ಧಾರವಾಡ: ಧರ್ಮಸ್ಥಳ ಭಾಗದಲ್ಲಿ ನಡೆದಿದೆ ಎನ್ನಲಾಗಿರುವ ಅಸಹಜ ಸಾವುಗಳ ಪ್ರಕರಣದ ಕುರಿತು ಸೂಕ್ತ ತನಿಖೆ ಆಗಲಿ ಎಂದು ಬಿಜೆಪಿ ಮುಖಂಡರಾದ ಸವಿತಾ ಅಮರಶೆಟ್ಟಿ ಆಗ್ರಹಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟ್ಯಂತರ ಭಕ್ತ ಸಮೂಹ ಹೊಂದಿರುವ ಧರ್ಮಸ್ಥಳ ಕುರಿತು ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುರಿತು ಅಪಪ್ರಚಾರ ಮಾಡುವುದು ಸರಿಯಲ್ಲ, ಸತ್ಯಾಸತ್ಯತೆ ಹೊರ ಬರಬೇಕು. ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು ಎಂದು ತಿಳಿಸಿದರು.
ಈ ವಿಷಯದಲ್ಲಿ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದಿಂದ ಕ್ಷೇತ್ರದ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳವು ಸ್ವಾಮಿ ಮಂಜುನಾಥನ ಪವಿತ್ರ ಸ್ಥಾನವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸವಿತಾ ಅಮರಶೆಟ್ಟಿ.ಕರಿಯಪ್ಪ ಅಮ್ಮಿನಭಾವಿ.ಕವಿತಾ ತೇರದಾಳ.ಮಂಜುಳಾ ಕಾಶಪ್ಪನವರ.ನಿರ್ಮಲಾ ಖನ್ನಿನಾಯ್ಕರ.ವಿಠ್ಠಲ ಯಡಳ್ಳಿ.ಉಪಸ್ಥಿತರಿದ್ದರು.