ಬಳ್ಳಾರಿ ಜುಲೈ 10. ಬಳ್ಳಾರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ನಂದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು.
ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಇಂತಹ ಮಹತ್ವದ ಗುರು ಪೂರ್ಣಿಮೆಯ ಆಚರಣೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಇವರ ಜೊತೆಯಲ್ಲಿ ಶಾಲಾ ಕಾಲೇಜಿನ ಅಧ್ಯಕ್ಷರಾದ ವಿ. ಗಾಂಧಿ, ವಿ. ರಮಣ ಕುಮಾರ, ಮುರಳಿಕೃಷ್ಣ, ಹರಿಕುಮಾರ್ ಕೆ. ಎಚ್, ಶ್ರೀಮತಿ ಸತ್ಯವಾಣಿ ಅ. ಭಾ. ಸಾ. ಪ. ಜಿಲ್ಲಾ ಅಧ್ಯಕ್ಷರು. ಶ್ರೀನಾಥ್ ಜೋಷಿ, ಅ.ಭಾ.ಸಾ.ಪ. ಬಳ್ಳಾರಿ. ತಾಲ್ಲೂಕು/ನಗರ ಅಧ್ಯಕ್ಷರು, ರಮೇಶ್ ಬಳ್ಳಾರಿ. ಜಿಲ್ಲಾ ಕಾರ್ಯದರ್ಶಿ, ರಾಘವೇಂದ್ರ ಯಾದವ್. ಅ.ಭಾ.ಸಾ.ಪ.ಜಿಲ್ಲಾ ಖಜಾಂಚಿ, ಶ್ರೀಮತಿ. ಚಂದ್ರಿಕ ಚಂದ್ರಕಾಂತ್, ಅ.ಭಾ.ಸಾ.ಪ ರಾಜ್ಯ ಮಹಿಳಾ ಸಾಹಿತ್ಯ ಪ್ರಕಾರ ಪ್ರಮುಖರು.ಅ.ಭಾ.ಸಾ.ಪ ಪದಾಧಿಕಾರಿಗಳು ಶ್ರೀಮತಿ ಪುಷ್ಪ ಚಂದ್ರಶೇಖರ, ಕಿಶೋರ್ ಅಂಗಡಿ, ಮಲ್ಲಿಕಾರ್ಜನ, ಸುಬ್ಬಾರೆಡ್ಡಿ, ಶ್ರೀಮತಿ ಸರಿತಾ, ಕೆ.ಲಕ್ಷ್ಮೀಕಾಂತ್ , ವಿನಯ್ ಚೌದರಿ ಶ್ರೀಮತಿ ರಾಜೇಶ್ವರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲಾ ಕಾಲೇಜಿನ ಅಧ್ಯಕ್ಷರಾದ ವಿ. ಗಾಂಧಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿಸಿ ಅಸಾಧ್ಯವಾದದ್ದನ್ನು ಸಾಧಿಸುವ ಶಕ್ತಿ ಗುರುವಿಗೆ ಮಾತ್ರ ಇದೆ. ಏಳು ದ್ವೀಪಗಳು ಮತ್ತು ಒಂಬತ್ತು ಖಂಡಗಳಲ್ಲಿ ಗುರುವಿಗಿಂತ ದೊಡ್ಡವರು ಯಾರೂ ಇಲ್ಲ ಗುರುಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಭಾಗವಹಿಸಿದ ಎಲ್ಲಾ ಗುರುಗಳಿಗೆ ಸನ್ಮಾನಿಸಲಾಯಿತು.
ನಿರೂಪಣೆಯನ್ನು ಪಿ.ಯು.ಸಿ ವಿದ್ಯಾರ್ಥಿನಿಯರು ನಡೆಸಿಕೊಟ್ಟರು. ವಂದನಾರ್ಪಣೆಯನ್ನು ಶ್ರೀಮತಿ ಆನ್ನಿರಂಜು ಅಬ್ರಹಾಂ ರವರು ತಿಳಿಸಿದರು.