್ರಮಗಳ ಮೂಲಕ ನಮಗೆಲ್ಲಾ ಹತ್ತು ಹಲವು ಕಾರ್ಯಕ್ರಮಗಳನ್ನು ಲಭಿಸುತ್ತಿದ್ದು  ಮಾತೃಶ್ರೀ ಅಮ್ಮನವರ ಹಾಗೂ ಪೂಜ್ಯ ಖಾವಂದರ ಆಶಯದಂತೆ ಮಹಿಳೆಯರ ಸಬಲೀಕರಣಕ್ಕಾಗಿ, ಮಹಿಳೆಯರು ಸ್ವಾವಲಂಬಿಯಾಗಿ, ಕುಟುಂಬದ ಆರ್ಥಿಕತೆಯಲ್ಲಿ ಸಹಕರಿಸಲು ಸ್ವ-ಉದ್ಯೋಗ ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದ್ದು ಅದರ ಸಲುವಾಗಿ  ನೀಡುವ ತರಬೇತಿಯನ್ನು ಅಚ್ಚುಕಟ್ಟಾಗಿ ನೋಡಿಕೊಂಡು ಮುಂಬರುವ ದಿನಗಳಲ್ಲಿ ನೀವು ನಿಮ್ಮ ಜೀವನದಲ್ಲಿ ಒಂದು ಸ್ವ ಉದ್ಯೋಗವಾಗಿ ಪರಿವರ್ತಿಸಿಕೊಳ್ಳಬೇಕು, ಹಲವಾರು ತರಬೇತಿ ಆಯೋಜನೆ ಮಾಡುತ್ತಿದ್ದು, ಪುರುಷರಿಗೂ ಮತ್ತು ಮಹಿಳೆಯರಿಗೆ ಪೂರಕವಾದ ಉಚಿತ ತರಬೇತಿಗಳನ್ನು ಪಡೆದುಕೊಳ್ಳಿರಿ ಎಂದು ಹೇಳಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ರಾಜೇಶ್ವರಿ ದೇವಲಾಪುರ ಮಾತನಾಡಿ  ಅವರು ಸ್ವ ಉದ್ಯೋಗಗಳನ್ನು ಹೇಗೆ ಕೈಗೊಳ್ಳುವುದು, ಎದುರಾಗುವ ಸಮಸ್ಯೆಗಳು, ಸವಾಲುಗಳು, 43 ವಿಧದ ರೀತಿಯ ಸ್ವ ಉದ್ಯೋಗಗಳ ಕುರಿತು ಮಾಹಿತಿ, ಹಾಗೂ ತರಬೇತಿ ಸಂಸ್ಥೆಯಲ್ಲಿ ನೀಡುವಂತಹ ವಿವಿಧ ರೀತಿಯ ಉದ್ಯೋಗಗಳ ತರಬೇತಿ ಕುರಿತು ಮಾಹಿತಿ ನೀಡಿದರು.ಹಾಗೂ ತರಬೇತಿ ಪಡೆದುಕೊಂಡು ಪ್ರತಿ ತರಬೇತಿಯ ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
     ಈ ಸಂದರ್ಭದಲ್ಲಿ  ಕಾರ್ಯಕ್ರಮದ ನಿರೂಪಣೆ ಸೇವಾಪ್ರತಿನಿದಿ ಕುಮಾರಿ ಐಶ್ವರ್ಯ, ಶ್ರೀ ಶೈಲ್ ಚಿನಿವಾಲರ   ಸ್ವಾಗತ, ರತ್ನ ವಂದನೆ  ಲಕ್ಷ್ಮಿ ನೆರವೇರಿಸಿದರು. ಈ ಸಂದರ್ಭ  ಕೇಂದ್ರದ ಸರ್ವ ಸಂಘದ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article