ಸ್ವಾತಂತ್ರ ಪೂರ್ವ ಸ್ವತಂತ್ರ ನಂತರ ಪತ್ರಕರ್ತರ ಪಾತ್ರ ದೊಡ್ಡದು :ಯು ಟಿ. ಖಾದರ 

Ravi Talawar
 ಸ್ವಾತಂತ್ರ ಪೂರ್ವ ಸ್ವತಂತ್ರ ನಂತರ ಪತ್ರಕರ್ತರ ಪಾತ್ರ ದೊಡ್ಡದು :ಯು ಟಿ. ಖಾದರ 
WhatsApp Group Join Now
Telegram Group Join Now
ಮಡಗಾಂವ ( ಗೋವಾ )ಫೆ 14.ಸ್ವಾತಂತ್ರ್ಯ ಹೋರಾಟದಲ್ಲಿ  ಅಂದಿನ ಪತ್ರಕರ್ತರು ಸ್ವಾತಂತ್ರ್ಯ ಹೋರಾಟದಲ್ಲಿ  ತಮ್ಮ ವರದಿ ಮಾಡಿ ಅನೇಕರು ಜೀವ ತ್ಯಾಗ ಮಾಡಿದ ಉದಾಹರಣೆ ಇದ್ದು  ಸ್ವತಂತ್ರ ನಂತರವೂ ಅವರನ್ನು ಕಾರ್ಯ ದೇಶ ಬೆಳವಣಿಗೆಯಲ್ಲಿ  ರಾಜಕಾರಣಿಗಳ ಬೆಳವಣಿಗೆ ಮತ್ತು ಹಿನ್ನಡೆಯಲ್ಲಿ ಪತ್ರಕರ್ತರ ಪಾತ್ರ ಮಂಚೂಣಿಯಲ್ಲಿ ಕೆಲಸ ಮಾಡುತ್ತಿದೆ ಎಂದು  ಕರ್ನಾಟಕ  ಸರ್ಕಾರದ ವಿಧಾನ ಸಭಾ ಅಧ್ಯಕ್ಷರಾದ ಯು ಟಿ. ಖಾದರ ಹೇಳಿದರು.
    ಅವರು ಶುಕ್ರವಾರದಂದು  ಗೋವಾ ರಾಜ್ಯದ ಮಡಗಾಂವ ಹತ್ತಿರ ಕೊಲೀಮಾರ ಬೀಚ್ ರೆಸಾರ್ಟ್ನಲ್ಲಿ ಆಯೋಜಿಸಲಾಗಿದ್ದ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಮತ್ತು ಕರ್ನಾಟಕ ಪತ್ರಕರ್ತರ ಸಂಘ  ಮತ್ತು ಗೋವಾ ಯೂನಿಯನ್ ಆಫ್ ಜರ್ನಲಿಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ  ರಾಷ್ಟ್ರೀಯ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಮಾತನಾಡಿ ಕರ್ನಾಟಕ ಸರ್ಕಾರ ಪ್ರಸಕ್ತ ರಾಜ್ಯದ ಎಲ್ಲ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪ್ರಯಾಣ ಮಾಡಿದ್ದು, ಮತ್ತು ರೂ. 3000/- ಇದ್ದ ನಿವೃತ್ತಿ ವೇತನವನ್ನು ರೂ. 12000/- ಮಾಡಿದ್ದು ಪತ್ರಕರ್ತರ ಅನುಕೂಲಕ್ಕೆ ಅನೇಕ ಕೆಲಸ ಕರ್ನಾಟಕ ಸರ್ಕಾರ ಮಾಡುತ್ತಿದೆ. ಇನ್ನು ಅನೇಕ ಕೆಲಸಗಳಿಗೆ ನನ್ನ ಕಾರ್ಯವ್ಯಪ್ತಿಯಲ್ಲಿ ಬರುವ ಪತ್ರಕರ್ತರ ಕೆಲಸಗಳನ್ನು ಮಾತವರ್ಜಿ ವಹಿಸಿ ತಮ್ಮ ಕೆಲಸಗಳಿಗೆ ಸ್ಪಂದಿಸುತ್ತೇನೆ ಎಂದು ಸ್ಪೀಕರ್ ಯು ಟಿ. ಖಾದರ ಹೇಳಿದರು.
      ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ  ಮಾತನಾಡಿ ಪತ್ರಕರ್ತರ ಹೋರಾಟದಲ್ಲಿ ಸರಿ ಇಲ್ವೋ ಅಥವಾ ರಾಜಕಾರಣಿಗಳು ಪತ್ರಕರ್ತರಿಗೆ     ಸ್ಪಂದಿಸುತ್ತಿಲ್ವೋ ಗೊತ್ತಾಗತಾ ಇಲ್ಲಾ. ಮೊದಲು ಪೇಪರ್ ಮಾಧ್ಯಮ ಮಾತ್ರ ಇತ್ತು ನಂತರ  ದೃಶ್ಯ ಮಾಧ್ಯಮ ಬಂತು, ನಂತರ ಈಗ ಸಾಮಾಜಿಕ ಜಾಲತಾಣ ಮಾಧ್ಯಮ, ವಯಕ್ತಿಕ ಮಾಧ್ಯಮ ರಚಿಸಿದ ಯು ಟ್ಯೂಬ್  ಹೀಗೆ ಹಲವಾರು ಮಾಧ್ಯಮದಿಂದ  ಉತ್ತಮ ಮಾಧ್ಯಮ ದ್ವಂದ್ವ ಪರಿಸ್ಥಿತಿಯಲ್ಲಿ ಇದೆ. ಬೆಳಿಗ್ಗೆ ಪತ್ರಿಕಾ ವಿತರಕರ ಬರುವಿಕೆಗೆ ಹಾದಿ ಕಾಯುತ್ತಿದ್ದ ಯುಗ ಇತ್ತು. ಆಗ ಓದುಗರ ಸಂಖ್ಯೆ ಹೆಚ್ಚಿತ್ತು  ಆಗ ಮೊಬೈಲ್, ದೃಶ್ಯ ಮಾಧ್ಯಮ ಚಲಾವಣೆಗೆ ಬಂದಿರಲಿಲ್ಲ ಆದರೆ  ಈಗ ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣ ದಿಂದ ಈಗಿನ ಸುದ್ದಿ ಈಗಲೇ ಪ್ರಕಟವಾಗುತ್ತಿದ್ದು ಹೀಗಾಗಿ ಪತ್ರಕರ್ತರು ತೀವ್ರ ತಿಂದರೆ ಅನುಭವಿಸುತ್ತಿದ್ದಾರೆ.ನೀವು ಅನುಭವಿಸುತ್ತಿರುವ  ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ, ರಕ್ಷಣೆ ಮಾಡುವ ಕೆಲಸ ಆಗಬೇಕು.ನಿಮ್ಮ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ  ಸಂಬಂಧಪಟ್ಟ ಅಧಿಕಾರಿಗಕೊಂಡಿಗೆ ಮಾತನಾಡಿ ತಮ್ಮ ಬೆಂಬಲಿಗನಾಗಿ ನಾನು ಇದ್ದೇನೆ ಎಂದರು.
    ಶೇಗುಣಸಿ ಮಹಾಂತ ಪ್ರಭು ಮಹಾಸ್ವಾಮಿಗಳು ಮಾತನಾಡಿ ಸಮಾಜದ ನೆಲದ ಸ್ವಾಸ್ತ್ಯ ಕಾಪಾಡಿ ಸಮಾಜದ ಸುಧಾರಣೆಗೆ ಪತ್ರಕರ್ತರು ಶ್ರಮಿಸುತ್ತಿದ್ದು ಅವರ ಒಳಿತಿಗೆ ಸರ್ಕಾರ, ರಾಜಕಾರಣಿಗಳು ಕೆಲಸ ಮಾಡಬೇಕು ಎಂದರು.
    ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ರಾಷ್ಟ್ರೀಯ ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮುರಘೇಶ ಶಿವಪೂಜಿ ಮಾತನಾಡಿ  ಹಲವಾರು ವರ್ಷಗಳಿಂದ ನಮ್ಮ ಸಂಘದ ಸುಮಾರು ಜನ ಸೇರಿ ಸಂಘವನ್ನು  ಈ ಹಂತಕ್ಕೆ ತಂದಿದ್ದು ಅಪಘಾತ ವಿಮೆ 1 ಲಕ್ಷ ರೂ, 2 ಲಕ್ಷ ರೂ, ಈಗ 5 ಲಕ್ಷ ರೂಪಾಯಿಗಳನ್ನು ಮಾಡಿದ್ದು ಸಂಘಕ್ಕೆ ಇದುವರೆಗೂ ಸರ್ಕಾರದಿಂದ ಯಾವುದೇ ಸಹಕಾರ ಸಿಕ್ಕಿಲ್ಲ. ಅದಕ್ಕಾಗಿ ಸ್ಪೀಕರ್ ಖಾದರ್ ಅವರು ನಮ್ಮ ಸಂಘದ ಸದಸ್ಯರ ಸಮಸ್ಯೆಗಳ ಪರಿಹಾರಕ್ಕೆ ಮುಂದೆ ಬರಬೇಕು. ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಸದಾ ನಮ್ಮ ಕೆಲಸಗಳಿಗೆ ಸ್ಪಂದಿಸಿದ್ದಾರೆ ಮುಂದೆಯೂ ಸ್ಪಂದಿಸುತ್ತಾರೆ ಎಂದರು.
   ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಕೆ ಬಿ ಪಂಡಿತ ಪತ್ರಕರ್ತರ ಸಮಸ್ಯೆಗಳ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಸುಜನ ಚೌದರಿ,ದೇಶದ ನಾನಾ ರಾಜ್ಯಗಳ ಹಿರಿಯ ಪತ್ರಕತ್ರರು ಹಾಗೂ ನಿರ್ದೇಶಕರಾದ ಮದನಸಿಂಗ, ದೊರೈಸ್ವಾಮಿ, ಜಸ್ಮಿತ್ ಪಟ್, ಗಣಪತಿ ಪಾಂಡ್ಯ, ಡಾ. ಮಹೇಂದ್ರ ಮಧುರ, ನವೀನಕುಮಾರ, ಸುದೇಶ ಕುಮಾರ, ಆಶಿಫ್ ಚೌದರಿ  ಸೇರಿದಂತೆ ದೇಶದ ಅನೇಕ ರಾಜ್ಯಗಳ ಪತ್ರಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು  ಪ್ರೀಯ ಸುದೇಶ ನಿರೂಪಣೆ ಮಾಡಿದರು.
WhatsApp Group Join Now
Telegram Group Join Now
Share This Article