ಸಮಾಜವನ್ನು ಸಂಘಟಿಸಿ ಬಲಿಷ್ಠವಾಗಿ ಕಟ್ಟೋಣ: ಪ್ರೇಮಕುಮಾರ ಮ್ಯಾಗೇರಿ ಕರೆ.

Pratibha Boi
ಸಮಾಜವನ್ನು ಸಂಘಟಿಸಿ ಬಲಿಷ್ಠವಾಗಿ ಕಟ್ಟೋಣ: ಪ್ರೇಮಕುಮಾರ ಮ್ಯಾಗೇರಿ ಕರೆ.
WhatsApp Group Join Now
Telegram Group Join Now
​ಮುದ್ದೇಬಿಹಾಳ: “ನಮ್ಮ ಸಮಾಜವನ್ನು ನಾವೆಲ್ಲರೂ ಒಗ್ಗೂಡಿ ಜಿಲ್ಲಾಮಟ್ಟದಲ್ಲಿ ಕಟ್ಟಿ ಬೆಳೆಸೋಣ. ಸಮಾಜದ ಸಂಘಟನೆಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಅತಿ ಮುಖ್ಯವಾಗಿದೆ,” ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ಜಿಲ್ಲಾಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ ಹೇಳಿದರು.
​ತಾಲ್ಲೂಕಿನ ಕಂದಗನೂರ ಗ್ರಾಮದಲ್ಲಿ ಶನಿವಾರ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ನೂತನ ಪದಾಧಿಕಾರಿಗಳ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ’ದಲ್ಲಿ ಅವರು ಮಾತನಾಡುತ್ತಿದ್ದರು.
​ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುವೆ:
​ಇದೇ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮಾಜ  ತಾಲ್ಲೂಕು ಅಧ್ಯಕ್ಷ ಶಂಕರಗೌಡ ಎಸ್. ಶಿವಣಗಿ, “ಸಮಾಜವು ನನ್ನ ಮೇಲೆ ನಂಬಿಕೆಯಿಟ್ಟು ನೀಡಿರುವ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ತಾಲ್ಲೂಕಿನಲ್ಲಿ ಹಂಡೇವಜೀರ ಸಮಾಜವನ್ನು ಕಟ್ಟಿ ಬೆಳೆಸಲು ಸರ್ವರ ಸಹಕಾರ ಅಗತ್ಯ,” ಎಂದು ತಿಳಿಸಿದರು.
​ಸಾನಿಧ್ಯ ಮತ್ತು ಆಶೀರ್ವಚನ
​ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇದಮೂರ್ತಿ ಮಹಾದೇವಯ್ಯ ಶಾಸ್ತ್ರಿ ಹಿರೇಮಠ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಶಿಕ್ಷಕ ಎಸ್.ಬಿ. ಹಂಡರಗಲ್ಲ ಅವರು ಸಮಾಜದ ಸ್ಥಿತಿಗತಿ ಹಾಗೂ ಸಂಘಟನೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
​ವೇದಿಕೆಯಲ್ಲಿ ಚಂದ್ರಶೇಖರಯ್ಯ ಹಿರೇಮಠ, ಶಿವಣಗೌಡ ಬಿರಾದಾರ, ಪಿ.ಕೆ.ಪಿ.ಎಸ್ ಅಧ್ಯಕ್ಷ ಶಿದ್ದರಾಮಯ್ಯ ಗಣಾಚಾರಿ, ಸಂಗಮೇಶ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಟಿ. ಬಿರಾದಾರ, ನಿಡಗುಂದಿ ವಿ.ಲಿ.ಹ. ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ ವಂದಾಲ, ಶಿದ್ರಾಮಪ್ಪ ಶಿವಣಗಿ, ಮಹಾಂತೇಶ ಬಿದರಕುಂದಿ, ಭೀಮನಗೌಡ ಪಾಟೀಲ,
​ಸಮಾಜದ ಕಾರ್ಯಧ್ಯಕ್ಷ ಭೀಮನಗೌಡ ಕೊಡಗಾನೂರ, ಅವ್ವನಗೌಡ, ಎಸ್.ಎಸ್. ಹುಗಾರ, ಸಾಹೇಬಗೌಡ ಪಾಟೀಲ, ಮೈಬುಬಸಾಬ ನಾಯ್ಕೋಡಿ, ಬಸವರಾಜ ಗಂಗೂರ, ಮಂಜುನಾಥಗೌಡ ಪೋಲಿಸ್ ಪಾಟೀಲ,ಬಸವರಾಜ ಡಮನಾಳ,ಗೌಡಪಗೌಡ ಪಾಟೀಲ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
​ನೂತನ ಪದಾಧಿಕಾರಿಗಳಿಗೆ ಸನ್ಮಾನ
​ಇದೇ ಸಂದರ್ಭದಲ್ಲಿ ಕಂದಗನೂರ ಗ್ರಾಮಸ್ಥರ ವತಿಯಿಂದ ನೂತನ ಪದಾಧಿಕಾರಿಗಳಾದ
ತಾಲ್ಲೂಕು ಅಧ್ಯಕ್ಷ
​ಎಸ್.ಎಸ್. ಶಿವಣಗಿ, ಭೀಮನಗೌಡ ಕೊಡಗಾನೂರ,
​ಮಲ್ಲನಗೌಡ ಬಿರಾದಾರ,ಎಂ ಬಿ ಬಿರಾದಾರ,​ಆರ್.ಎಸ್. ಬಿರಾದಾರ,​ಚಂದ್ರು ಢಮನಾಳ,​ಹುಲ್ಲನಗೌಡ ಬಿರಾದಾರ,​ಚಂದ್ರಶೇಖರ ಗೋನಾಳ,​ಸದಾನಂದ ಪಾಟೀಲ,​ಶೇಷಪ್ಪಗೌಡ ಪಾಟೀಲ,​ದ್ಯಾಮನಗೌಡ ಪಾಟೀಲ,
​ಮುಂತಾದವರನ್ನು ಅತ್ಯಂತ ಸಡಗರದಿಂದ ಸನ್ಮಾನಿಸಿ ಗೌರವಿಸಲಾಯಿತು.
​ಕಾರ್ಯಕ್ರಮದ ಆರಂಭದಲ್ಲಿ ಬಿ.ಸಿ. ಬಿರಾದಾರ ಸ್ವಾಗತಿಸಿದರು, ಬಾಬು ಹಿರೇಮಠ ಕಾರ್ಯಕ್ರಮ ನಿರೂಪಿಸಿದರು ಮತ್ತು ಎಸ್.ಆರ್. ಗೌಡರ ವಂದಿಸಿದರು
WhatsApp Group Join Now
Telegram Group Join Now
Share This Article