♦ಕಾಂಪೌಂಡ್ ವಾಲ್ ನಿರ್ಮಿಸಿ ಕೊಡಲು ಭರವಸೆ
ಬಳ್ಳಾರಿ ಜುಲೈ 21. ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶದ ಈದ್ಗಾ ರಸ್ತೆಯಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯ ಶಾಲೆಗೆ ಭೇಟಿ ನೀಡಿ ಶಾಲೆಯ ಕಾಂಪೌಂಡ್, ಕಟ್ಟಡ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ಪರಿಶೀಲಿಸಿದರು.
ಜೊತೆಗೆ 7, 8, 9 ಮತ್ತು 10ನೇ ತರಗತಿಯಲ್ಲಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಸಹ ಪರಿಶೀಲಿಸಿ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರ ಹನುಮಂತ ಚರಕುಂಟೆ, ಸದಸ್ಯರಾದ ರಾಧ, ಪುಟ್ಟ ರಂಗೇಗೌಡ ,ಮಲ್ಲಯ್ಯ ಮತ್ತು ಶಾಲಾ ಮುಖ್ಯ ಉಪಾಧ್ಯಾಯರು ಶಿಕ್ಷಕರು ಸೇರಿದಂತೆ ಇತರರಿದ್ದರು