ಘಟಪ್ರಭಾ. ಇಲ್ಲಿನ ಶ್ರೀ ಮಧುಕರ ದೇಶಪಾಂಡೆ ಇನಾಮದಾರ ಸರಕಾರಿ ಪ್ರೌಢ ಶಾಲೆ ಮಲ್ಲಾಪುರ ಪಿ ಜಿ, ಘಟಪ್ರಭಾದ ಶಾಲಾ ಸುಧಾರಣಾ ಸಮಿತಿಯ ಆಜೀವ ಗೌರವ ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಕರ್ತ ಮತ್ತು ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಗೋಕಾಕ ತಾಲೂಕಾ ಉಪಾಧ್ಯಕ್ಷರಾದ ಶ್ರೀಕಾಂತ ವಿ ಮಹಾಜನ ಅವರು ನೇಮಕ ಮಾಡಲಾಗಿದೆ.
ಗೋಕಾಕ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ಶ್ರೀ ಮಧುಕರ ದೇಶಪಾಂಡೆ ಇನಾಮದಾರ ಸರಕಾರಿ ಪ್ರೌಢ ಶಾಲೆ ಎಸ್ ಡಿ ಎಮ್ ಸಿಯ ಗೌರವಾಧ್ಯಕ್ಷರಾದ ರಮೇಶ್ ಜಾರಕಿಹೊಳಿ ಅವರ ಸೂಚನೆಯಂತೆ ಯುವ ಮುಖಂಡ ಅಂಬಿರಾವ ಪಾಟೀಲ ಅವರ ಶಿಫಾರಸು ಮತ್ತು ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನ ದಲ್ಲಿ ಶಾಲೆಯ ಫಧಾನ ಗುರುಗಳಾದ ಅಶೋಕ ಮಲಬಣ್ಣವರ ಅವರು ಶ್ರೀಕಾಂತ ವಿ ಮಹಾಜನ ಅವರ ನೇಮಕವನ್ನು ಶುಕ್ರವಾರ ದಿನಾಂಕ 06-02-2026 ರಂದು ಶಾಲೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿ ಅವರನ್ನು ಎಲ್ಲಾ ಸದಸ್ಯರು ಸಿಬ್ಬಂದಿಯವರು ಸನ್ಮಾನಿಸಿದರು.


